ಈ ನಗರವನ್ನು ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ, ಲಕ್ಷ ಹಣ!

ಈ ನಗರವನ್ನು ತೊರೆದ್ರೆ ಪ್ರತಿ ಮಗುವಿಗೂ ಸಿಗುತ್ತೆ ಲಕ್ಷ, ಲಕ್ಷ ಹಣ!

ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ಜನಸಂಖ್ಯೆ ಒತ್ತಡವನ್ನ ಕಡಿಮೆ ಮಾಡಲು ಜಪಾನ್ ಸರ್ಕಾರ ವಿಶೇಷ ಯೋಜನೆಯನ್ನು ಪ್ರಕಟಿಸಿದೆ. ಟೋಕಿಯೋ ನಗರವನ್ನು ಯಾರು ತೊರೆಯುತ್ತಾರೋ ಅಂತಹ ಕುಟುಂಬಗಳ ಪ್ರತಿ ಮಗುವಿಗೆ 10 ಲಕ್ಷ ಯೆನ್ ಅಂದ್ರೆ ಅಂದಾಜು 6.26 ಲಕ್ಷ ರೂಪಾಯಿ ಹಣ ನೀಡುವುದಾಗಿ ಅಲ್ಲಿನ ಸರ್ಕಾರ ಆಫರ್ ನೀಡಿದೆ.

ಇದನ್ನೂ ಓದಿ: ಹೋಗಿದ್ದು 500 ರೂಪಾಯಿಗೆ, ಬಂದಿದ್ದು 2,500 ರೂಪಾಯಿ!

ರಾಜಧಾನಿ ಟೋಕಿಯೋದಲ್ಲಿ ಗಣನೀಯವಾಗಿ ಜನಸಂಖ್ಯೆ ಹೆಚ್ಚಳವಾಗತ್ತಿದೆ. ಈ ಹಿನ್ನೆಲೆ ಅಲ್ಲಿನ ಸರ್ಕಾರ ಟೋಕಿಯೋ ತೊರೆದು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ ಈ ಬಂಪರ್ ಆಫ್ ನೀಡಿದೆ.

ನಗರಗಳನ್ನು ತೊರೆಯುವ ಕುಟುಂಬಕ್ಕೆ 1.87 ಲಕ್ಷ ರೂ.ಗಳ ಸಹಾಯಧನ (3 ಲಕ್ಷ ಯೆನ್) ನೀಡಲಾಗುತ್ತದೆ ಎಂದು ಆರಂಭದಲ್ಲಿ ಸರ್ಕಾರ ಘೋಷಿಸಿತ್ತು.. ಆದ್ರೆ, ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ಸೌಲಭ್ಯವನ್ನು ಪರಿಷ್ಕರಿಸಿದ್ದು, ರಾಜಧಾನಿ ತೊರೆಯುವ ಕುಟುಂಬಗಳ ಪ್ರತಿ ಮಗುವಿಗೆ 6.26 ಲಕ್ಷ ರೂ. ನೀಡುವುದಾಗಿ ಹೇಳಿದೆ. ಈ ವರ್ಷದ ಏಪ್ರಿಲ್‌ನಿಂದ ಈ ಯೋಜನೆ ಜಾರಿಗೆ ಬರಲಿದೆ. ಪ್ರಸ್ತುತ ಜಪಾನ್ ಜನಸಂಖ್ಯೆ 12.57 ಕೋಟಿಯಿದ್ದು ಟೋಕಿಯೋ ನಗರದಲ್ಲೇ 1.4 ಕೋಟಿ ಜನ ವಾಸಿಸುತ್ತಿದ್ದಾರೆ.

suddiyaana