ಕೇಡಿ ಜೈದೇವ್ ಈಗ ದಿಯಾ ಕೈಗೊಂಬೆ – ಅವಮಾನ, ಹೀಯಾಳಿಸಿದರೂ ಬೇಬಿನೇ ಬೇಕಂತೆ..!

ಕೇಡಿ ಜೈದೇವ್ ಈಗ ದಿಯಾ ಕೈಗೊಂಬೆ – ಅವಮಾನ, ಹೀಯಾಳಿಸಿದರೂ ಬೇಬಿನೇ ಬೇಕಂತೆ..!

ಅಮೃತಧಾರೆ ಧಾರಾವಾಹಿಯಲ್ಲಿ ಈಗ ಜೈದೇವ್ ಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತಿದೆ. ಮರ್ಯಾದೆ ಹೋದರೂ, ಅವಮಾನ ಆದರೂ, ಹೀಯಾಳಿಸಿದರೂ ಜೈದೇವ್‌ ಬೇಬಿ ಹಿಂದೆ ಹಿಂದೆ ಹೋಗುತ್ತಿದ್ದಾನೆ. ಆದರೆ, ದಿಯಾ ಜೈದೇವ್ ನನ್ನು ನಡೆಸಿಕೊಳ್ಳುವ ರೀತಿಗೆ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಮೃತಧಾರೆ ಸೀರಿಯಲ್‌ ಎಂಡ್? – NO.1 ಧಾರಾವಾಹಿ ಜಾಗಕ್ಕೆ ಜಗದ್ದಾತ್ರೀ.. ರಗಡ್‌ ಲುಕ್‌ನಲ್ಲಿ ಮೋಕ್ಷಿತಾ ಪೈ!

ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ದುರಂಹಕಾರ ಇಳಿದಿಲ್ಲ. ಅಣ್ಣ ಗೌತಮ್ ದಿವಾನ್ ಬಳಿ ಕ್ಷಮೆ ಕೇಳಲು ಕೊಬ್ಬು ಬಿಡುತ್ತಿಲ್ಲ. ಬೇರೆ ಎಲ್ಲಿಯಾದರೂ ಹೋಗಲು ಬಿಡಿಗಾಸು ದುಡ್ಡಿಲ್ಲ. ಹೀಗಾಗಿ ಕೇಡಿ ಜೇಡಿ ಈಗ ಬೇಬಿ ಪಾದವೇ ಗತಿ ಅಂತಾ ಆಕೆಯ ಕೈಗೊಂಬೆಯಾಗಿದ್ದಾನೆ. ಹಾಗಂತಾ ದಿಯಾ ಬೇಬಿ ಆತನನ್ನು ನಡೆಸಿಕೊಳ್ಳುತ್ತಿರುವುದು ಮನೆಗೆಲಸದವನಿಗಿಂತ ಕೀಳಾಗಿ. ಹೀಗಾದರೂ ಕೂಡಾ ಜೈದೇವ್‌ಗೆ ಬುದ್ದಿ ಬಂದಂಗೆ ಕಾಣಿಸುತ್ತಿಲ್ಲ.

ಜೈಲಿನಿಂದ ರಿಲೀಸ್‌ ಆಗಿರುವ ಜಯದೇವ್‌ ಈಗ ಮತ್ತೆ ದಿಯಾ ಮನೆಗೆ ಬಂದಿದ್ದಾನೆ. ಈಗಾಗಲೇ ಅವನಿಗೆ ದಿಯಾ ಸಿಕ್ಕಾಪಟ್ಟೆ ಅವಮಾನ ಮಾಡಿದ್ದಳು, ಹೀಯಾಳಿಸಿದ್ದಳು, ಅವನ ಬಂಗಾರ, ದುಡ್ಡೆಲ್ಲ ತಗೊಂಡು ಓಡಿ ಹೋಗಿದ್ದಳು. ಆದರೂ ಅವನು ಅದನ್ನು ಮರೆತು, ಅವಳ ಮನೆಯೊಳಗಡೆ ಹೋಗಿದ್ದಾನೆ. ಅವನಿಗೆ ಈಗ ಊಟಕ್ಕೂ ಕೂಡ ಗತಿ ಇಲ್ಲ. ದಿಯಾ ಅವನನ್ನು ಕೆಲಸದವನ ರೀತಿ ಥರ ಬಳಸಿಕೊಳ್ತಿದ್ದಾಳೆ. ಇದು ಅವನಿಗೆ ಅರ್ಥ ಆಗ್ತಿದೆಯೋ ಅಥವಾ ಅವನು ಬೇರೊಂದು ಪ್ಲ್ಯಾನ್‌ ಮಾಡಿದ್ದಾನಾ ಎಂದು ಕಾದು ನೋಡಬೇಕಿದೆ. ಜಯದೇವ್‌ ದಿವಾನ್‌ಗೆ ಕರ್ಮ ಬಿಟ್ಟರೂ ಕೂಡ ದಿಯಾ ಮಾತ್ರ ಬಿಡ್ತಿಲ್ಲ, ಸರಿಯಾದ ಪಾಠವನ್ನು ಕಲಿಸುತ್ತಿದ್ದಾಳೆ.

ಮತ್ತೊಂದೆಡೆ ಗೌತಮ್‌ ದಿವಾನ್‌ ಮತ್ತೆ ತನ್ನ ಸಾಮ್ರಾಜ್ಯದಲ್ಲಿ ಮೆರೆಯುವುದನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಮುದ್ದಿನ ಮಡದಿ ಭೂಮಿಕಾ ಮತ್ತು ಮಕ್ಕಳ ಜೊತೆ ಗೌತಮ್ ನಮ್ಮ ಸಂಸಾರ, ಆನಂದ ಸಾಗರ ಅನ್ನೋ ರೀತಿ ಸಂಭ್ರಮಿಸುತ್ತಿದ್ದಾನೆ.

Sulekha

Leave a Reply

Your email address will not be published. Required fields are marked *