ಜೈಲರ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ – ಆಗಸ್ಟ್ 10 ರಂದು ರಿಲೀಸ್

ಜೈಲರ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ – ಆಗಸ್ಟ್ 10 ರಂದು ರಿಲೀಸ್

ತಲೈವಾ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಕಲಾವಿದರ ಆಯ್ಕೆಯಿಂದಲೇ ಈ ಸಿನಿಮಾ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಈ ಪ್ಯಾನ್ ಇಂಡಿಯಾ ಜಮಾನದಲ್ಲಿ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ತಲುಪಲು ಅನುಕೂಲವಾಗುವಂತೆ ಕಲಾವಿದರ ಆಯ್ಕೆ ಮಾಡಿಕೊಂಡಿರುವ ಜೈಲರ್ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಇದನ್ನೂ ಓದಿ:  ‘ಜೈಲರ್’ ಶೂಟಿಂಗ್‌ನಲ್ಲಿ ರಜನಿಗೆ ಶಿವಣ್ಣ ಸಾಥ್- ಸಿನಿ ದಿಗ್ಗಜರನ್ನು ಒಟ್ಟಿಗೆ ನೋಡಿ ಖುಷಿಯಾದ ಫ್ಯಾನ್ಸ್

ಆಗಸ್ಟ್ 10ರಂದು ಜೈಲರ್ ಸಿನಿಮಾ ತೆರೆಗೆ ಬರಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ, ಆಗಸ್ಟ್ 10ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಎಲ್ಲಾ ಭಾಷೆಯ ಕಲಾವಿದರು ಇರುವುದರಿಂದ ಜೈಲರ್ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. ಶಿವಣ್ಣನ ಲುಕ್ ಕೂಡ ಸಖತ್ ಕ್ರೇಜ್ ಹುಟ್ಟುಹಾಕಿದೆ. ಹಾಗೆಯೇ ಮಲಯಾಳಂ ನಟರಾದ ಮೋಹನ್‌ ಲಾಲ್, ವಿನಾಯಕನ್, ಬಾಲಿವುಡ್ ನಟ ಜಾಕಿ ಶ್ರಾಫ್, ತೆಲುಗು ನಟರಾದ ಸುನೀಲ್, ನಾಗ ಬಾಬು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಉಳಿದಂತೆ, ಬಹುಭಾಷಾ ನಟಿ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ಹಾಸ್ಯ ನಟ ಯೋಗಿ ಬಾಬು, ಕನ್ನಡದ ನಟ ಕಿಶೋರ್, ಬಿಲ್ಲಿ ಮುರಳಿ, ಕರಾಟೆ ಕಾರ್ತಿ, ಕಲೈ ಅರಸನ್, ಜಫರ್ ಸಾಧಿಕ್ ಸೇರಿದಂತೆ ದೊಡ್ಡ ತಾರಾಬಳಗವೆ ಈ ಸಿನಿಮಾದಲ್ಲಿ ಇದೆ.

suddiyaana