ಟ್ರೋಲರ್ಗಳಿಗೇನು ಗೊತ್ತು ಬುಮ್ರಾ ಬೆಲೆ? – ಭಾರತದ ಆಸ್ತಿಗೆ ಇದೆಂಥಾ ಅವಮಾನ?

ಜಸ್ಪ್ರೀತ್ ಬುಮ್ರಾ.. ಕ್ರಿಕೆಟ್ ಜಗತ್ತು ನೋಡಿದ ಅದ್ಫುತ. ಅತ್ಯಧ್ಬುತ ಬೌಲರ್.. ಸಿಚುವೇಷನ್ ಹೇಗೇ ಇರಲಿ.. ಸೋಲೋ ಚಾನ್ಸ್ ಎಷ್ಟೇ ಇರಲಿ.. ಆ ಟೈಂನಲ್ಲಿ ಬುಮ್ರಾ ಕೈಗೆ ಬಾಲ್ ಬಂದ್ರೆ ಮ್ಯಾಚ್ ಫುಲ್ ಟರ್ನ್ ಆಗುತ್ತೆ.. ಎದುರಾಳಿ ತಂಡದಲ್ಲಿ ಎಷ್ಟೇ ದೊಡ್ಡ ಬ್ಯಾಟ್ಸಮನ್ ಇದ್ರೂ ಅವರ ವಿಕೆಟ್ ತೆಗೆಯೋ ತಾಕತ್ತು ಜಸ್ಪೀತ್ ಬುಮ್ರಾಗೆ ಇದೆ. ಅದನ್ನ ಪ್ರೋ ಕೂಡ ಮಾಡಿ ತಂಡವನ್ನ ಗೆಲ್ಲಿಸಿದ್ದಾರೆ. ಬುಮ್ರಾ ಟೀಂ ಇಂಡಿಯಾಗೆ ತನ್ನದೇ ಆದ ಕೊಡುಗೆ ಕೊಟ್ಟಿದ್ದಾರೆ. ಟೀಂ ಇಂಡಿಯಾಕ್ಕಾಗಿ ಬೆವರನ್ನ ಹರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಗತ್ತು ಇಡೀ ವಿಶ್ವಕ್ಕೆ ಗೊತ್ತು. ಆದ್ರೆ ಕೆಲ ಒಂದಿಷ್ಟು ಟ್ರೋಲರ್ಗಳು ತಮ್ಗೆ ವೀವ್ಸ್ ಬೇಕು ಅಂತ ಜನರಿ ತಪ್ಪು ಸಂದೇಶ ಕೊಡುತ್ತಾ ಮಣ್ಣು ತಿನ್ನೋ ಕೆಲಸ ಮಾಡ್ತಿದ್ದಾರೆ.. ಬುಮ್ರಾ ಭಾರತ ತಂಡಲ್ಲಿ ಇದ್ದರೆ ಗೆಲ್ಲೋದಿಲ್ಲ. ಬುಮ್ರಾ ಇಲ್ಲದಿದ್ದಾಗ ಮಾತ್ರ ಟೀಂ ಇಂಡಿಯಾ ಗೆಲ್ಲುತ್ತೆ ಅನ್ನೋ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಭೂಮಿಕಾ ಮಗು ಗಂಡು or ಹೆಣ್ಣು? – ಶಕುಂತಲಾ ಕೈಯಲ್ಲಿ ಗೌತಮ್ ಮಗು?
