ಟಾಲಿವುಡ್‌ಗೆ ಜಾನ್ವಿಕಪೂರ್ ಎಂಟ್ರಿ – ಬಾಲಿವುಡ್ ಬಾಲೆಗೆ ಅದೃಷ್ಟತರುತ್ತಾ ತೆಲುಗು ಚಿತ್ರ?

ಬಾಲಿವುಡ್ ನ ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ನಟಿ ಜಾನ್ವಿ ಕಪೂರ್ ಈಗ ಟಾಲಿವುಡ್‌ಗೆ ಕಾಲಿಡುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಟಾಲಿವುಡ್ ಹೀರೋ ಜೂನಿಯರ್ ಎನ್‌ಟಿಆರ್‌ಗೆ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ. ‘ಎನ್‌ಟಿಆರ್ 30’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ನಾಯಕನಾಗಿ ನಟಿಸುತ್ತಿದ್ದು, ಇದರಲ್ಲಿ ಬಾಲಿವುಡ್ ಹೀರೋಯಿನ್ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಾಲಿವುಡ್ ಬ್ಯಾಡ್‌ಬಾಯ್‌ಗೆ 57ನೇ ಹುಟ್ಟುಹಬ್ಬದ ಸಂಭ್ರಮ – ಗೆಳೆಯನಿಗೆ ಶುಭಕೋರಿದ ಕಿಂಗ್‌ಖಾನ್
ದಢಕ್ ಸಿನಿಮಾದ ಮೂಲಕ ಬಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ಜಾನ್ವಿ ಕಪೂರ್ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಇತ್ತೀಚೆಗೆ ಯಾಕೋ ಜಾನ್ವಿ ಕಪೂರ್ ಬಾಲಿವುಡ್‌ನಲ್ಲಿ ಜಾದೂ ಮಾಡುತ್ತಿಲ್ಲ. ಹೀಗಾಗಿ ಪರಭಾಷಾ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ನಟಿ ಶ್ರೀದೇವಿ ಕೂಡ ಬಹುಭಾಷಾ ನಟಿಯಾಗಿ ಸೈ ಎನಿಸಿಕೊಂಡಿದ್ದರು. ಈಗ ಅಮ್ಮನ ಹಾದಿಯನ್ನೇ ಜಾನ್ವಿ ಕೂಡ ಫಾಲೋ ಮಾಡ್ತಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಜಾನ್ವಿ ತೆಲುಗಿನಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಜೂನಿಯರ್ ಎನ್‌ಟಿಆರ್ ನಟನೆ ಅಂದ್ರೆ ಇಷ್ಟ ಎಂದು ಕೂಡ ಹೇಳಿದ್ದರು. ಇದೀಗ ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಗೆ ಜಾನ್ವಿ ಕಪೂರ್ ನಾಯಕಿ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಜಾನ್ವಿ ಕಪೂರ್ ಸೌತ್ ಸಿನಿರಂಗದಲ್ಲಿ ಮಿಂಚುತ್ತಾರಾ ಅನ್ನೋದನ್ನೂ ನೋಡಬೇಕಿದೆ.