ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ! – ವೈ ಎಸ್ಆರ್‌ಸಿ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲಾ ಫ್ರೀ.. ಫ್ರೀ.. ಫ್ರೀ..

ಫ್ರೀ ಸೈಟ್‌, ಮಹಿಳೆಯರಿಗೆ ಫ್ರೀ ಬಸ್‌, 3 ಎಲ್‌ಪಿಜಿ ಸಿಲಿಂಡರ್‌ ಫ್ರೀ! – ವೈ ಎಸ್ಆರ್‌ಸಿ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲಾ ಫ್ರೀ.. ಫ್ರೀ.. ಫ್ರೀ..

ದೇಶದಲ್ಲಿ ಚುನಾವಣಾ ಕಾವು ಜೋರಾಗಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿದ್ದು, ಈಗಾಗಲೇ 2 ಹಂತದ ಚುನಾವಣೆ ನಡೆದಿದೆ. ಇದೀಗ ಮುಂದಿನ ಹಂತದ ಮತದಾನಕ್ಕೆ ಸಕಲ ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ರಾಜಕೀಯ ನಾಯಕರು ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಆಂಧ್ರಪ್ರದೇಶದಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ಕೂಡ ನಡೆಯುತ್ತಿದ್ದು, ಆಡಳಿತಾರೂಢ ವೈ ಎಸ್ಆರ್‌ಸಿ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 900 ಚದರ ಅಡಿಯ ನಿವೇಶನವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ.

ಇದನ್ನೂ ಓದಿ: ತಮಿಳುನಾಡು ಬಳಿಕ ರಾಜ್ಯದಲ್ಲಿಯೂ ಲಿಕ್ವಿಡ್ ನೈಟ್ರೋಜನ್ ನಿಷೇಧ?

ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡ, ಜನಸೇನಾ ಪಕ್ಷದ ನಾಯಕ, ನಟ ಪವನ್‌ ಕಲ್ಯಾಣ್‌ ಎನ್‌ಡಿಎ ಮೈತ್ರಿ ಕೂಟದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಈ ಪ್ರಣಾಳಿಕೆಯಲ್ಲಿ ಹಲವು ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡಿದ್ದಾರೆ. ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ 20 ಲಕ್ಷ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ 900 ಚದರ ಅಡಿಯ ನಿವೇಶನವನ್ನು ಉಚಿತವಾಗಿ ನೀಡಲಾಗುತ್ತದೆ, ಮಾಸಿಕ 3,000 ರೂ. ನಿರುದ್ಯೋಗ ಭತ್ಯೆಯನ್ನೂ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.  ಈ ಬೆನ್ನಲೇ  ಕೆಲವರು ಕರ್ನಾಟಕ ಕಾಂಗ್ರೆಸ್‌ ಪಕ್ಷದ ಕಾಪಿ ಎಂದು ಟೀಕಿಸಿದ್ದಾರೆ.

ಪ್ರಣಾಳಿಕೆಯಲ್ಲಿ ಏನೇನು ಭರವಸೆಗಳು ಇವೆ?

  • ವಾರ್ಷಿಕ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್
  • ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್‌ ಪ್ರಯಾಣ
  • ʻತಲ್ಲಿಕಿ ವಂದನಂʼ ಯೋಜನೆಯಡಿ ಎಲ್ಲಾ ಶಾಲಾ ಮಕ್ಕಳಿಗೆ ವಾರ್ಷಿಕ 15,000 ರೂ.
  • ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಜಾರಿ
  • 18 ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 1,500 ರೂ.ನಂತೆ ವಾರ್ಷಿಕ 18,000 ಸಾವಿರ ರೂ. ಭತ್ಯೆ
  • 50 ವರ್ಷ ತುಂಬಿದ ಬಿಸಿ ಸಮುದಾಯದವರಿಗೆ ಪಿಂಚಣಿ ಮತ್ತು ಬಿ.ಸಿ.ಗಳ ಸ್ವಯಂ ಉದ್ಯೋಗಕ್ಕೆ 10,000 ಕೋಟಿ ರೂ. ಮಂಜೂರು
  • ಪ್ರತಿ ಮನೆಗೆ ಉಚಿತ ನೀರು ಸೌಲಭ್ಯ, ವೃದ್ದಾಪ್ಯ ವೇತನವನ್ನ 4,000 ರೂ.ಗಳಿಗೆ ಹೆಚ್ಚಳ
  • ಅಂಗವಿಕಲರ ವೇತನವನ್ನ 6,000 ರೂ.ಗೆ ಹೆಚ್ಚಳ, ಮೀನುಗಾರರಿಗೆ ವಾರ್ಷಿಕ 20,000 ರೂ. ನೆರವು

Shwetha M

Leave a Reply

Your email address will not be published. Required fields are marked *