ಕೋರ್ಟ್ ಆದೇಶವಿದ್ರೂ ಮನೆಯೂಟ ನಿರಾಕರಣೆ! – ಪವಿತ್ರಾಗೌಡ ತಾಯಿಯಿಂದ ಕೋರ್ಟ್ಗೆ ಅಫಿಡವಿಟ್ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟಿ ಪವಿತ್ರಾಗೌಡ ಜೈಲುವಾಸ ಅನುಭವಿಸುತ್ತಿದ್ದಾರೆ. ಇದೀಗ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾಗೆ ಮನೆಯೂಟ ನೀಡಲು ಕೋರ್ಟ್ ಅನುಮತಿಸಿತ್ತು. ಆದ್ರೆ ಜೈಲಾಧಿಕಾರಿಗಳು ಮನೆಯೂಟ ನೀಡಲು ಅವಕಾಶ್ ಮಾಡಿಕೊಟ್ಟಿರಲಿಲ್ಲ. ಇದೀಗ ಕೋರ್ಟ್ ಆದೇಶವನ್ನ ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಪವಿತ್ರಾಗೌಡ ತಾಯಿ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲೇ ನಡೆಯಲಿವೆ RCB ಪಂದ್ಯಗಳು – ಕಂಡೀಷನ್ ಹಾಕಿ ಓಕೆ ಎಂದ RCB ಮ್ಯಾನೇಜ್ಮೆಂಟ್
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿಗಳು ಮನೆಯೂಟ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ವಾರಕ್ಕೊಮ್ಮೆ ಮನೆಯೂಟ ನೀಡಲು ಆದೇಶ ಮಾಡಿತ್ತು. ಪವಿತ್ರಗೌಡ , ಲಕ್ಷ್ಮಣ್, ನಾಗರಾಜ್ ಗೆ ಮನೆಯೂಟ ನೀಡಲು ಕೋರ್ಟ್ ಆದೇಶ ಮಾಡಿ, ಕೋರ್ಟ್ ಆದೇಶವನ್ನು ತಪ್ಪದೆ ಪಾಲಿಸುವಂತೆ ಸೂಚಿಸಿತ್ತು. ಆದ್ರೆ ಕೋರ್ಟ್ ಆದೇಶ ಇದ್ರು ಕೂಡ ಮನೆಯೂಟ ನೀಡಲು ಜೈಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ಪವಿತ್ರಗೌಡ ತಾಯಿ ಹಾಗು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಕೆ ಮುಂದಾಗಿದ್ದಾರೆ. ಇತ್ತ ಪವಿತ್ರಗೌಡ ತಾಯಿ ಭಾಗ್ಯಮ್ಮ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಆದ್ರೆ ಅರ್ಜಿಯಲ್ಲಿ ಯಾರ ವಿರುದ್ದ ಕ್ರಮ ಆಗಬೇಕು ಎಂದು ನಿರ್ಧಿಷ್ಟವಾಗಿ ಉಲ್ಲೇಖ ಮಾಡಿಲ್ಲ. ಹೀಗಾಗಿ ಯಾರ ವಿರುದ್ದ ಕ್ರಮ ಜರುಗಿಸಬೇಕು ಎಂದು ತಿದ್ದುಪಡಿ ಮಾಡಿ ಸೋಮವಾರ ಅರ್ಜಿ ಸಲ್ಲಿಕೆ ಮಾಡಿ. ಸೋಮವಾರ ಅರ್ಜಿ ವಿಚಾರಣೆ ಮಾಡೊಣ ಎಂದು 57ನೇ ಸೆಷನ್ಸ್ ನ್ಯಾಯಾಲಯ ಸೂಚಿಸಿದೆ.
ಇನ್ನು ಈ ವಿಚಾರವಾಗಿ ಪವಿತ್ರಾ ಗೌಡ ಪರ ವಾದ ಮಾಡಿದ ಲಾಯರ್ ಖಡಕ್ ಆಗಿ ಕೆಲವೊಂದು ಪಾಯಿಂಟ್ಸ್ ಮುಂದಿಟ್ಟಿದ್ದರು . ವಕೀಲ ನಾರಾಯಣಸ್ವಾಮಿ ಪವಿತ್ರಾ ಗೌಡ ಪರ ವಾದಿಸಿದ್ದರು . ಪವಿತ್ರಗೌಡಗೆ ಜೈಲೂಟದಿಂದ ಅಲರ್ಜಿಯಾಗಿದೆ. ಮೈ ಮೇಲೆ ಗುಳ್ಳೆಯಾಗಿದೆ. ಅಲ್ಲದೇ ಹೊಟ್ಟೆ ನೋವು, ಫುಡ್ ಪಾಯಿಸನ್ ಆಗ್ತಿದೆ. ಹೀಗಾಗಿ ಮನೆ ಊಟವನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಇದೀಗ ಪವಿತ್ರಾ ಗೌಡಗೆ ಮನೆಯೂಟ ಸಿಗುತ್ತಾ ಅಂತ ಕಾದುನೋಡ್ಬೇಕು.

ನೋಡಿರಿ

