10 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಜಪಾನಿನ ಸೇನಾ ಹೆಲಿಕಾಪ್ಟರ್ ನಾಪತ್ತೆ

10 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಜಪಾನಿನ ಸೇನಾ ಹೆಲಿಕಾಪ್ಟರ್ ನಾಪತ್ತೆ

ಟೋಕ್ಯೋ: ದಕ್ಷಿಣ ಜಪಾನಿನ ದ್ವೀಪದಿಂದ 10 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್‌ ಗುರುವಾರ ನಾಪತ್ತೆಯಾಗಿದೆ. ಇದೀಗ  ಸೇನಾ ಹೆಲಿಕಾಪ್ಟರ್ ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಪಾನ್‌ನ ಕರಾವಳಿ ಕಾವಲು ಪಡೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಮಾನನಷ್ಟ ಕೇಸ್ ನಲ್ಲಿ ನೀಲಿಚಿತ್ರ ನಟಿಗೆ ಮುಖಭಂಗ – 1 ಕೋಟಿ ಪಾವತಿಸುವಂತೆ ಕೋರ್ಟ್ ಆದೇಶ

ದಕ್ಷಿಣ ಜಪಾನಿನ ಮಿಯಾಕೊ ದ್ವೀಪದ ಬಳಿ ಗುರುವಾರ ಮಿಷನ್‌ನಲ್ಲಿ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ UH-60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ರಾಡಾರ್‌ನಿಂದ ಕಣ್ಮರೆಯಾಗಿದೆ.

ಒಕಿನಾವಾದ ಮಿಯಾಕೊ ದ್ವೀಪದಿಂದ ಟೇಕ್ಆಫ್ ಆದ ಹೆಲಿಕಾಪ್ಟರ್ ಒಂದು ಗಂಟೆಯಲ್ಲಿ ಹಿಂದಿರುಗಬೇಕಿತ್ತು. ಆದರೆ ಇದು ಸಂಪರ್ಕ ಕಳೆದುಕೊಂಡಿದೆ. ಈ ಹೆಲಿಕಾಪ್ಟರ್ ನಲ್ಲಿ 10 ಮಂದಿ ಸಿಬ್ಬಂದಿ ಇದ್ದರು. ಈಗಾಗಲೇ ನಾಲ್ಕು ಗಸ್ತು ಹಡಗುಗಳು ಹೆಲಿಕಾಪ್ಟರ್ ಹುಡುಕಾಟದಲ್ಲಿ ಭಾಗಿಯಾಗಿದ್ದು, ಆದರೆ ಕಾಣೆಯಾದ ವಿಮಾನದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana