ಜಸ್ಪ್ರೀತ್ ಬುಮ್ರಾ ರಣಾರ್ಭಟ – 1 ಇನ್ನಿಂಗ್ಸ್.. 17 ವಿಕೆಟ್.. ಚರಿತ್ರೆ!
ಪರ್ತ್ ಟೆಸ್ಟ್ ಗೆಲ್ಲುತ್ತಾ ಭಾರತ?
ನ್ಯೂಜಿಲೆಂಡ್ ವಿರುದ್ಧ ತವರಿನಲ್ಲೇ ವೈಟ್ ವಾಶ್ ಆಗಿದ್ದ ಟೀಂ ಇಂಡಿಯಾಗೆ ಆಸ್ಟ್ರೇಲಿಯಾದಲ್ಲೂ ಮೊದಲ ಪಂದ್ಯದಲ್ಲೇ ಬಿಗ್ ಶಾಕ್ ಕಾದಿತ್ತು. ಬ್ಯಾಟಿಂಗ್ಗೆ ಇಳಿದಿದ್ದ ಭಾರತ ತಂಡದ ಟಾಪ್ ಆರ್ಡರ್ ಬ್ಯಾಟ್ಸ್ಮನ್ಸ್ ಪೆವಿಲಿಯನ್ ಪರೇಡ್ ನಡೆಸಿದ್ರು. ಬಟ್ ಬೌಲಿಂಗ್ ಶುರುವಾದ್ಮೇಲೆ ಕೊಂಚ ನಿಟ್ಟುಸಿರು ಬಿಡುವಂತಾಯ್ತು. ಬ್ಯಾಟಿಂಗ್ ಅಬ್ಬರ ನೋಡೋಕೆ ಕಾಯ್ತಿದ್ದವರಿಗೆ ಸಿಕ್ಕಿದ್ದು ಬೌಲರ್ಗಳ ರಣಾರ್ಭಟ. ಅದ್ರಲ್ಲೂ ಕೂಡ ನಮ್ಮ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅಂತೂ ಕಾಂಗರೂಗಳ ಮೇಲೆ ಸವಾರಿ ನಡೆಸಿದ್ರು. ಹಾಗಾದ್ರೆ ಪರ್ತ್ನ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಸ್ಟ್ರೆಂಥ್ ವೀಕ್ನೆಸ್ ಬಯಲಾಯ್ತಾ? ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಡ್ತಿರೋದೇಕೆ? ಬೌಲರ್ಸ್ ತಂತ್ರ ವರ್ಕೌಟ್ ಆಯ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: KL ರಾಹುಲ್ ಗೆ ಎಷ್ಟು ಅನ್ಯಾಯ? – ದುರಾದೃಷ್ಟನೋ Or ಮೋಸದಾಟನೋ?
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ನ ಮೊದಲ ದಿನದ ಮೊದಲ ಸೆಷನ್ನಲ್ಲೇ ಟೀಂ ಇಂಡಿಯಾ ಫ್ಯಾನ್ಸ್ ಟೆನ್ಷನ್ ಆಗಿದ್ರು. ಬೂಮ್ರಾ ನೇತೃತ್ವದ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳ್ದಾಗ ಬ್ಯಾಟರ್ಸ್ ಆಟ ನೋಡಿ ಹೋ ಈ ಮ್ಯಾಚ್ ಕೂಡ ಹೊಗೆನೇ ಅನ್ಕೊಳ್ತಿದ್ರು. ಅದಕ್ಕೆ ಕಾರಣ ರನ್ ಗಳಿಸೋಕೆ ಒದ್ದಾಡಿದ ಆಟಗಾರರು. ಏನಪ್ಪಾ ಇದು ಬ್ಯಾಟಿಂಗ್ ಲೈನಪ್ ಇಷ್ಟೊಂದು ವರ್ಸ್ಟ್ ಅನ್ಕೊಳ್ಳುವಾಗ್ಲೇ ಬೌಲರ್ಸ್ ಅಖಾಡಕ್ಕಿಳಿದಿದ್ರು. ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಪಲ್ಟಾ ಮಾಡಿದ್ರು.
ಜೈಸ್ವಾಲ್, ಪಡಿಕ್ಕಲ್ ಝೀರೋ.. ಕೊಹ್ಲಿ 5 ರನ್!
