ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಗ್ಗಪ್ಪ, ಸುಶ್ಮಿತಾ ಮದುವೆ – ಪ್ರೀತಿಸಿ ಒಂದಾದ ರಿಯಾಲಿಟಿ ಶೋ ಜೋಡಿ
ಕಾಮಿಡಿ ಶೋ ಮೂಲಕ ವೀಕ್ಷಕರ ಮನಗೆದ್ದ ಜಗ್ಗಪ್ಪ ಪ್ರೀತಿಸಿದ ಹುಡುಗಿಯ ಜೊತೆ ಹಸೆಮಣೆಯೇರುತ್ತಿದ್ದಾರೆ. ಜನಪ್ರಿಯ ಕಾಮಿಡಿ ಶೋಗಳಾದ ಗಿಚ್ಚಿ ಗಿಲಿಗಿಲಿ, ಮಜಾ ಭಾರತ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗಿಯಾಗಿದ್ದ ನಟಿ ಸುಷ್ಮಿತಾ ಮತ್ತು ಜಗ್ಗಪ್ಪ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: ಈ ಸಲ ಕಪ್ ನಮ್ದೆ ಎಂದ ಸೂಪರ್ ಸ್ಟಾರ್ – ಫೈನಲ್ ನೋಡಲು ಬರ್ತಾರಂತೆ ಮೋದಿ – ಚಮತ್ಕಾರ ತೋರಿಸಲು ಸೂರ್ಯಕಿರಣ್ ಟೀಮ್ ರೆಡಿ
ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಗೆದ್ದು ಬೀಗಿದ ಕಿರುತೆರೆ ನಟ ಜಗ್ಗಪ್ಪ ಈಗ ವೈವಾಹಿಕ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಫಿನಾಲೆ ವೇದಿಕೆಯಲ್ಲಿ ಜಗ್ಗಪ್ಪ ತನ್ನ ಪ್ರೀತಿಯ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸುಶ್ಮಿತಾ ಕೂಡಾ ಹಾಸ್ಯ ಕಲಾವಿದೆಯಾಗಿದ್ದು ರಿಯಾಲಿಟಿ ಶೋ ಮತ್ತು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ಈ ಜೋಡಿ ಹಲವಾರು ಶೋಗಳಲ್ಲಿ ಜೊತೆಯಾಗಿಯೇ ನಟಿದ್ದಾರೆ. ಇದೀಗ ಜಗ್ಗಪ್ಪನ ಜೊತೆಯೇ ಸುಷ್ಮಿತಾ ಹಸೆ ಮಣೆ ಏರುತ್ತಿದ್ದಾರೆ. ಶುಕ್ರವಾರ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಫೋಟೋಗಳನ್ನು ಸುಷ್ಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಮೆಹಂದಿ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ನಡೆದಿದ್ದಕ್ಕೆ ಸುಷ್ಮಿತಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಶನಿವಾರ ಸಂಜೆ ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ಭಾನುವಾರ ನವೆಂಬರ್ 19ರಂದು ಮಾಂಗಲ್ಯ ಧಾರಣೆ ಕಾರ್ಯಕ್ರಮ ನಡೆಯಲಿದೆ. ಈ ಜೋಡಿಯ ವಿವಾಹ (marriage) ಮುಹೋತ್ಸವಕ್ಕೆ ಅನೇಕ ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಭಾಗಿಯಾಗಲಿದ್ದಾರೆ. ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಸುಷ್ಮಿತಾ ಮತ್ತು ಜಗ್ಗಪ್ಪ ಜೋಡಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಈ ಜೋಡಿಯ ಕಾಮಿಡಿ ವಿಡಿಯೋಗಳು ವೈರಲ್ ಕೂಡ ಆಗಿವೆ. ಇಂತಹ ಜನಪ್ರಿಯ ಜೋಡಿಯು ಕೇವಲ ವೇದಿಕೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಜೊತೆಯಾಗಿವೆ.