₹12 ಲಕ್ಷ ಖರ್ಚು ಮಾಡಿ ಶ್ವಾನದಂತೆ ಬದಲಾದ – ನಾಯಿಯಂತೆ ಬದಲಾದ ಮೇಲೆ ಆತನ ಪಾಡು ಅಯ್ಯೋಪಾಪ

₹12 ಲಕ್ಷ ಖರ್ಚು ಮಾಡಿ ಶ್ವಾನದಂತೆ ಬದಲಾದ – ನಾಯಿಯಂತೆ ಬದಲಾದ ಮೇಲೆ ಆತನ ಪಾಡು ಅಯ್ಯೋಪಾಪ

ಮನುಷ್ಯರಿಗೆ ಏನೇನೋ ಆಸೆಗಳು ಇರುತ್ತವೆ ಬಿಡಿ. ಆದ್ರೆ ಈತನ ಕಥೆ ಕೇಳಿದ್ರೆ ನೀವೇ ಗಾಬರಿಯಾಗ್ತೀರಿ. ಯಾಕಂದ್ರೆ ಈತನಿಗೆ ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಪ್ರೀತಿ ಜಾಸ್ತಿ. ಇಷ್ಟೇ ಆಗಿದ್ರೆ ಪರ್ವಾಗಿರಲಿಲ್ಲ. ಆದರೆ ಈತ ಶ್ವಾನದಂತೆಯೇ ಬದಲಾಗಿದ್ದಾನೆ.

ಇದನ್ನೂ ಓದಿ : ಚಳಿಗಾಲದಲ್ಲಿ ನೆಲಗಡಲೆ  ತಿನ್ನಬಹುದಾ? – ಶೇಂಗಾ ಎಷ್ಟು ತಿಂದ್ರೆ ಒಳ್ಳೆಯದು?

ಚೆನ್ನಾಗಿ ಕಾಣಿಸಬೇಕು ಅಂತಾ ಕೆಲವ್ರು ಪಾರ್ಲರ್​ಗೆ ಹೋಗ್ತಾರೆ. ಇನ್ನೂ ಕೆಲವ್ರು ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಈತನಿಗೆ ಮಾತ್ರ ತಾನು ನಾಯಿಯಂತೆ ಕಾಣಬೇಕು ಅನ್ನೋ ಆಸೆ. ಇದಕ್ಕಾಗಿ ಬರೋಬ್ಬರಿ 12 ಲಕ್ಷ ರೂಪಾಯಿ ಹಣ ಖರ್ಚು ಮಾಡಿದ್ದಾನೆ. ಜಪಾನ್ ದೇಶದ ಟೋಕೋ ಹೆಸರಿನ ವ್ಯಕ್ತಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಶ್ವಾನ ಎಂದರೆ ಜಾಸ್ತಿ ಪ್ರೀತಿ. ಹೀಗಾಗಿ ತಾನೂ ನಾಯಿಯಂತೆಯೇ ಬದಲಾಗಿದ್ದಾನೆ. ಝಪ್ಪೆಟ್ ಎಂಬ ಸಂಸ್ಥೆಯಿಂದ ಕಾಲ್ಲಿ ತಳಿಯ ಶ್ವಾನದಂತೆ ತನ್ನ ವೇಷಭೂಷಣ ಬದಲಿಸಿಕೊಂಡಿದ್ದಾನೆ. ಸುಮಾರು 40 ದಿನಗಳ ಕಾಲ ಈತನಿಗೆ ಕಾಸ್ಟ್ಯೂಮ್ ರೆಡಿ ಮಾಡಲಾಗಿದೆ. ಇದನ್ನ ಧರಿಸಿದ ಟೋಕೋ ಸಾಕ್ಷಾತ್ ಶ್ವಾನದಂತೆಯೇ ಕಾಣುತ್ತಾನೆ. ನಾಯಿಯಂತೆಯೇ ನಾಲ್ಕು ಕಾಲುಗಳಲ್ಲಿ ನಡೆಯುತ್ತಾನೆ. ಆದ್ರೆ ಕೆಲವೊಂದು ವರ್ತನೆಗಳು ಮಾತ್ರ ಶ್ವಾನಕ್ಕಿಂತ ವಿಭಿನ್ನವಾಗಿವೆ. ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು ನಿಜವಾದ ಶ್ವಾನದ ಎದುರು ಹೋಗಿದ್ದು, ಅದು ಗಲಿಬಿಲಿಗೊಂಡಿದೆ. ಆದ್ರೆ ಆಸೆಪಟ್ಟು ಶ್ವಾನದಂತೆ ಬದಲಾದ್ರೂ ಆತನಿಗೆ ಕಿರಿಕಿರಿ ಆಗ್ತಿದ್ಯಂತೆ.

Shantha Kumari