ಟೀಂ ಇಂಡಿಯಾ ಬ್ಯಾಟಿಂಗ್ ಶುರುವಾಗ್ತಿದ್ದಂತೆ ಕೇವಲ ಐದು ರನ್ಗಳಿಸುವಷ್ಟ್ರಲ್ಲೇ ಮೊದಲ ವಿಕೆಟ್ ಢಮಾರ್ ಆಗಿತ್ತು. ಯಶಸ್ವಿ ಜೈಸ್ವಾಲ್ 0 ಸುತ್ತಿ ವಿಕೆಟ್ ಒಪ್ಪಿಸಿದ್ರು. ಒನ್ ಡೌನ್ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಕೂಡ ಖಾತೆ ತೆರೆಯದೇ ಪೆವಿಲಿಯನ್ ಸೇರಿದ್ರು. ಎರಡನೇ ವಿಕೆಟ್ 14 ರನ್ಗೆ ಪತನವಾದರೆ ಮೂರನೇ ವಿಕೆಟ್ 32 ರನ್ಗೆ ಉರುಳಿತು. ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಾದ ಜೈಸ್ವಾಲ್ 8 ಬಾಲ್ ಎದುರಿಸಿ ಸೊನ್ನೆ ಸುತ್ತಿದರು. ದೇವದತ್ ಪಡಿಕ್ಕಲ್ 23 ಬಾಲ್ ಎದುರಿಸಿ ಸೊನ್ನೆ ಸುತ್ತಿದ್ದರು. ಇನ್ನು ಕ್ರಿಕೆಟ್ ಕಿಂಗ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ 12 ಬಾಲ್ ಎದುರಿಸಿ 5 ರನ್ಗೆ ಆಟ ಮುಗಿಸಿದರು. ಕನ್ನಡಿಗ ಕೆ.ಎಲ್.ರಾಹುಲ್ ಭರವಸೆ ಮೂಡಿಸಿದ್ದರಾದ್ರೂ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. 74 ಬಾಲ್ ಎದುರಿಸಿದ್ದ ರಾಹುಲ್ 26 ರನ್ಗಳಿಸಿದರು. ಕೊನೆಗೆ ಬಂದ ಧ್ರುವ್ ಜುರೇಲ್ 11 ರನ್ಗಳಿಸಿದರೆ, ವಾಷಿಂಗ್ಟನ್ ಸುಂದರ್ 4 ರನ್ಗೆ ಮೈದಾನದಿಂದ ಹೊರ ನಡೆದರು. ರಿಷಭ್ ಪಂತ್ 37, ನಿತೀಶ್ ಕುಮಾರ್ ರೆಡ್ಡಿ 41 ರನ್, ಬುಮ್ರಾ 8 ರನ್ ಕಲೆಹಾಕುವ ಮೂಲಕ 150 ರನ್ಗಳಿಗೆ ಆನೌಟ್ ಆಯ್ತು.
50 ಓವರ್ ಗಳನ್ನೂ ಆಡದ ಟೀಂ ಇಂಡಿಯಾ!
ಪರ್ತ್ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಲೈನಪ್ ಕಂಪ್ಲೀಟ್ ಹಳ್ಳ ಹಿಡ್ದಿತ್ತು. ತಂಡದ 11 ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಪೂರ್ಣ 50 ಓವರ್‌ಗಳ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇಡೀ ತಂಡ 49.3 ಓವರ್‌ಗಳನ್ನು ಎದುರಿಸಿ 150 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರೆ, ರಿಷಭ್ ಪಂತ್ 37 ರನ್ ಹಾಗೂ ಕೆಎಲ್ ರಾಹುಲ್ 26 ರನ್ಗಳ ಇನಿಂಗ್ಸ್ ಆಡಿದರು. ಉಳಿದವ್ರೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ರು.
ಬೌಲರ್ ಗಳ ಆರ್ಭಟ.. ಫಸ್ಟ್ ಇನ್ನಿಂಗ್ಸ್ ನಲ್ಲಿ 17 ವಿಕೆಟ್!
