ಬೊಮ್ಮಾಯಿಯನ್ನೇ ಸೋಲಿಸಿದ್ದ ಶೆಟ್ಟರ್.. ಸತತ 6 ಸಲ ಶಾಸಕ – ಜಗದೀಶ್ ಶೆಟ್ಟರ್ ಹಾದಿಯೇ ರೋಚಕ!

ಬೊಮ್ಮಾಯಿಯನ್ನೇ ಸೋಲಿಸಿದ್ದ ಶೆಟ್ಟರ್.. ಸತತ 6 ಸಲ ಶಾಸಕ – ಜಗದೀಶ್ ಶೆಟ್ಟರ್ ಹಾದಿಯೇ ರೋಚಕ!

40 ವರ್ಷಗಳಿಂದ ಬಿಜೆಪಿಯ ಕಟ್ಟಾಳು ಆಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ‘ಕೈ’ ಹಿಡಿದ ಮೊದಲ ದಿನವೇ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಸದ್ಯ ರಾಜ್ಯ ರಾಜಕೀಯದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಹಲ್​ಚಲ್ ಸೃಷ್ಟಿಸಿದೆ. ಅಷ್ಟಕ್ಕೂ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದೇಕೆ. ಅವರ ರಾಜಕೀಯ ಹಾದಿ ಹೇಗಿತ್ತು. ಕಾಂಗ್ರೆಸ್​ನಿಂದ ಸ್ಪರ್ಧಿಸಿರೋ ಶೆಟ್ಟರ್​ಗೆ ಗೆಲುವು ಅಷ್ಟು ಈಸಿಯಾಗಿ ಧಕ್ಕುತ್ತಾ. ಇದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಬಿ. ಫಾರಂ ಪಡೆದು ತಾತನ ಆಶೀರ್ವಾದ ಪಡೆಯುವಾಗ ಭಾವುಕ – ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

‘ಕೈ’ ಕೋಟೆಗೆ ಜಗದೀಶ್ ಶೆಟ್ಟರ್!

– ಆರ್‌ಎಸ್‌ಎಸ್ ಮೂಲಕ ರಾಜಕೀಯಕ್ಕೆ ಬಂದ ಶೆಟ್ಟರ್

– 1990ರಲ್ಲಿ ಹುಬ್ಬಳ್ಳಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕ

– 1994ರಲ್ಲಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದರು

– 1994 ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ

– ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಬಿಜೆಪಿ ಶಾಸಕರು

– ಸತತ 6 ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆ

– ಉ.ಕ ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ

– ಸಚಿವರು, ವಿಧಾನಸಭೆ ಸ್ಪೀಕರ್, ವಿರೋಧ ಪಕ್ಷದ ನಾಯಕ

– 10 ತಿಂಗಳ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ

– ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗುವುದಿಲ್ಲ ಎಂದು ಘೋಷಣೆ

ಅಸಲಿಗೆ ಬೊಮ್ಮಾಯಿ ಸರ್ಕಾರದಲ್ಲಿ ಶೆಟ್ಟರ್ ಮಂತ್ರಿಯಾಗಲು ಒಪ್ಪದಿದ್ದಕ್ಕೆ ಕಾರಣವೂ ಇದೆ. ಯಾಕಂದ್ರೆ  ಬಸವರಾಜ್ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಅವರನ್ನು ಶೆಟ್ಟರ್ ಇದೇ ಕ್ಷೇತ್ರದಲ್ಲಿ 1994ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋಲಿಸಿ ಗೆಲುವು ಸಾಧಿಸಿದ್ದರು. ಆಗಿನಿಂದಲೂ ಶೆಟ್ಟರ್ ಅವರೇ ಇಲ್ಲಿ ಸತತವಾಗಿ ಜಯ ಸಾಧಿಸುತ್ತಾ ಬಂದಿದ್ದಾರೆ. ಇಷ್ಟಾದ್ರೂ ಈ ಬಾರಿ ಬಿಜೆಪಿ ಟಿಕೆಟ್ ಸಿಗದೆ ಇರುವುದಕ್ಕೆ ಸಿಡಿದೆದ್ದು ಕಾಂಗ್ರೆಸ್ ಸೇರಿದ್ದಾರೆ. ಆದ್ರೆ 6 ಚುನಾವಣೆಗಳಲ್ಲಿ ಬಿಜೆಪಿಯಿಂದ ಶೆಟ್ಟರ್​ರನ್ನ ಆಯ್ಕೆ ಮಾಡಿದ್ದ ಮತದಾರರು ಈ ಸಲ ಕಾಂಗ್ರೆಸ್​ನಿಂದ ಗೆಲ್ಲಿಸುತ್ತಾರಾ ಅನ್ನೋದೇ ಸದ್ಯದ ಕುತೂಹಲ.

suddiyaana