ಡೆಲಿವರಿ ರೋಬೋಟ್​ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!

ಡೆಲಿವರಿ ರೋಬೋಟ್​ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!

ಈಗೇನಿದ್ದರೂ ರೋಬೋಟ್​ಗಳದ್ದೇ ಹವಾ. ಇಲ್ಲಿಯವರೆಗೂ ರೋಬೋಟ್​ಗಳು ಕಚೇರಿ, ಹೋಟೆಲ್, ಮನೆ ಅಂತಾ ಒಂದಿಷ್ಟು ಕೆಲಸಕ್ಕೆ ಸೀಮಿತವಾಗಿತ್ತು. ಆದರೆ ಇನ್ಮುಂದೆ ಹಾಗಿಲ್ಲ. ರೋಬೋಟ್​ಗಳು ಕೂಡಾ ನಮ್ಮಂತೆಯೇ ರಸ್ತೆ ಮಧ್ಯೆ ನಡೆದಾಡಬಹುದು. ಅದರ ಬಗ್ಗೆ ಯಾರೂ ಕೇಳೋ ಹಾಗಿಲ್ಲ. ಯಾಕಂದ್ರೆ ರೋಬೋಟ್​ಗಳಿಗೋಸ್ಕರ ರಸ್ತೆ ಸಂಚಾರ ನಿಯಮವನ್ನೇ ಜಪಾನ್ ದೇಶ ಪರಿಷ್ಕರಣೆ ಮಾಡಿದೆ.

ಇದನ್ನೂ ಓದಿ : ಬ್ಯಾಟ್ ಬೀಸೋಕೂ ಸೈ.. ಸ್ಟೇರಿಂಗ್ ಹಿಡಿಯೋಕೂ ಜೈ – ಧೋನಿಯ ಟ್ರ್ಯಾಕ್ಟರ್ ರೈಡಿಂಗ್ ಹೇಗಿದೆ ನೋಡಿ!?

ಹೌದು. ಜಪಾನ್ ದೇಶವೂ ಡೆಲಿವರಿ ರೋಬೋಟ್​ಗಳನ್ನ ರಸ್ತೆಗೆ ಇಳಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ರೋಬೋಟಿಕ್ಸ್ ತರುವ ಬಗ್ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜಪಾನ್ ತನ್ನ ರಸ್ತೆ ಸಂಚಾರ ನಿಯಮವನ್ನ ಪರಿಷ್ಕರಿಸಿದ್ದು ಡೆಲಿವರಿ ರೋಬೋಟ್​ಗಳು ಮಾನವರಂತೆಯೇ ಮತ್ತು ಸಂಚಾರ ನಿಯಮದಂತೆಯೇ ರಸ್ತೆಗಳನ್ನ ದಾಟಲು ಅನುವು ಮಾಡಿಕೊಟ್ಟಿದೆ.

ಈಗಾಗಲೇ ಅಲ್ಲಿ ರೋಬೋಟ್​ಗಳ ಮೂಲಕ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳ ವಿತರಣೆಯ ಪ್ರಯೋಗಗಳು ನಡೆದಿವೆ. ಜಪಾನ್ ಕೈಗಾರಿಕಾ ಸಚಿವಾಲಯದ ಪ್ರಕಾರ ದೇಶದ 47 ಪ್ರಿಫೆಕ್ಚರ್ ಗಳಲ್ಲಿ ಐದರಲ್ಲಿ ಸ್ವಯಂಚಾಲಿತ ರೋಬೋಟ್​ಗಳ ಪರೀಕ್ಷೆ ನಡೆದಿದೆ.

ಭವಿಷ್ಯದಲ್ಲಿ ಜನ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರದೇಶಗಳಲ್ಲಿ, ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆಯನ್ನ ನೀಗಿಸುವಲ್ಲಿ ಇದು ಸಹಕಾರಿಯಾಗಬಹುದು ಎಂದು ಕೈಗಾರಿಕಾ ಸಚಿವಾಲಯವು ಹೇಳಿದೆ. ಜಪಾನ್ ವರದಿಗಳ ಪ್ರಕಾರ ರೋಬೋಟ್​ಗಳು ಪ್ರಮುಖ ಬೀದಿಗಳಲ್ಲಿ ವಯಸ್ಕರ ನಡಿಗೆಯ ವೇಗಕ್ಕೆ ಸಮಾನವಾಗಿ ಸಂಚರಿಸುವುದು ಕಂಡು ಬಂದಿದೆ ಮತ್ತು ಒಂದು ಹ್ಯಾಂಬರ್ಗರ್ ಅನ್ನು ಅಂಗಡಿಯಿಂದ 500 ಮೀಟರ್ ದೂರದಲ್ಲಿರುವ ಕಚೇರಿಗೆ ತಲುಪಿಸಿತ್ತು ಎಂದು ವರದಿಯಾಗಿದೆ.

ಎಲೆಕ್ಟ್ರಿಕ್ ರೋಬೋಟ್​ಗಳು ರಿಮೋಟ್​ನಲ್ಲಿ ಕಾರ್ಯನಿರ್ವಹಿಸಲಿದ್ದು ಪಾದಚಾರಿ ಮಾರ್ಗಗಳ ನಕ್ಷೆಗಳ ಡೇಟಾವನ್ನ ಅವುಗಳು ಹೊಂದಿರುತ್ತವೆ. ಪ್ರತಿಯೊಂದು ರೋಬೋಟ್​ಗಳು ಆರು ಕ್ಯಾಮರಾಗಳನ್ನ ಹೊಂದಿವೆ.

ರಿಮೋಟ್ ಕಂಟ್ರೋಲ್ ಮೂಲಕ ಈ ರೋಬೋಟ್ ಗಳನ್ನ ನಿಯಂತ್ರಣ ಮಾಡಲಾಗುತ್ತದೆ. ಈ ರೋಬೋಟ್ ಗಳು ಕ್ಯಾಮರಾಗಳ ಸಹಾಯದಿಂದ ಮಾರ್ಗ ಮಧ್ಯೆ ಸಿಗೋ ಪಾದಚಾರಿಗಳನ್ನ ಮತ್ತು ಯಾವುದೇ ಅಡೆತಡೆಗಳನ್ನ ಪತ್ತೆ ಹಚ್ಚುತ್ತದೆ. ಜೊತೆಗೆ ಟ್ರಾಫಿಕ್ ಲೈಟ್ ಬಣ್ಣಗಳನ್ನ ಗುರುತಿಸುತ್ತದೆ. ಹಾಗೆಯೇ ರೋಬೋಟ್​ಗಳು ತಮ್ಮ ಲಿಕ್ವಿಡ್ ಕ್ರಿಸ್ಟಲ್ ಡಿಸ್​ಪ್ಲೇ ಕಣ್ಣುಗಳ ಮೂಲಕ ಎಡ ಮತ್ತು ಬಲಕ್ಕೆ ತಿರುಗುವ ಸಾಮರ್ಥ್ಯವನ್ನ ಕೂಡಾ ಹೊಂದಿದೆ.

suddiyaana