ಕೇವಲ 6 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಾಟ ಮಾಡಲು ಮುಂದಾದ ತಾಯಿ! – ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ!  

ಕೇವಲ 6 ಸಾವಿರ ರೂ.ಗೆ ಹೆತ್ತ ಮಗುವನ್ನೇ ಮಾರಾಟ ಮಾಡಲು ಮುಂದಾದ ತಾಯಿ! – ಅಸಲಿ ಕಥೆ ಬಿಚ್ಚಿಟ್ಟ ಮಹಿಳೆ!  

ಮಕ್ಕಳಿಲ್ಲ ಎಂದು ದೇವರಿಗೆ ಹರಕೆ ಕಟ್ಟಿಕೊಳ್ಳುವುದನ್ನು, ಉತ್ತಮ ಆಸ್ಪತ್ರೆಗಳಿಗೆ ತೆರಳಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎಂಬುವುದನ್ನು ಕೇಳಿದ್ದೇವೆ. ಇನ್ನು ಮಗುವಿಗೆ ಜನ್ಮ ನೀಡಿದ ಮೇಲೆ ತಾಯಿ ಕೂಡ ಲಿಂಗ ಭೇದವಿಲ್ಲದೆ ತನ್ನ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಾಳೆ, ಕಾಳಜಿ ವಹಿಸುತ್ತಾಳೆ. ಆದರೆ ಇಲ್ಲೊಬ್ಬ ಮಹಿಳೆ ಕೇವಲ ಆರು ಸಾವಿರ ರೂಪಾಯಿಗೆ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ!

ಯಾವುದೇ ತಾಯಿಯಾದರೂ ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಮಗು ಒಂದು ಕ್ಷಣ ಕಾಣಿಸದಿದ್ದರೂ ಒದ್ದಾಡುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ತನ್ನ ಮಗುವನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಮುಂದಾಗಿದ್ದಾಳೆ. ಛತ್ತಿಸಗಢದ ಜೆಮ್​​​ಶೆಡ್​​ಪುರದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ ಮಗುವನ್ನು 6000 ರೂ.ಗೆ ತಗೊಳ್ಳಿ ಎಂದು ಸಾರ್ವಜನಿಕವಾಗಿ ಕೂಗಿದ್ದಾಳೆ.

ಇದನ್ನೂ ಓದಿ: ಮಹಿಳೆಯರು ಕುಡಿಯದೇ ಇದ್ರೆ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಪ್ಪಿಸಬಹುದು! – ಇಟಲಿ ಪ್ರಧಾನಿ ಪತಿ​ ವಿವಾದಾತ್ಮಕ ಹೇಳಿಕೆ

ಏನಿದು ಘಟನೆ? 

ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಮಾರಾಟ ಮಾಡಲು ಮುಂದಾಗಿದ್ದಾಳೆ. ಜಮ್ಶೆಡ್‌ಪುರದ ಬಾಗ್‌ಬೇಡ ಟ್ರಾಫಿಕ್ ಕಾಲೋನಿಯಲ್ಲಿ ಮಹಿಳೆ ಮಗುವಿನ ಮಾರಾಟ ಮಾಡಲು ಸಾರ್ವಜನಿಕವಾಗಿ ಕೂಗತೊಡಿದ್ದಳು. ಕೂಡಲೇ ಸ್ಥಳೀಯರು ಮಹಿಳೆಯೊಬ್ಬಳು ಕೇವಲ 2 ತಿಂಗಳ ನವಜಾತ ಶಿಶುವನ್ನು ಮಾರಾಟ ಮಾಡುತ್ತಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಮಗುವನ್ನು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಬಯಲಾಯ್ತು ತಾಯಿಯ ಅಸಲಿ ಕಥೆ!

ಮಗು ಮಾರಾಟಕ್ಕಿದೆ ಎಂದು ಸಾರ್ವಜನಿಕವಾಗಿ ಕೂಗುತ್ತಾ ಓಡಾಡುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದ ಪೋಲಿಸರು ಮಗು ಮಾರಾಟ ಮಾಡಲು ಕಾರಣವನ್ನು ಕೇಳಿದ್ದಾರೆ. ಈ ವೇಳೆ ಆಕೆಯ ಅಸಹಾಯಕ ಕಥೆ ಮುನ್ನೆಲೆಗೆ ಬಂದಿದ್ದು, ಇಡೀ ಸಮಾಜವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಪೊಲೀಸರಿಗೆ ಸಿಕ್ಕಿಬಿದ್ದ ಮಹಿಳೆ ತಾನು ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿರುವ ಬಲರಾಮ್‌ಪುರ ನಿವಾಸಿ. ಸುಮಾರು 2 ತಿಂಗಳ ಹಿಂದೆ ಜೆಮ್‌ಶೆಡ್‌ಪುರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದೆ. ಈ ಮಗು ತನ್ನ ಪ್ರಿಯಕರನಿಂದಾಗಿ ಜನಿಸಿದೆ. ಆ ಬಳಿಕ ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆ ಸಮೀಪದ ಬಸ್​ ನಿಲ್ದಾಣದ ಬಳಿ ವಾಸಿಸಲು ಪ್ರಾರಂಭಿಸಿದೆ. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಸ್ಥಳೀಯ ಜನರು ಆಹಾರವನ್ನು ನೀಡಿದ್ದು, ಹೀಗಾಗಿ ಅಲ್ಲಿಯೇ ಬದುಕುವುದನ್ನು ಮುಂದುವರಿಸಿದೆ. ಆದರೆ ಬದುಕಲು ಇಷ್ಟು  ಆಹಾರ ಸಾಕಾಗುವುದಿಲ್ಲ ಎಂದು ಮಗುವನ್ನು ಮಾರಾಟ ಮಾಡಲು ಮುಂದಾದೆ. ಮಗುವನ್ನು ಮಾರಿದರೆ ಯಾವುದಾದರೂ ಮನೆಗೆ ಹೋಗಿ ಚೆನ್ನಾಗಿ ಬೆಳೆಯುತ್ತಾನೆ ಎಂದು ಅಪೌಷ್ಟಿಕತೆಯಿಂದ ನರಳುತ್ತಿರುವ ತನ್ನ ಮುಗ್ಧ ಮಗುವನ್ನು ತೋರಿಸಿ ಪೊಲೀಸರ ಮಂದೆ ಕಣ್ಣೀರಿಟ್ಟಿದ್ದಾಳೆ.

ಇನ್ನು, ಸ್ಥಳೀಯ ಪೊಲೀಸರು ಪಶ್ಚಿಮ ಬಂಗಾಳದ ಪುರುಲಿಯಾ ಪೊಲೀಸರನ್ನು ಸಂಪರ್ಕಿಸಿ ಮಹಿಳೆ ಮತ್ತು ಆಕೆಯ ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

suddiyaana