ಯೆಸ್.. ಪರ್ತ್ ಟೆಸ್ನಲ್ಲಿ ನಿಜಕ್ಕೂ ಇವತ್ತಿನ ದಿನ ಬೌಲರ್ಸ್ ಪರವಾಗಿತ್ತು. ಎರಡೂ ತಂಡಗಳಿಂದ ಒಂದೂ ಆಫ್ ಸೆಂಚುರಿಯೂ ಬರ್ಲಿಲ್ಲ. ಆಸ್ಟ್ರೇಲಿಯಾದಲ್ಲಿ 17 ವರ್ಷಗಳ ಬಳಿಕ ಒಂದೇ ದಿನ ಟೆಸ್ಟ್ನಲ್ಲಿ 17 ವಿಕೆಟ್ಗಳು ಉರುಳಿದ್ವು. ಆಸ್ಟ್ರೇಲಿಯಾ ಪರ ಹೇಜಲ್ವುಡ್ ಮಾರಕ ಬೌಲಿಂಗ್ ದಾಳಿ ನಡೆಸಿದರು. 13 ಓವರ್ ಬಾಲ್ ಹಾಕಿ ಐದು ಮೇಡಿನ್ ಎಸೆತ ಮಾಡಿ 29 ರನ್ಗಳನ್ನು ನೀಡಿದರು. ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಾರ್ಷ್ ತಲಾ 2 ವಿಕೆಟ್ ಪಡೆದು ಭಾರತ ತಂಡವನ್ನು ಆಲ್ಔಟ್ ಮಾಡಿದರು.
ಟೀಂ ಇಂಡಿಯಾಗೆ ಭರ್ಜರಿ ಬಲ ತುಂಬಿದ ಬುಮ್ರಾ!
ಭಾರತದ ಬ್ಯಾಟಿಂಗ್ ನೋಡಿ ತಲೆಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಕೊಂಚ ನಿಟ್ಟುಸಿರು ಬಡುವಂತೆ ಮಾಡಿದ್ದೇ ಜಸ್ಪ್ರೀತ್ ಬುಮ್ರಾ. 150ಕ್ಕೆ ಆಲೌಟ್ ಆಗಿದ್ದ ಭಾರತದ ವಿರುದ್ಧ ಆಸ್ಟ್ರೇಲಿಯಾ ಲೀಡ್ ತಗೊಳ್ಳುತ್ತೆ ಅನ್ಕೊಳ್ಳುವಾಗ ನಮ್ಮ ಬೌಲರ್ಸ್ ಕಾಂಗರೂಗಳ ಮೇಲೆ ಸವಾರಿ ಮಾಡಿದ್ರು. ಅದ್ರಲ್ಲೂ ಬುಮ್ ಬುಮ್ ಬುಮ್ರಾ ರಣಾರ್ಭಟ ಜೋರಾಗಿತ್ತು. ಆರಂಭಿಕ ಮೂವರು ಬ್ಯಾಟರ್ಗಳನ್ನ ಪೆವಿಲಿಯನ್ಗಟ್ಟಿದ್ರು. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಿತ್ತು ಮಿಂಚಿದ್ರು. ಇದಕ್ಕೆ ಸಾಥ್ ಕೊಟ್ಟ ಮೊಹಮ್ಮದ್ ಸಿರಾಜ್ ಇಬ್ಬರ ವಿಕೆಟ್ ಬೇಟೆಯಾಡಿದ್ರು. ಹಾಗೇ ಹರ್ಷಿತ್ ರಾಣಾ ಟ್ರಾವಿಸ್ ಹೆಡ್ ವಿಕೆಟ್ ಕಿತ್ರು. ಹೀಗೆ ಫಸ್ಟ್ ಇನ್ನಿಂಗ್ಸ್ ಮುಗಿಯೋ ವೇಳೆಗೆ ಆಸ್ಟ್ರೇಲಿಯಾ 67 ರನ್ಗೆ 7 ವಿಕೆಟ್ ನಷ್ಟಕ್ಕೆ ಆಲೌಟ್ ಆಗಿದೆ. ಒಟ್ನಲ್ಲಿ ಬ್ಯಾಟಿಂಗ್ ಆರ್ಭಟ ನೋಡೋಕೆ ಕಾಯ್ತಿದ್ದವ್ರಿಗೆ ಬೌಲರ್ಸ್ ಮಸ್ತ್ ಎಂಟಟೈನ್ಮೆಂಟ್ ನೀಡಿದ್ದಾರೆ.