ಕುಡಿಯುವ ನೀರು ಪೋಲು ಮಾಡಿದವರಿಗೆ ದಂಡದ ಬಿಸಿ – ಕಾರು ತೊಳೆದ 22 ಕುಟುಂಬಗಳಿಗೆ ಬಿತ್ತು 1. 1 ಲಕ್ಷ ರೂ. ಫೈನ್‌!

ಕುಡಿಯುವ ನೀರು ಪೋಲು ಮಾಡಿದವರಿಗೆ ದಂಡದ ಬಿಸಿ – ಕಾರು ತೊಳೆದ 22 ಕುಟುಂಬಗಳಿಗೆ ಬಿತ್ತು 1. 1 ಲಕ್ಷ ರೂ. ಫೈನ್‌!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ. ಕುಡಿಯೋಕೂ ನೀರಿಲ್ಲ.. ತೊಳೆಯೋಕೂ ನೀರಿಲ್ಲ ಅನ್ನುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಂಗಳೂರು ಜಲಮಂಡಳಿ ನಗರದ ನಿವಾಸಿಗಳಲ್ಲಿ ನೀರನ್ನು ಮಿತವಾಗಿ ಬಳಸಿ. ಅನಗತ್ಯ ಚಟುವಟಿಕೆಗಳಿಗೆ ನೀರನ್ನು ಬಳಸಬೇಡಿ ಅಂತಾ ಹೇಳಿತ್ತು. ಅಷ್ಟೇ ಅಲ್ಲದೇ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಇದೀಗ ಜಲಮಂಡಳಿಯ ಅಧಿಕಾರಿಗಳು ಬೆಂಗಳೂರಿನ 22 ಕುಟುಂಬಗಳಿಗೆ ದಂಡ ಹಾಕಿದೆ. ಒಟ್ಟು 1 ಲಕ್ಷ 10 ಸಾವಿರ ರೂಪಾಯಿಯನ್ನು ವಸೂಲಿ ಮಾಡಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಾಂಡ್ಯಾಗೆ ಸೋಲಿನ ಸ್ವಾಗತ ಕೋರಿದ ಗಿಲ್ – ಗೆಲ್ಲುವ ಮ್ಯಾಚ್‌ ಸೋತಿದ್ದು ಹೇಗೆ ಮುಂಬೈ ಇಂಡಿಯನ್ಸ್?

ಸಿಲಿಕಾನ್ ಸಿಟಿಯಲ್ಲಿ ಜಲಕ್ಷಾಮದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕುಡಿಯೋ ನೀರನ್ನು ವ್ಯರ್ಥ ಮಾಡಲು ಬಳಕೆ ಮಾಡಿದವರಿಗೆ ದಂಡಾಸ್ತ್ರ ಪ್ರಯೋಗ ಮಾಡಿದೆ. ಕುಡಿಯೋ ನೀರನ್ನು ಪೋಲು ಮಾಡುವವರಿಗೆ ಜಲಮಂಡಳಿ ಈಗಾಗಲೇ ಎಚ್ಚರಿಕೆ ನೀಡಿದ್ದು, ಅನ್ಯ ಬಳಕೆಗೆ ನೀರು ಬಳಸಿದವರಿಗೆ ದಂಡ ಹಾಕಿದೆ. ವಿವಿಧ ಕಾರಣಗಳಿಗೆ ಕುಡಿಯೋ ನೀರು ವ್ಯರ್ಥ ಮಾಡಿದವರಿಗೆ 5 ಸಾವಿರ ರೂಪಾಯಿ ದಂಡ ನಿಗದಿಮಾಡಿತ್ತು. ಇದೀಗ ವಿವಿಧ ವಿಭಾಗಗಳಿಂದ ನೀರನ್ನ ಅನ್ಯ ಬಳಕೆಗೆ ಬಳಸಿದವರಿಂದ ಬರೋಬ್ಬರಿ 1 ಲಕ್ಷದ 10 ಸಾವಿರ ದಂಡ ವಸೂಲಿ ಮಾಡಿದೆ.

ಬೋರ್ ವೆಲ್ ಅಥವಾ ನಲ್ಲಿ ನೀರನ್ನು ವಾಹನ ತೊಳೆಯಲು ಬಳಸಬಾರದು. ರಸ್ತೆಗೆ ನೀರು ಸುರಿದವರು, ಗಿಡಗಳಿಗೆ ಕುಡಿಯುವ ನೀರು ಬಳಸಿದವರಿಗೂ ದಂಡ ಪ್ರಯೋಗದ ಮೂಲಕ ನೀರಿನ ಮಿತ ಬಳಕೆಯ ಪಾಠ ಮಾಡಲಾಗುತ್ತಿದೆ. ವಿವಿಧ ವಲಯಗಳಲ್ಲಿ ಜಲಮಂಡಳಿ ಅಧಿಕಾರಿಗಳು ಬೆಂಗಳೂರಿನಾದ್ಯಂತ ದಂಡ ಹಾಕಲಾಗುತ್ತಿದೆ.

Shwetha M