ಜೈಸ್ವಾಲ್ ಸಡನ್ U- ಟರ್ನ್? ತಂಡದಿಂದ ಕೈ ಬಿಡದಂತೆ ರಿಕ್ವೆಸ್ಟ್
ಮುಂಬೈನಲ್ಲಿ ‘ಯಶಸ್ವಿ’ ಸಿಗುತ್ತಾ?

ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಮುಂಬೈ ಕ್ರಿಕೆಟ್ ತಂಡ ಬಿಟ್ಟು ಗೋವಾ ತಂಡಕ್ಕೆ ಸೇರಲು ಪ್ಲ್ಯಾನ್ ಮಾಡಿದ್ರು. ಅದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಕಡೆಯಿಂದ ನಿರಾಕ್ಷೇಪಣಾ ಪತ್ರವನ್ನೂ ನೀಡುವಂತೆ ಮನವಿ ಮಾಡಿದ್ದರು. ಆದರೆ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಗೋವಾ ತಂಡಕ್ಕೆ ಹೋಗಲು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂಪಡೆಯುವಂತೆ ಎಂಸಿಎಯನ್ನು ಕೇಳಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದ್ದು ಮುಂಬರುವ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರವಾಗಿಯೇ ಆಡಲು ಬಯಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮುಂಬೈ ತಂಡ ತೊರೆದು ಗೋವಾಕ್ಕೆ ಹೋಗಲು ಪಡೆದಿದ್ದ NOCಯನ್ನು ಹಿಂಪಡೆಯಲು ಮುಂಬೈ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದ್ದಾರೆ. ಕೌಟುಂಬಿಕ ಕಾರಣಗಳಿಂದಾಗಿ ಗೋವಾಕ್ಕೆ ಹೋಗುವ ಯೋಜನೆಯನ್ನು ಕೈಬಿಟ್ಟಿದ್ದು ಮುಂದಿನ ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಆಡಲು ಲಭ್ಯವಿರುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಜೈಸ್ವಾಲ್ ಅವರು MCAಗೆ ಇಮೇಲ್ ಕಳುಹಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಈ ಇ ಮೇಲ್ ಗೆ MCA ಇನ್ನೂ ಯಾವುದೇ ರೆಸ್ಪಾನ್ಸ್ ಮಾಡಿಲ್ಲ.
ಗೋವಾದಲ್ಲಿ ನಾಯಕತ್ವ ಸಿಗುತ್ತೆ ಎಂದಿದ್ದ ಜೈಸ್ವಾಲ್
ಏಪ್ರಿಲ್‌ನಲ್ಲಿ ಜೈಸ್ವಾಲ್ ಅವರು ಮುಂಬೈನಿಂದ ಗೋವಾಕ್ಕೆ ಹೋಗುವ ಬಗ್ಗೆ ಕೇಳಿದಾಗ MCAಗೆ ಅಚ್ಚರಿಯಾಗಿತ್ತು. ಗೋವಾದಿಂದ ಅವರಿಗೆ ನಾಯಕತ್ವದ ಅವಕಾಶ ಸಿಕ್ಕಿದೆ ಎಂದು ಹೇಳಲಾಗಿತ್ತು. “ಗೋವಾ ನನಗೆ ಹೊಸ ಅವಕಾಶವನ್ನು ನೀಡಿದೆ ಮತ್ತು ನಾಯಕತ್ವದ ಜವಾಬ್ದಾರಿಯನ್ನು ನೀಡಿದೆ. ಭಾರತಕ್ಕಾಗಿ ಉತ್ತಮವಾಗಿ ಆಡುವುದು ನನ್ನ ಮೊದಲ ಗುರಿಯಾಗಿದೆ. ನಾನು ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿದ್ದಾಗ, ಗೋವಾ ಪರವಾಗಿ ಆಡುತ್ತೇನೆ ಮತ್ತು ತಂಡವನ್ನು ಪಂದ್ಯಾವಳಿಯ ಆಳಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಇದು ನನಗೆ ಬಂದ ಅವಕಾಶ ಮತ್ತು ನಾನು ಅದನ್ನು ಸ್ವೀಕರಿಸಿದ್ದೇನೆ” ಎಂದು ಜೈಸ್ವಾಲ್ ಅವರು ತಿಳಿಸಿದ್ದರು. ಅವರ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರಾದ ವಾಸಿಂ ಜಾಫರ್ ಸೇರಿದಂತೆ ಅನೇಕ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಇದು ಸರಿಯಾದ ನಿರ್ಧಾರ ಅಲ್ಲ ಎಂದು ಹೇಳಿದ್ರು.
ಜೈಸ್ವಾಲ್ ನಿರ್ಧಾರಕ್ಕೆ ಅಸಮಾಧಾನ ಕಾರಣ
ಸಿಂಪಲ್ ಆಗಿ ಹೇಳಬೇಕಾದ್ರೆ ಯಶಸ್ವಿ ಜೈಸ್ವಾಲ್ ಅವರು ಮುಂಬೈ ತಂಡದಲ್ಲಿ ಅಸಮಾಧಾನ ಆಗಿದ್ದರಿಂದ ಗೋವಾ ತಂಡವನ್ನು ಸೇರಲು ನಿರ್ಧರಿಸಿದ್ದರು. ಅವರನ್ನು ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ಜೊತೆಗಿನ ಮುನಿಸು ಇದಕ್ಕೆ ಕಾರಣ ಎಂದು ವರದಿಯಾಗಿತ್ತು. ಆದರೆ ಈಗ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ. ಅವರು ಮತ್ತೆ ಮುಂಬೈ ತಂಡಕ್ಕೆ ಆಡಲು ಬಯಸುತ್ತಿದ್ದಾರೆ. ಅದಕ್ಕಾಗಿ MCAಗೆ ಮನವಿ ಮಾಡಿದ್ದಾರೆ. ಅವರಿಗೆ ಗೋವಾ ತಂಡದಲ್ಲಿ ನಾಯಕತ್ವದ ಜವಾಬ್ದಾರಿ ಸಿಗುವ ಸಾಧ್ಯತೆ ಇತ್ತು. ಸಚಿನ್ ತೆಂಡೂಲ್ಕರ್ ಅವರ ಪುತ್ರ ಮುಂಬೈ ತೊರೆದು ಗೋವಾ ತಂಡದಲ್ಲಿ ಆಡುತ್ತಿದ್ದಾರೆ. ಅದೇ ರೀತಿ ಯಶಸ್ವಿ ಜೈಸ್ವಾಲ್ ಅವರು ಸಹ ಹೊರಟದ್ದು ದೊಡ್ಡ ಮಟ್ಟಿನ ಸುದ್ದಿಯಾಗಿತ್ತು. ಆದರೆ ಈಗ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ಮಿಂಚಲಿದ್ದಾರೆ ಜೈಸ್ವಾಲ್
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ 391 ರನ್ ಗಳಿಸಿದ್ದರು. ಇದರಲ್ಲಿ ಎರಡು ಅರ್ಧ ಶತಕ ಮತ್ತು ಒಂದು ಶತಕ ಸೇರಿವೆ. ಭಾರತವು ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಆಡಿದಾಗ, ಜೈಸ್ವಾಲ್ 700ಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದ್ದರು. ಹೀಗಾಗಿ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಭಾರತ ತಂಡಕ್ಕೆ ಪ್ರಮುಖ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿರುವುದರಿಂದ ಜೈಸ್ವಾಲ್ ಅವರೊಂದಿಗೆ ಆರಂಭಿಕ ಬ್ಯಾಟರ್ ಆಗಿ ಕೆಎಲ್ ರಾಹುಲ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಒಟ್ನಲ್ಲಿ ಜೈಲ್ವಾಸ್ ಯೂರ್ಟನ್ ಹೊಡೆದಿದ್ದು, ಮುಂಬೈನಿಲ್ಲೇ ಆಡೋಕೆ ನಿರ್ಧಾರ ಮಾಡಿದ್ದಾರೆ.