ಜೈಲರ್‌ 2 ಚಿತ್ರಕ್ಕೆ ಹೊಸ ಹೆಸರು! – ಅತೀ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟ ತಲೈವಾ!

ಜೈಲರ್‌ 2 ಚಿತ್ರಕ್ಕೆ ಹೊಸ ಹೆಸರು! – ಅತೀ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟ ತಲೈವಾ!

ಕಳೆದ ವರ್ಷ ತೆರೆಕಂಡ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು.. ತಲೈವಾ ಅಬ್ಬರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ನಿರ್ಮಾಪಕರಿಗೆ ದೊಡ್ಡ ಲಾಭ ಮಾಡಿಕೊಟ್ಟಿತ್ತು. ಮತ್ತೆ ಪಾರ್ಟ್ 2 ದರ್ಶನ ಯಾವಾಗ? ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಜೈಲರ್‌ 2 ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ. ತೆರೆಮರೆಯಲ್ಲಿ ಟೈಟಲ್‌ ಬದಲಾವಣೆ ಕುರಿತು ಪ್ಲ್ಯಾನ್‌ ನಡೆಯುತ್ತಿದೆ.

ಇದನ್ನೂ ಓದಿ:ಮೆಟ್ರೋ  ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ – ನಾಲ್ಕು ದಿನ ಮೆಟ್ರೋ ಅವಧಿ ವಿಸ್ತರಣೆ!

ಹೌದು, ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಶಿವರಾಜ್​ಕುಮಾರ್ ಹಾಗೂ ಮೋಹನ್​ಲಾಲ್ ಅತಿಥಿ ಪಾತ್ರ ಗಮನ ಸೆಳೆಯಿತು. ವಿಲನ್ ಪಾತ್ರದಲ್ಲಿ ಮಲಯಾಳಂನ ವಿನಾಯಕನ್ ಅವರು ಭರ್ಜರಿ ಅಂಕ ಗಿಟ್ಟಿಸಿಕೊಂಡರು. ದೊಡ್ಡ ಮಟ್ಟದಲ್ಲಿ ಗೆದ್ದ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ನೆಲ್ಸನ್ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಮೊದಲ ಡ್ರಾಪ್ಟ್ ರೆಡಿಯಾಗಿದ್ದು, ರಜನಿಕಾಂತ್ ಮತ್ತು ನಿರ್ಮಾಣ ಸಂಸ್ಥೆಗೆ ಕಥೆ ಇಷ್ಟವಾಗಿದೆ. ಡೈರೆಕ್ಟರ್ ಹೆಣೆದ ಕಥೆಗೆ ಮುಂದುವರೆಯಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರೆ.

ಇನ್ನು ಜೈಲರ್‌ 2 ಸಿನಿಮಾದ  ಟೈಟಲ್ ಬದಲಿಸುವ ಸಾಧ್ಯತೆ ಇದೆ. ‘ಜೈಲರ್ 2’ ಅಥವಾ ‘ಹುಕುಮ್’ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರತಂಡದವರು ಹುಕುಮ್‌ ಟೈಟಲ್‌ಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ ಎನ್ನಲಾಗಿದೆ. ಲೋಕೇಶ್ ಕನಗರಾಜ್ ಜೊತೆಗಿನ ಸಿನಿಮಾದ ನಂತರ ಜೈಲರ್ 2ಗೆ ಮುಹೂರ್ತ ಫಿಕ್ಸ್ ಆಗಲಿದೆ. 2025ರ ಶುರುವಿನಲ್ಲಿ ತಲೈವಾ ಜೊತೆ ನೆಲ್ಸನ್ ಶೂಟಿಂಗ್‌ಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಟೈಟಲ್‌ ಬದಲಾವಣೆ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡದ ಕಡೆಯಿಂದ  ಅಧಿಕೃತ ಅಪ್‌ಡೇಟ್‌ಗಾಗಿ ಕಾದುನೋಡಬೇಕಿದೆ.

Shwetha M