ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಜಾನ್ವಿ ಕಪೂರ್ – ಬಾಲಿವುಡ್ ಬೆಡಗಿಯ ಫಸ್ಟ್ ಲುಕ್ ರಿಲೀಸ್

ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ಜಾನ್ವಿ ಕಪೂರ್ – ಬಾಲಿವುಡ್ ಬೆಡಗಿಯ ಫಸ್ಟ್ ಲುಕ್ ರಿಲೀಸ್

ಬಾಲಿವುಡ್ ಬ್ಯೂಟಿಕ್ವೀನ್ ಜಾನ್ವಿ ಕಪೂರ್ ತೆಲುಗಿಗೆ ಬರ್ತಿದ್ದಾರೆ ಅಂತಾ ಸುದ್ದಿಯಾಗಿತ್ತು. ಆದರೆ, ಜಾನ್ವಿ ಕಪೂರ್ ಯಾವಾಗ ಬರ್ತಾರೆ. ಯಾರ ಸಿನಿಮಾದಲ್ಲಿ ನಾಯಕಿಯಾಗ್ತಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಜಾನ್ವಿ ಕಪೂರ್ ತೆಲುಗಿನ ತಮ್ಮ ಮೊದಲ ಚಿತ್ರದಲ್ಲೇ ಟಾಲಿವುಡ್ ಕಿಂಗ್ ಜ್ಯೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ಮತ್ತು ಜ್ಯೂನಿಯರ್ ಎನ್‌ಟಿಆರ್ ಅಭಿನಯದ ಚಿತ್ರ ‘ಎನ್​ಟಿಆರ್​ 30’ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್ ಆಗಿದೆ. ಇದರಲ್ಲಿ ಜಾನ್ವಿ ಕಪೂರ್ ಅವರ ಫಸ್ಟ್ ಲುಕ್ ಅಭಿಮಾನಿಗಳ ಮನಗೆದ್ದಿದೆ.

ಇದನ್ನೂ ಓದಿ:  ಶೂಟಿಂಗ್ ವೇಳೆ ಬಿದ್ದು ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ – ಸ್ಕ್ಯಾನಿಂಗ್ ನಲ್ಲಿ ಆತಂಕಕಾರಿ ಮಾಹಿತಿ!  ನಟಿ ಜಾನ್ವಿ ಕಪೂರ್​ (Janhvi Kapoor)  ಬಾಲಿವುಡ್​ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಮೊದಲ ಸಿನಿಮಾ ‘ಧಡಕ್​’ ಹೊರತುಪಡಿಸಿ ಬೇರೆ ಯಾವುದೇ ಚಿತ್ರವೂ ಗೆದ್ದಿಲ್ಲ. ಆದರೂ ಕೂಡ ಶ್ರೀದೇವಿಯವರನ್ನೇ ಹೋಲುವ ರೂಪ ಜಾನ್ವಿಗೆ ಪ್ಲಸ್ ಪಾಯಿಂಟ್. ಬಾಲಿವುಡ್ ನಲ್ಲಿ ಅವಕಾಶ ಕಡಿಮೆಯಾಗುತ್ತಿದ್ದಂತೆ ಜಾನ್ವಿ ದಕ್ಷಿಣ ಭಾರತದ ಸಿನಿಮಾರಂಗದತ್ತ ವಾಲಿದ್ದಾರೆ. ಅದರಲ್ಲೂ ಮೊದಲ ಚಿತ್ರದಲ್ಲೇ ಜೂನಿಯರ್ ಎನ್‌ಟಿಆರ್ (Jr NTR)​  ಜೊತೆ ನಟಿಸಲು ಸಿಕ್ಕಿದ್ದು ಕೂಡಾ ದೊಡ್ಡ ಅವಕಾಶವೇ. ಜೂನಿಯರ್​ ಎನ್​ಟಿಆರ್​ ನಟನೆಯ 30ನೇ(NTR 30) ಸಿನಿಮಾಗೆ ಜಾನ್ವಿ ಕಪೂರ್ ಆಯ್ಕೆ ಆಗಿದ್ದು, ಅವರ ಫಸ್ಟ್​ ಲುಕ್​ ಪೋಸ್ಟರ್​ ಕೂಡಾ ರಿಲೀಸ್ ಆಗಿದೆ. ಜಾನ್ವಿ ಕಪೂರ್​ ವೃತ್ತಿಜೀವನದಲ್ಲಿ ಇದು ಬಹುದೊಡ್ಡ ಸಿನಿಮಾ ಆಗಲಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

suddiyaana