ತವರಿನಲ್ಲಿ ಜಾರಿ ಬಿದ್ದ ಕರ್ನಾಟಕ – ಚೊಚ್ಚಲ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿದ ಜಮ್ಮು-ಕಾಶ್ಮೀರ

ತವರಿನಲ್ಲಿ ಜಾರಿ ಬಿದ್ದ ಕರ್ನಾಟಕ –  ಚೊಚ್ಚಲ ಟ್ರೋಫಿ ಗೆದ್ದು ಚರಿತ್ರೆ ಸೃಷ್ಟಿಸಿದ ಜಮ್ಮು-ಕಾಶ್ಮೀರ

ರಣಜಿ ಟ್ರೋಫಿ ಕೊನೆಗೂ ಕರ್ನಾಟಕದ ಕೈ ತಪ್ಪಿದೆ. ಫೈನಲ್ ಪಂದ್ಯದಲ್ಲಿ ಗೆದ್ದು ಜಮ್ಮು- ಕಾಶ್ಮೀರ ಇತಿಹಾಸ ನಿರ್ಮಿಸಿದೆ. ಜೊತೆಗೆ ಜಮ್ಮು- ಕಾಶ್ಮೀರ ಮೊದಲ ಬಾರಿಗೆ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದು ಬೀಗಿದೆ.

ಇದನ್ನೂ ಓದಿ:ಸಂಜು ಕೈಯಲ್ಲಿ ಬ್ಯಾಟಿಂಗ್ ಬಲ.. ಅತಿ ಆತ್ಮವಿಶ್ವಾಸ ಬಿಡ್ತಾರಾ ಸೂರ್ಯ? – ಭಾರತಕ್ಕೆ ಕಾಡುತ್ತಾ ಈಡನ್ ಗಾರ್ಡನ್?

ಜಮ್ಮು- ಕಾಶ್ಮೀರ ಕ್ರಿಕೆಟ್ ತಂಡ ರಣಜಿಯಲ್ಲಿ ಇತಿಹಾಸ ಸೃಷ್ಟಿಸಿದೆ. ರಣಜಿ ಟ್ರೋಫಿ ಇತಿಹಾಸದಲ್ಲಿ ಜಮ್ಮು-ಕಾಶ್ಮೀರ ತಂಡವು ಫೈನಲ್ ತಲುಪಿದ್ದು ಇದೇ ಮೊದಲು. ಮೊದಲ ಬಾರಿ ಎಂಟ್ರಿಕೊಟ್ಟರೂ ಕೂಡಾ ಜಮ್ಮು-ಕಾಶ್ಮೀರ ಟ್ರೋಫಿ ಗೆದ್ದು ಬೀಗಿದೆ. ಫೈನಲ್ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿದ್ದು, ತವರಿನ ನೆಲದಲ್ಲಿ ಕರ್ನಾಟಕ ಜಾರಿ ಬಿದ್ದಿದೆ.

ಕರ್ನಾಟಕದ ಪ್ಲೇಯಿಂಗ್ ಹನ್ನೊಂದರಲ್ಲಿ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದ ಐದು ಆಟಗಾರರು ಇದ್ದರು. ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ಧ್ ಕೃಷ್ಣ ಕರ್ನಾಟಕ ತಂಡ ಬಲವಾಗಿದ್ದರು. ಜಮ್ಮು- ಕಾಶ್ಮೀರದ ಪ್ಲೇಯಿಂಗ್ ಹನ್ನೊಂದರಲ್ಲಿರುವ ಯಾವುದೇ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವವಿರಲಿಲ್ಲ. ಇದರ ಹೊರತಾಗಿಯೂ, ಕರ್ನಾಟಕ ತಂಡವು ಪರಾಸ್ ಡೋಗ್ರಾ ನೇತೃತ್ವದ ತಂಡಕ್ಕೆ ಕಠಿಣ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ಟಾಸ್ ಗೆದ್ದ ಜಮ್ಮು-ಕಾಶ್ಮೀರ ನಾಯಕ ಪರಾಸ್ ಡೋಗ್ರಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಜಮ್ಮು- ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಗಳಿಸಿತು. ಶುಭಂ ಪುಂಡೀರ್ (121) ಶತಕ ಬಾರಿಸಿ ಮಿಂಚಿದರು. ಯಾವರ್ ಹಸನ್ (88), ಸಾಹಿಲ್ ಲೋತ್ರಾ (72), ಕನ್ಹಯ್ಯಾ ವಾಧವನ್ (70), ಪರಾಸ್ ಡೋಗ್ರಾ (70), ಮತ್ತು ಅಬ್ದುಲ್ ಸಮದ್ ಕೂಡ ಅರ್ಧಶತಕಗಳನ್ನು ಗಳಿಸಿ ಉತ್ತಮ ಇನ್ನಿಂಗ್ಸ್ ಆಡಿದರು. ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 5 ವಿಕೆಟ್ ಕಬಳಿಸಿದರು. ಆಕಿಬ್ ನಬಿ ಅದ್ಭುತ ಬೌಲಿಂಗ್ ದಾಳಿ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಗಳಿಸಿದ್ದ ಜಮ್ಮು-ಕಾಶ್ಮೀರ ತಂಡವು ಕರ್ನಾಟಕವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 293 ರನ್‌ಗಳಿಗೆ ಆಲೌಟ್ ಮಾಡಿ 291 ರನ್‌ಗಳ ಮುನ್ನಡೆ ಸಾಧಿಸಿತು. ಕರ್ನಾಟಕ ಪರ ಮಾಯಾಂಕ್ ಅಗರ್ವಾಲ್ ಶತಕ ಗಳಿಸಿ 160 ರನ್ ಗಳಿಸಿದರು.

Sulekha

Leave a Reply

Your email address will not be published. Required fields are marked *