ಜಮ್ಮು ರೈಲು ನಿಲ್ದಾಣ ಸ್ಫೋಟಿಸುವುದಾಗಿ ಪಾರಿವಾಳ ಮೂಲಕ ಸಂದೇಶ ಕಳುಹಿಸಿದ ಪಾಕ್!

ಇತ್ತೀಚಿನ ದಿನಗಳಲ್ಲಿ ಸ್ಕೂಲ್, ಬಸ್ ನಿಲ್ದಾಣ, ಏರಪೋರ್ಟ್‌ಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಇಮೇಲ್ ಬರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದೀಗ ಪಾರಿವಾಳವೊಂದು ಜಮ್ಮು ಕಾಶ್ಮೀರದ ರೈಲು ನಿಲ್ದಾಣವನ್ನ ಸ್ಪೋಟಿಸುವ ಸಂದೇಶ ಹೊತ್ತೊಯ್ಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆ ಪಾರಿವಾಳವನ್ನ ಭದ್ರತಾ ಪಡೆಗಳು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: ಭಾರತ ಮಹಿಳಾ ತಂಡದ ಎಡಗೈ ಸ್ಪಿನ್ನರ್ ಗೌಹರ್ ನಿವೃತ್ತಿ – 17 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ
ಏನಿದು ಘಟನೆ?
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಭಾರತ ಗಡಿಭಾಗಕ್ಕೆ ವಿವಿಧ ಸಂದೇಶಗಳನ್ನು ಹೊತ್ತ ಬಲೂನ್, ಧ್ವಜಗಳು ಮತ್ತು ಪಾರಿವಾಳಗಳನ್ನು ಕಳುಹಿಸುತ್ತಿದೆ. ಆ.18ರಂದು ಪಾರಿವಾಳವೊಂದು ಪಾಕಿಸ್ತಾನದಿಂದ ಬಂದಿದೆ. ಫಾರ್ವರ್ಡ್ ಡಿಫೆನ್ಸ್ ಪೋಸ್ಟ್-69ರ ಸಮೀಪದ ಕಾತ್ಮಾರಿಯಾ ಬಿಒಪಿಯಲ್ಲಿ ಬಿಎಸ್‌ಎಫ್‌ನ 7ನೇ ಬೆಟಾಲಿಯನ್‌ನ ಗಸ್ತು ತಂಡವು ಈ ಪಾರಿವಾಳವನ್ನು ಪತ್ತೆ ಮಾಡಿದೆ. ಆ ಪಾರಿವಾಳದ ಕಾಲಿಗೆ ಕಟ್ಟಲಾದ ಟಿಪ್ಪಣಿಯಲ್ಲಿ ಉರ್ದು ಮತ್ತು ಇಂಗ್ಲಿಷ್‌ನಲ್ಲಿ “ಕಾಶ್ಮೀರ ಹಮಾರಾ ಹೈ” (ಕಾಶ್ಮೀರ ನಮ್ಮದು), “ವಕ್ತ್ ಆ ಗಯಾ ಹೈ, ಆ ಜಾಯೇಗಾ” (ಸಮಯ ಬಂದಿದೆ, ಬರುತ್ತೆ) ಮತ್ತು “ಜಮ್ಮು ಸ್ಟೇಷನ್ ಐಇಡಿ ಬ್ಲಾಸ್ಟ್” ಎಂದು ಬರೆಯಲಾಗಿತ್ತು.
ಇದೀಗ ಈ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪಾರಿವಾಳ ಉಗುರುಗಳಿಗೆ ಚೀಟಿಯನ್ನು ಕಟ್ಟಲಾಗಿತ್ತು. ಪತ್ರದಲ್ಲಿ ಜಮ್ಮು ರೈಲು ನಿಲ್ದಾಣ ಸ್ಫೋಟಿಸುವ ಸಂದೇಶವಿತ್ತು. ಆದರೆ ಬೆದರಿಕೆ ಪತ್ರವನ್ನು ಹೊತ್ತ ಪಾರಿವಾಳವನ್ನು ಸೆರೆಹಿಡಿಯುತ್ತಿರುವುದು ಇದೇ ಮೊದಲು ಎಂದಿದ್ದಾರೆ. ಹೀಗಾಗಿ ಭದ್ರತಾ ಸಂಸ್ಥೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿವೆ. ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ನೋಡಿರಿ