ಬುಮ್ರಾ ಟೀಂ ನಲ್ಲಿ ಇದ್ದರೆ ವಿಕೆಟ್ಗಳಿಗೆ ಕೊರತೆನೇ ಇಲ್ಲ.. ವಿಕೆಟ್ ಮೇಲೆ ವಿಕೆಟ್ ಬಿಳ್ತಾನೆ ಇರುತ್ತೆ.. ಸ್ಟಾರ್ ಬ್ಯಾಟ್ಸ್ಮ್ಯಾನ್ ಕೂಡ ಬುಮ್ರಾ ಬೌಲಿಂಗ್ಗೆ ಪತರುಗುಟ್ಟಿ ಹೋಗ್ತಾರೆ. ಅಷ್ಟು ಹವಾ ಇಟ್ಟಿದ್ದಾರೆ ಬುಮ್ರಾ.. ಆದ್ರೆ, ಈ ಬುಮ್ರಾ ಮೇಲೆ ಕೆಲ ಟ್ರೋಲರ್ಸ್ ಬೇಕಾ ಬಿಟ್ಟಿ ಆರೋಪವನ್ನ ಹೋರಿಸುತ್ತಿದ್ದಾರೆ. ಬುಮ್ರಾ ಟೀಂ ಇಂಡಿಯಾದಲ್ಲಿ ಇದ್ದರೇ ಆ ಮ್ಯಾಚ್ ಸೋಲುತ್ತೆ.. ಬುಮ್ರಾ ಇಲ್ಲ ಅಂದ್ರೆ ಆ ಪಂದ್ಯವನ್ನ ಟೀಂ ಇಂಡಿಯಾ ಗೆಲ್ಲುತ್ತೆ ಅಂತ ಟ್ರೋಲ್ ಮಾಡುತ್ತಿದ್ದಾರೆ.. ಅಂದ್ರೆ ಇಲ್ಲಿ ಬುಮ್ರಾ ಅವರ ಬಗ್ಗೆ ತಿಳಿದುಕೊಳ್ಳದೇ ಕೆಲವೇ ಕೆಲ ಅಂಕಿ ಅಂಶವನ್ನ ಇಂಟ್ಕೊಂಡು ಇಂತಹ ಟ್ರೋಲ್ಗಳನ್ನ ಮಾಡುತ್ತಿದ್ದಾರೆ. ಹೇಗೆ ಪಂತ್ ಸೆಂಚುರಿ ಹೊಡೆದು ಪಲ್ಟಿ ಹೊಡಿದ್ರೆ ಆ ಮ್ಯಾಚ್ ಸುಲುತ್ತೆ ಅಂತ ಹೇಳಿದ್ರೂ ಹಾಗೇ ಬುಮ್ರಾ ಟೀಂ ಇಂಡಿಯಾದಲ್ಲಿ ಇದ್ದು ಎಷ್ಟೇ ವಿಕೆಟ್ ತಗದ್ರೂ ಅದು ಸುಲುತ್ತೆ.. ಅವರ್ ಇಲ್ಲ ಅಂದ್ರೆ ಗೆಲ್ಲುತ್ತೆ ಅನ್ನೋ ಅರ್ಥದಲ್ಲಿ ಹೇಳುತ್ತಿದ್ದಾರೆ.. ನಿಜಕ್ಕೂ ಹೀಗೆ ಟ್ರೋಲ್ ಮಾಡೋರಿಗೆ ಮಾತು ಆಡೋರಿಗೆ ನಾಚಿಕೆ ಆಗಬೇಕು.. ಕ್ರಿಕೆಟ್ ಒಬ್ಬರ ಮೇಲೆ ನಿಂತಿರೋ ಆಟ ಅಲ್ಲ.. 11 ಜನ ಕೂಡ ಇಲ್ಲಿ ಮುಖ್ಯ ಆಗ್ತಾರೆ.. ಆದ್ರೆ ಬುಮ್ರಾ ಇಲ್ಲ ಅಂದ್ರೆ ಗೆಲ್ಲುತ್ತೆ ಟೀಂ ಇಂಡಿಯಾ ಅಂದ್ರೆ ನಿಜಕ್ಕೂ ನಾವು ಎಂತಹ ಸಮಾಜದಲ್ಲಿ ಇದ್ದೇವೆ ಅನ್ಸುತ್ತೆ..
ಬುಮ್ರಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ 5 ವಿಕೆಟ್ಗಳನ್ನ ಪಡದು ದಾಖಲೆ ಬರೆದ್ರು.. ಈ ಪಂದ್ಯದಲ್ಲಿ ಬುಮ್ರಾ ದಿ ಬೆಸ್ಟ್ ಫರ್ಮಾಮೆನ್ಸ್ ಕೊಟ್ಟಿದ್ದಾರೆ. ಹೀಗಿರುವಾಗ ಈ ಪಂದ್ಯ ಸೋಲುವುದ್ದಕ್ಕೆ ಬುಮ್ರಾ ಹೇಗೆ ಕಾರಣ ಆಗ್ತಾರೆ ಹೇಳಿ.. ಇಲ್ಲಿ ಫೀಲ್ಡರ್ ಗಳು ಕ್ಯಾಚ್ ಬಿಟ್ಟಿದ್ದಕ್ಕೆ ಸೋತ್ರೆ ಹೊರತು ಬುಮ್ರಾ ಇದ್ದಾರೆ, ಅವರು ಲತ್ತೆ ಅನ್ನೋ ಕಾರಣಕ್ಕೆ ಸೋಲಿಲ್ಲ.. ಹಾಗೇ ಎರಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಳ್ಳೆಯ ಸ್ಕೋರ್ ಕಲೆ ಹಾಕಿತ್ತು. ಆಕಾಶ್ ದೀಪ್ ವಿಕೆಟ್ ಚೆನ್ನಾಗಿ ತೆಗೆದ್ರು.. ಹೆಚ್ಚು ಕ್ಯಾಚ್ ಡ್ರಾಪ್ ಆಗಿಲ್ಲ.. ಹೀಗಾಗಿ ಟೀಂ ಇಂಡಿಯಾ ಗೆೆಲ್ತು.. ಬುಮ್ರಾ ಇರಲಿಲ್ಲ ಅದಕ್ಕೆ ಟೀಂ ಇಂಡಿಯಾ ಗೆಲ್ತು ಅಂತ ಹೇಳುವುದು ಎಷ್ಟು ಸರಿ ಹೇಳಿ.. ನಮ್ಮ ಜನ ವಾಸ್ತಾವನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ.. ಟೀಂನ ಅಂಕಿ ಅಂಶ ಇಟ್ಕೊಂಡು ಇವರ ಮೇಲೆ ಇಂತಹ ಕಥೆ ಕಟ್ಟೋದು ತಪ್ಪು.. ಇಂತಹ ವಿಷ್ಯಗಳ ಬಗ್ಗೆ ಟ್ರೋಲ್ ಮಾಡೋದ್ದನ್ನ ಬಿಡಬೇಕು.
ಬುಮ್ರಾ ಭಾರತದ ಬೆಸ್ಟ್ ಬೌಲರ್.. ವರ್ಲ್ಡ್ ಕ್ಲಾಸ್ ಬೌಲರ್.. ಇವರ ತರ ವಿಕೆಟ್ ತೆಗೆಯೋ ಆಟಗಾರರು ಕೂಡ ಯಾರು ಇಲ್ಲ. ವರ್ಲ್ಡ್ ಗ್ರೆೇಟೆಸ್ಟ್ ಬ್ಯಾಟ್ಸ್್ಮನ್ಗಳನ್ನ ಔಟ್ ಮಾಡೋ ತಾಕತ್ತು ಇವರಿಗಿದೆ.. ಇವರ ಬಗ್ಗೆ ವಿದೇಶಿ ಆಟಗಾರರೇ ಹೊಗುಳುತ್ತಾರೆ.. ಆಸ್ಪೇಲಿಯಾದ ವಿಕೆಟ್ ಕಿಪರ್ ಆಗಿರೋ ಆಡಮ್ ಗಿಲ್ಕ್ರಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನ ಡಾನ್ ಬ್ರಾಡ್ಮನ್ಗೆ ಹೋಲಿಸಿದ್ದಾರೆ ಅಂದ್ರೆ ತಿಳ್ಕೊಳ್ಳಿ ಬುಮ್ರಾ ತಾಕತ್ತು ಏನು ಅಂತ. ವಿದೇಶಿ ಆಟಗಾರರ ಬುಮ್ರಾ ಬಗ್ಗೆ ಹೊಗುಳುವಾಗ ನಮ್ಮ ದೇಶದಲ್ಲಿ ಅವರನ್ನ ತೆಗಳುವುದು ಎಷ್ಟು ಸರಿ?
