ನಟಿಯ ಕಣ್ಣಿಗೆ ಕಂಟಕವಾಯ್ತು ಕಾಂಟ್ಯಾಕ್ಟ್ ಲೆನ್ಸ್ – ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಜಸ್ಮೀನ್ ಗೆ ದೃಷ್ಟಿದೋಷ
ನಟಿ ಜಾಸ್ಮಿನ್ ಭಾಸಿನ್ ಈಗ ದೊಡ್ಡ ಎಡಟ್ಟೊಂದನ್ನು ಮಾಡಿ ಅಪಾಯ ತಂದೊಡ್ಡಿಕೊಂಡಿದ್ದಾರೆ. ಕಣ್ಣಿಗೆ ಲೆನ್ಸ್ ಹಾಕಲು ಪ್ರಯತ್ನಿಸಿ ಕಣ್ಣಿನ ಕಾರ್ನಿಯಲ್ಗೆ ಹಾನಿ ಮಾಡಿಕೊಂಡಿದ್ದಾರೆ. ಇದ್ರಿಂದಾಗಿ ನಟಿಗೆ ದೃಷ್ಟಿದೋಷ ಕಾಣಿಸಿಕೊಂಡಿದೆ ಎಂದು ಸ್ವತಃ ಜಾಸ್ಮಿನ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ನಟಿ ಜಾಸ್ಮಿನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿ ಇದ್ದ ಅವರು ಕಣ್ಣಿನ ಕಾರ್ನಿಯಲ್ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆ ಆಗಿದೆ. ಇದರಿಂದ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ. ಕಣ್ಣಿಗೆ ಅವರು ಬ್ಯಾಂಡೇಜ್ ಹಾಕಿಕೊಂಡು ಫೋಟೋನ ಅಪ್ಲೋಡ ಮಾಡಿದ್ದಾರೆ.
ಇದನ್ನೂ ಓದಿ:ಯುಎಇಗೆ ಸೋಲುಣಿಸಿ ಭಾರತದ ಸಿಂಹಿಣಿಯರು – ಸೆಮೀಸ್ ಸನಿಹಕ್ಕೆ ಬಂದ ಟೀಮ್ ಇಂಡಿಯಾ
ಜುಲೈ 17ರಂದು ನಾನು ದೆಹಲಿಯಲ್ಲಿ ಇದ್ದೆ. ಕಾರ್ಯಕ್ರಮ ಒಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ನನ್ನ ಕಾಂಟ್ಯಾಕ್ಟ್ ಲೆನ್ಸ್ನಲ್ಲಿ ಏನು ಸಮಸ್ಯೆ ಆಯಿತು ಅನ್ನೋದು ಗೊತ್ತಿಲ್ಲ. ಅದನ್ನು ಧರಿಸಿದೆ. ಆಗ ನನ್ನ ಕಣ್ಣಿಗೆ ತೊಂದರೆ ಆಗೋಕೆ ಆರಂಭ ಆಯಿತು. ಕಣ್ಣು ಉರಿಯೋಕೆ ಆರಂಭಿಸಿತು. ನಂತರ ನಿಧಾನವಾಗಿ ಆ ಉರಿ ಹೆಚ್ಚಾಯಿತು ಎಂದಿದ್ದಾರೆ ಅವರು.
ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಈವೆಂಟ್ನಲ್ಲಿ ನಾನು ಸನ್ಗ್ಲಾಸ್ ಧರಿಸಿದೆ. ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ’ ಎಂದಿದ್ದಾರೆ ಅವರು.
ನಾನು ಸಾಕಷ್ಟು ನೋವಿನಲ್ಲಿ ಇದ್ದೇನೆ. ನಾನು ನಾಲ್ಕೈದು ದಿನದಲ್ಲಿ ಚೇತರಿಕೆ ಕಾಣುತ್ತೇನೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಯವರೆಗೆ ನಾನು ನನ್ನ ಕಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ನನಗೆ ಯಾವುದೂ ಸರಿಯಾಗಿ ಕಾಣುತ್ತಿಲ್ಲ. ಕಣ್ಣಿನ ನೋವಿನಿಂದ ನಿದ್ದೆ ಕೂಡ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಅವರು. ಸದ್ಯ ಜಾಸ್ಮಿನ್ ಅವರು ಶೀಘ್ರವೇ ಕೆಲಸಕ್ಕೆ ಬರುವ ಆಲೋಚನೆಯಲ್ಲಿ ಇದ್ದಾರೆ.
ಜಾಸ್ಮಿನ್ ಅವರು ಸಿನಿಮಾ ಹಾಗೂ ಕಿರುತೆರೆಯಲ್ಲಿ ನಟಿಸಿದ್ದಾರೆ. ಜಾಸ್ಮಿನ್ ಅವರು ಕನ್ನಡದ ‘ಕ್ರೋರ್ಪತಿ’ ಸಿನಿಮಾದಲ್ಲಿ ನಟಿಸಿದ್ದರು. ಕೋಮಲ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಇದರ ಜೊತೆಗೆ ಹಿಂದಿ ಬಿಗ್ ಬಾಸ್ನಲ್ಲೂ ಅವರು ಭಾಗಿ ಆಗಿದ್ದರು.