ಸಹೋದರನಿಗೆ ಜನಾರ್ದನ ರೆಡ್ಡಿ ಸವಾಲ್ – ಬಳ್ಳಾರಿ ಕ್ಷೇತ್ರಕ್ಕೆ ಗಣಿಧಣಿ ಪತ್ನಿಯೇ ಅಭ್ಯರ್ಥಿ..!

ಸಹೋದರನಿಗೆ ಜನಾರ್ದನ ರೆಡ್ಡಿ ಸವಾಲ್ – ಬಳ್ಳಾರಿ ಕ್ಷೇತ್ರಕ್ಕೆ ಗಣಿಧಣಿ ಪತ್ನಿಯೇ ಅಭ್ಯರ್ಥಿ..!

ರಾಜಕಾರಣಕ್ಕೆ ಕಮ್ ಬ್ಯಾಕ್ ಮಾಡಿರುವ ಗಣಿಧಣಿ ಜನಾರ್ದನ ರೆಡ್ಡಿ ಸಹೋದರನಿಗೆ ಸವಾಲ್ ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿ ಕಲ್ಯಾಣರಥಯಾತ್ರೆಗೆ ಚಾಲನೆ ನೀಡಿದ ಜನಾರ್ದನ ರೆಡ್ಡಿ ಬಳ್ಳಾರಿ ಕ್ಷೇತ್ರಕ್ಕೆ ಪತ್ನಿ ಅರುಣಾ ಲಕ್ಷ್ಮೀಯನ್ನು ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ದಾರೆ. ಈ ಮೂಲಕ ಸಹೋದರ ಬಿಜೆಪಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ವಿರುದ್ಧ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಪತ್ನಿಯನ್ನು ಕಣಕ್ಕೆ ಇಳಿಸಿದ್ದಾರೆ. ತನ್ನ ಸ್ವಂತ ಪಾರ್ಟಿ ಮೂಲಕ ಸಹೋದರಿನಿಗೆ ಸ್ಪರ್ಧೆ ನೀಡಿದ್ದಾರೆ.

ಇದನ್ನೂ ಓದಿ:  ಕೇಂದ್ರ ಬಜೆಟ್ ಅಧಿವೇಶನ ಆರಂಭ – ಈ ಬಾರಿಯ ನಿರೀಕ್ಷೆಗಳೇನು?

ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜನಾರ್ದನ ರೆಡ್ಡಿ, ‘ನನ್ನ ಆಸ್ತಿ ಮುಟ್ಟುಗೋಲು ಹಾಕುತ್ತಾರೆ ಎಂದು ಹೆದರಿಸುತ್ತಿದ್ದಾರೆ. ನಾನ್ಯಾರಿಗೂ ಹೆದರಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕೇವಲ ಒಂದು ತಿಂಗಳ ಕೂಸು. ಒಂದು ತಿಂಗಳ ಕೂಸು ರಾಜ್ಯದ ಎಲ್ಲ ಪಕ್ಷಗಳ ನಿದ್ದೆಗೆಡಿಸಿದೆ. ಸುಮಾರು 12 ವರ್ಷಗಳ ಕಾಲ ವನವಾಸ ಅನುಭವಿಸಿದ್ದೇನೆ. ಅದರಿಂದ ಸಿಡಿದೆದ್ದು ಪಕ್ಷ ಕಟ್ಟಿದ್ದೇನೆಂದು ಕೆಲವರು ತಿಳಿದಿದ್ದಾರೆ. ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು KRPP ಕಟ್ಟಿಲ್ಲ’ ಎಂದು ಹೇಳಿದ್ದಾರೆ.

suddiyaana