ಡಾನ್ ಬ್ರಾಡ್ಮನ್ ಹೇಗೆ ಕಷ್ಟದ ಪರಿಸ್ಥಿತಿಯಲ್ಲೂ ಆಡುತ್ತಾ.. ತಮ್ಮ ಸಹ ಆಟಗಾರರಿಗಿಂತ ಹೇಗೆ ಟಾಪ್ನಲ್ಲಿ ಇದ್ದು ಟ್ರೆಂಡ್ ಕ್ರಿಯೇಟ್ ಮಾಡಿದ್ರೋ ಹಾಗೇ ಬುಮ್ರಾ ಕೂಡ ಎಲ್ಲಾ ಕಂಡಿಷನ್ನಲ್ಲಿ ಬೌಲಿಂಗ್ ಮಾಡುತ್ತಾ ವಿಕೆಟ್ ತೆಗೆಯೋ ಮೂಲಕ ತಮ್ಮ ಸಮಕಾಲಿನ ಬೌಲರ್ಗಿಂತ ಟಾಪ್ನಲ್ಲಿ ಇದ್ದಾರೆ.. ಡಾನ್ ಬ್ರಾಡ್ಮನ್ ಹೇಗೆ ತಮ್ಮ ಸಮಕಾಲಿನ ಬ್ಯಾಟ್ಸ್ಮನೆಗಿಂತ ಹೇಗೆ ಪೀಕ್ನಲ್ಲಿದ್ರೂ ಹಾಗೇ ಅವರ ರೀತಿಯಲ್ಲೇ ಬುಮ್ರಾ ಈ ಪೀಕ್ನಲ್ಲಿದ್ದಾರೆ ಅನ್ನೋದ್ದನ್ನ ಗಿಲ್ಕ್ರಿಸ್ಟ್ ಹೇಳಿದ್ದಾರೆ. ಅಂದ್ರೆ ಬುಮ್ರಾ ಗತ್ತು ಇಡೀ ಜಗತ್ತಿಗೆ ಗೊತ್ತಿರುವಾಗ.. ಅವರ ಇಲ್ಲ ಅಂದ್ರೆ ಪಂದ್ಯ ಗೆಲ್ಲುತ್ತೆ ಇದ್ರೆ ಸೊಲುತ್ತೆ ಅಂತ ಟ್ರೋಲ್ ಮಾಡೋದು ತಪ್ಪು.
ಬುಮ್ರಾ ಕ್ರಿಕೆಟ್ ದಾಖಲೆ
ಬುಮ್ರಾ ತಾಕತ್ತು ಏನು ಅನ್ನೋದು ಅವರ ರೆಕಾರ್ಡ್ ಹೇಳುತ್ತೆ.. 46 ಟೆಸ್ಟ್ ಪಂದ್ಯ ಆಡಿರೋ ಬುಮ್ರಾ 219 ವಿಕೆಟ್ಗಳನ್ನ ಪಡೆದಿದ್ದಾರೆ. ಇನ್ನು odi ನಲ್ಲಿ 89 ಪಂದ್ಯ ಆಡಿದ್ದು 149 ವಿಕೆಟ್ ಪಡೆದಿದ್ದಾರ. 70 ಟಿ 20 ಪಂದ್ಯ ಆಡಿದ್ದ 89 ವಿಕೆಟ್ ತೆಗೆದ್ರೆ, 135 ಐಪಿಎಲ್ ಪಂದ್ಯ ಆಡಿ183 ವಿಕೆಟ್ ಪಡೆದಿದ್ದಾರೆ. ಈ ರೆಕಾರ್ಡ್ ಹೇಳುತ್ತೆ ಬುಮ್ರಾ ದಿ ಬೆಸ್ಟ್ ಬೌಲರ್ ಅನ್ನೋದು ಹಾಗೇ.. ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲೂ ಬುಮ್ರಾ ಪಾತ್ರ ಅಪಾರವಿದೆ. ಅಷ್ಟೇ ಯಾಕೆ ಇಂಗ್ಲೆಂಡ್ನಲ್ಲೇ ಜಸ್ಪ್ರಿತ್ ಬುಮ್ರಾ ಒಟ್ಟು 3 ಬಾರಿ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಇಂಗ್ಲೆಂಡ್ ನೆಲದಲ್ಲಿ ಅತೀ ಹೆಚ್ಚು ಐದು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ನಲ್ಲಿ ಅದ್ಫುತವಾಗಿ ಆಡೋ ಬುಮ್ರಾ ಅವರನ್ನ ಲತ್ತೆ ಅನ್ನೋ ರೀತಿಯಲ್ಲಿ ಟ್ರೋಲ್ ಮಾಡೋದು ಎಷ್ಟು ಸರಿ ಅನ್ನೋದ್ದನ್ನ ಕ್ರಿಕೆಟ್ ಪ್ರೇಮಿಗಳೇ ಹೇಳಬೇಕು.

ನೋಡಿರಿ

