ಗಾನವಿ ಗುಣಗಾನದ ಬದಲು ಬೈದ ಜಗ್ಗ ಮಮ್ಮಿ – ಮಂಜಿ ಪರ ನಿಂತ ಪ್ರೇಮಕವಿ ಮಂಜ!

ಗಾನವಿ ಗುಣಗಾನದ ಬದಲು ಬೈದ ಜಗ್ಗ ಮಮ್ಮಿ – ಮಂಜಿ ಪರ ನಿಂತ ಪ್ರೇಮಕವಿ ಮಂಜ!

ಯುವರಾಣಿಯರ ದರ್ಬಾರ್ ಮುಂದೆ ದೊಡ್ಮನೆಯಜೀವರಕ್ಷಕ ಸೇನಾನಿಗಳು ಡಲ್ ಆಗಿದ್ದಾರೆ. ಮೂವರು ಯುವರಾಣಿಯರು ಬಿಗ್‌ಬಾಸ್ ಮನೆಯಲ್ಲಿ ತಮ್ಮ ಖದರ್ ತೋರುತ್ತಿದ್ದಾರೆ. ಇಲ್ಲಿ ಸೈಲೆಂಟ್ ಆಗಿ ಆಸಿಯಾ ಎರಡು ಬಾರಿ ಗೆಲುವು ಸಾಧಿಸಿದರೆ, ಸೌಂದರ್ಯ ಮತ್ತು ಗಾನವಿ ಜಗಳ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ.

ಇದನ್ನೂ ಓದಿ:ಸೌಂದರ್ಯ ಶೆಟ್ಟಿಗೆ ರೆಡ್ ಫ್ಲ್ಯಾಗ್ – ಗಾನವಿ ಸೋಲಿಸಿ ರಾಣಿಯಾಗುತ್ತಾರಾ ಆಸಿಯಾ?

ಬಿಗ್‌ಬಾಸ್ ಮನೆಯಲ್ಲಿ ಇರೋದು ಮೂವರು ಯುವರಾಣಿಯರು. ಈಗ ಇವರದ್ದೇ ದರ್ಬಾರ್. ಆದರೆ, ಯುವರಾಣಿಯರ ದರ್ಪಕ್ಕೆ ಜೀವರಕ್ಷಕ ಸೇನಾನಿಗಳು ಪರದಾಡುವಂತಾಗಿದೆ. ಮೊದಲು ಯುವರಾಣಿಯರ ಪರ ಟಾಸ್ಕ್ ಆಡಬೇಕಾಗುತ್ತದೆ. ಒಂದು ಸುತ್ತಿನ ಗೇಮ್‌ನಲ್ಲಿ ಆಸಿಯಾ ಟೀಮ್ ಗೆಲುವು ಸಾಧಿಸುತ್ತದೆ. ಆಗ ಆಸಿಯಾ ಸೌಂದರ್ಯ ತಂಡವನ್ನು ಆಟದಿಂದ ಹೊರಗಿಡುತ್ತಾರೆ. ಇದಾದ ಮೇಲೆ ಸೌಂದರ್ಯ ಜಗದೀಶ್ ಅವರನ್ನು ನಾಮಿನೇಟ್ ಮಾಡುತ್ತಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ಕೂಡಾ ನಡೆಯುತ್ತದೆ.

ಬಿಗ್‌ಬಾಸ್ ಕಡೆಯಿಂದ ಯುವರಾಣಿಯರಿಗೆ ಮತ್ತೊಂದು ಟಾಸ್ಕ್ ರೆಡಿಯಾಗಿದೆ. ಇಲ್ಲಿ ತಂಡದಲ್ಲೂ ಕೂಡಾ ಬದಲಾವಣೆಯಾಗಿದೆ. ಜೀವರಕ್ಷಕ ಸೇನಾನಿಗಳು ತಮ್ಮ ಯುವರಾಣಿಯ ಗುಣಗಾನ ಮಾಡುವಂತೆ ಬಿಗ್‌ಬಾಸ್ ಸೂಚಿಸಿದ್ದಾರೆ. ಆದ್ರೆ ತಮ್ಮ ತಂಡದವರು ಒಪ್ಪಿಕೊಳ್ಳುತ್ತಿಲ್ಲ ಎಂದು ಗಾನವಿ ಹೇಳುತ್ತಾರೆ. ಈ ವೇಳೆ ಜಗದೀಶ್‌ಗೆ ತಮ್ಮನ್ನು ಹೊಗಳುವಂತೆ ಕೇಳಿಕೊಂಡಾಗ ಅಡುಗೆ ಮಾಡುವಾಗ ನನ್ನಿಂದಾಗಲ್ಲ ಅಂತಾರೆ. ಈ ವಿಷಯವಾಗಿ ಜಗದೀಶ್ ಮತ್ತು ಗಾನವಿ ನಡುವೆ ಮಾತಿನ ಚಕಮಕಿ ಏರ್ಪಡುತ್ತದೆ. ಕೈಲಾಗದವರು ನೆಲ ಡೊಂಕು ಅಂದ್ರಂತೆ ಎಂದು ಜಗದೀಶ್ ವಿರುದ್ಧ ಗಾನವಿ ವಾಗ್ದಾಳಿ ನಡೆಸುತ್ತಾರೆ. ಇದರಿಂದ ಕೋಪಗೊಂಡ ಜಗದೀಶ್, ನಿನ್ನ ಬಾಯಿ ಹೊಲಸು, ಮರ್ಯಾದೆ ಇಲ್ಲ ಎಂದು ಬೈಯ್ಯುತ್ತಾರೆ. ಇದರಿಂದ ರೊಚ್ಚಿಗೆದ್ದ ಗಾನವಿ, ಬೌಲ್ ಎತ್ಕೊಂಡು ಹೊಡೆಯಲು ಮುಂದಾಗ್ತಾರೆ.ಆಗ ಮಂಜಿ ಬೆಂಬಲಕ್ಕೆ ಮಂಜ ಬರುತ್ತಾರೆ. ಮಂಜುನಾಥ್, ಸ್ನೇಹಿತೆ ಗಾನವಿ ಬೆಂಬಲಕ್ಕೆ ನಿಲ್ಲುತ್ತಾರೆ. ಮಾಡಿರೋದು ಒಂದು ಸಿನಿಮಾ. ಗಂಡಸಿನ ತರಹ ನಡೆದುಕೊಳ್ಳಬೇಕು. ಹೆಣ್ಣಿಗೆ ಗೌರವ ಕೊಡೋದನ್ನು ಕಲಿತುಕೊ ಎಂದು ಮಂಜುನಾಥ್ ಕೂಡಾ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.

Sulekha

Leave a Reply

Your email address will not be published. Required fields are marked *