7 ವರ್ಷದ ಮಗನಿಗಾಗಿ RRR ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ಜಪಾನ್ ಮಹಿಳೆ!
ರಾಜಮೌಳಿ ನಿರ್ದೇಶನದ ಚಿತ್ರ RRR ಆಸ್ಕರ್ ಗೆದ್ದಾಗಿನಿಂದ ಜಗತ್ತಿನಾದ್ಯಂತ ಹೊಸ ಕ್ರೇಜ್ ಶುರುವಾಗಿದೆ. RRR ಚಿತ್ರದ ನಾಟು ನಾಟು ಹಾಡಿಗೆ ಲಕ್ಷಾಂತರ ಮಂದಿ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಸಿನಿಮಾದ ಕೆಲ ಡೈಲಾಗ್ ಅನ್ನು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರೋದು ಗೊತ್ತಿರೋ ವಿಚಾರ. ಇಷ್ಟಕ್ಕೇ ನಿಲ್ಲದ RRR ಕ್ರೇಜ್ ಈಗ ಕಥೆ ಪುಸ್ತಕ ರೂಪವನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಕಾರುಗಳ ಲೈಟ್ಸ್ ನಲ್ಲೇ ನಾಟು ನಾಟು ಡ್ಯಾನ್ಸ್! ಕತ್ತಲು ಬೆಳಕಿನ ಚಿತ್ತಾರ ಸೂಪರ್..
RRR ಗೆ ಆಸ್ಕರ್ ಪುರಸ್ಕಾರ ಬಂದ ಬಳಿಕ ಲಕ್ಷಾಂತರ ಮಂದಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ವಿದೇಶಿಗರು ಕೂಡ ಫಿದಾ ಆಗಿದ್ದಾರೆ. ಇದೀಗ ಜಪಾನಿನ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನಿಗೆ RRR ಸಿನಿಮಾದ ಕಥೆಯನ್ನು ತಿಳಿಸಲು ಕಥಾ ಪುಸ್ತಕವನ್ನೇ ಬರೆದಿದ್ದಾರೆ.
ಹೌದು, ಜಪಾನಿನ ಮಹಿಳೆಯೊಬ್ಬರು ತನ್ನ 7 ವರ್ಷದ ಮಗನಿಗೆ RRR ಚಿತ್ರವನ್ನು ತೋರಿಸಲು ನಿರ್ಧರಿಸಿದ್ದಾರೆ. ಆದರೆ 3 ಗಂಟೆ ಅವಧಿಯ, ಸಬ್ ಟೈಟಲ್ ನೋಡಿಕೊಂಡು ಚಿತ್ರ ವೀಕ್ಷಿಸಲು ಮಗುವಿಗೆ ಕಷ್ಟವಾಗುತ್ತದೆ. ಹೀಗಾಗಿ ಮಗುವಿಗೆ ಚಿತ್ರದ ಕಥೆಯನ್ನು ಸರಳವಾಗಿ ಹೇಳಬೇಕು ಅಂತಾ ಚಿತ್ರದ ಸಂಪೂರ್ಣ ಕಥೆಯನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ.
ಈ ಪುಸ್ತಕದಲ್ಲಿ ಸಿನಿಮಾದ ದೃಶ್ಯಗಳನ್ನು ಕಾರ್ಟೂನ್ ರೂಪದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಕೆಳಗೆ ಕಥೆಯನ್ನು ಬರೆಯಲಾಗಿದೆ. ಈ ವಿಡಿಯೋವನ್ನು RRR ಸಿನಿಮಾ ತಂಡ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
View this post on Instagram