ಮಿಲಿಯನ್ ಗಟ್ಟಲೆ ಕುಸಿಯಿತು ಜನನ ಪ್ರಮಾಣ – ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಜಪಾನ್?

ಮಿಲಿಯನ್ ಗಟ್ಟಲೆ ಕುಸಿಯಿತು ಜನನ ಪ್ರಮಾಣ – ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಜಪಾನ್?

ಜಪಾನ್​​ನಲ್ಲಿ ಮಕ್ಕಳ ಜನನ ಪ್ರಮಾಣ ಸಂಪೂರ್ಣ ಇಳಿಕೆಯಾಗಿದೆ. ಹೀಗೆ ಮುಂದುವರಿದ್ರೆ ಜಗತ್ತಿನಲ್ಲಿ ಜಪಾನ್​ನ ಅಸ್ತಿತ್ವವೇ ಇರೋದಿಲ್ಲ ಅಂತಾ ಅಲ್ಲಿನ ಪ್ರಧಾನಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.​

ಜಪಾನ್​ನಲ್ಲಿ ಮಕ್ಕಳು ಹುಟ್ಟಿದ ಕೂಡಲೇ ಸಾವನ್ನಪ್ಪುತ್ತಿದ್ದಾರೆ. ಕಳೆದ ವರ್ಷ 10 ಲಕ್ಷಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿದ್ದಾರೆ. 2008ರಲ್ಲಿ ಜಪಾನ್ ಜನಸಂಖ್ಯೆ 128 ಮಿಲಿಯನ್​ ಆಗಿತ್ತು. ಆದ್ರೀಗ ಜನಸಂಖ್ಯೆ 124.6  ಮಿಲಿಯನ್​ಗೆ ಇಳಿಕೆಯಾಗಿದೆ. ಈಗ ಮಕ್ಕಳ ಜನನ ಪ್ರಮಾಣ ಕೂಡ ಇಳಿಕೆಯಾಗ್ತಿದ್ದು, ಇದು ಹೀಗೆ ಮುಂದುವರಿದ್ರೆ ಭವಿಷ್ಯದಲ್ಲಿ ಜಪಾನ್ ನಾಮಾವಶೇಷವಾಗಬಹುದು ಅಂತಾ ಜಪಾನ್ ಪ್ರಧಾನಿ ಫ್ಯುಮಿಯೋ ಕಿಶಿಡಾ ಅವರ ಸಲಹೆಗಾರ್ತಿ ಮಸಕೊ ಮೊರಿ ಹೇಳಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!

ಜಪಾನ್ ನಲ್ಲಿ ಜನನ ಪ್ರಮಾಣ ಹಂತಹಂತವಾಗಿ ಕುಸಿತ ಕಾಣುತ್ತಿಲ್ಲ. ನೇರ ಪ್ರಪಾತಕ್ಕೆ ಕುಸಿಯುತ್ತಿದೆ. ಜನನ ಪ್ರಮಾಣ ಕುಸಿತ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳದೆ ಹೋದರೆ, ಸಾಮಾಜಿಕ ಭದ್ರತಾ ವ್ಯವಸ್ಥೆ ಕುಸಿದು ಬೀಳುತ್ತದೆ. ಕೈಗಾರಿಕಾ ಹಾಗೂ ಆರ್ಥಿಕ ಸಾಮರ್ಥ್ಯ ನೆಲಕಚ್ಚುತ್ತದೆ. ದೇಶವನ್ನು ರಕ್ಷಣೆ ಮಾಡಲು ಇರುವ ಸ್ವಯಂ ರಕ್ಷಣಾ ಪಡೆಗಳಿಗೆ ಸಾಕಾಗುವಷ್ಟು ಸಿಬ್ಬಂದಿ ಕೂಡ ಸಿಗುವುದಿಲ್ಲ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.

ಜನನ ಕುಸಿತವನ್ನು ಸಂಪೂರ್ಣವಾಗಿ ಬದಲಿಸಿ ಏರಿಸುವುದು ತುಂಬಾ ಕಷ್ಟ. ಏಕೆಂದರೆ ಮಕ್ಕಳನ್ನು ಹೆರುವ ವಯೋಮಾನದ ಮಹಿಳೆಯರ ಸಂಖ್ಯೆಯೂ ದೇಶದಲ್ಲಿ ಕುಸಿದಿದೆ. ಹೀಗಾಗಿ ಆ ಕುಸಿತದ ವೇಗವನ್ನು ತಗ್ಗಿಸಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಮೋರಿ ತಿಳಿಸಿದ್ದಾರೆ.

suddiyaana