ಉಡಾವಣೆಯಾಗಿ ಕೆಲವೇ ಸೆಕೆಂಡುಗಳಲ್ಲಿ ಖಾಸಗಿ ಉಪಗ್ರಹ ಸ್ಫೋಟ

ಉಡಾವಣೆಯಾಗಿ ಕೆಲವೇ ಸೆಕೆಂಡುಗಳಲ್ಲಿ ಖಾಸಗಿ ಉಪಗ್ರಹ ಸ್ಫೋಟ

ಜಪಾನಿನ ಖಾಸಗಿ ಕಂಪನಿಯೊಂದು ಉಪಗ್ರಹ ಉಡಾವಣೆ ಮಾಡಿದ್ದು, ಉಡಾವಣೆಯಾದ ಕೆಲವೇ ಸೆಕೆಂಡ್‌ಗಳಲ್ಲಿ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌ – ಆರೋಪಿ ಬೆಂಗಳೂರು ಪ್ರವೇಶ ಮಾಡಿದ್ದು ಹೇಗೆ ಗೊತ್ತಾ?

ಟೋಕಿಯೋ ಮೂಲದ ಖಾಸಗಿ ಕಂಪನಿ  ಸ್ಟಾರ್ಟ್ಅಪ್ ಸ್ಪೇಸ್ ಒನ್  ಉಪಗ್ರಹವೊಂದನ್ನು ತಯಾರಿಸಿತ್ತು. ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೊದಲ ಜಪಾನಿನ ಖಾಸಗಿ ಸಂಸ್ಥೆಯಾಗುವ ಗುರಿಯನ್ನು ಹೊಂದಿತ್ತು. ಆದರೆ ಉಡಾವಣೆ ಮಾಡಿದ ಕೆಲವೇ ಕ್ಷಣದಲ್ಲಿ ಸ್ಪೋಟಗೊಂಡಿದೆ.

ರಾಕೆಟ್‌ ಸ್ಫೋಟದಿಂದಾಗಿ ಉಡಾವಣಾ ಪ್ಯಾಡ್ ಪ್ರದೇಶದಲ್ಲಿ ಕಪ್ಪು ಹೊಗೆ ತುಂಬಿತ್ತು. ಸ್ಪ್ರಿಂಕ್ಲರ್‌ಗಳು ನೀರನ್ನು ಸಿಂಪಡಿಸಲು ಪ್ರಾರಂಭಿಸಿದಾಗ ಅವಶೇಷಗಳು ಸುತ್ತಮುತ್ತಲಿನ ಪರ್ವತ ಇಳಿಜಾರುಗಳ ಮೇಲೆ ಬೀಳುತ್ತಿರುವುದು ಕಂಡುಬಂದಿದೆ. ಉಡಾವಣೆಯಾದ ಸುಮಾರು 51 ನಿಮಿಷಗಳ ನಂತರ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಭರವಸೆಯನ್ನು ಕಂಪನಿ ಹೊಂದಿತ್ತು.

ಕಳೆದ ಜುಲೈನಲ್ಲಿ ಮತ್ತೊಂದು ಜಪಾನಿನ ರಾಕೆಟ್ ಎಂಜಿನ್ ದಹನದ ನಂತರ ಸುಮಾರು 50 ಸೆಕೆಂಡುಗಳ ಪರೀಕ್ಷೆಯ ಸಮಯದಲ್ಲಿ ಸ್ಫೋಟಗೊಂಡಿತ್ತು.  ನೈರುತ್ಯ ಜಪಾನ್‌ನ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ H3 ಉಡಾವಣೆಗೊಂಡಿತ್ತು.

Shwetha M