ವಿಪಕ್ಷ ನಾಯಕನನ್ನೇ ಆಯ್ಕೆ ಮಾಡದಂತಹ ದಯನೀಯ ಸ್ಥಿತಿ – ಬಿಲ್ ಬಾಕಿ ಬೊಮ್ಮಾಯಿ ಸರ್ಕಾರದ್ದು ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ

ವಿಪಕ್ಷ ನಾಯಕನನ್ನೇ ಆಯ್ಕೆ ಮಾಡದಂತಹ ದಯನೀಯ ಸ್ಥಿತಿ – ಬಿಲ್ ಬಾಕಿ ಬೊಮ್ಮಾಯಿ ಸರ್ಕಾರದ್ದು ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ

ರಾಜ್ಯ ರಾಜಕೀಯದಲ್ಲೀಗ ಕಮಿಷನ್ ಕಿತ್ತಾಟ ತಾರಕಕ್ಕೇರಿದೆ. ಡಿಸಿಎಂ ಡಿ.ಕೆ ಶಿವಕುಮಾರ್ 15% ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೇ ಆರೋಪಿಸಿದ್ದು, ಇದನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದೀಗ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬೇಕಾಬಿಟ್ಟಿಯಾಗಿ ಕಾಮಗಾರಿ ಮಂಜೂರು ಮಾಡಿದರು. ಆದರೆ ಈ ಕಾಮಗಾರಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ರಾಹುಲ್‌ ಗಾಂಧಿಯನ್ನು ಮದುವೆಯಾಗಲು ನಾನು ರೆಡಿ! – ಆದರೆ ಒಂದು ಕಂಡೀಷನ್‌ ಇದೆ ಎಂದ ಖ್ಯಾತ ನಟಿ!

ಹುಬ್ಬಳ್ಳಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಗುತ್ತಿಗೆದಾರರ ಬಿಲ್ ಬಾಕಿ ಇರುವುದು ಕಳೆದ ಬಿಜೆಪಿ ಸರ್ಕಾರದ್ದು. ಈಗ ದುರುದ್ದೇಶದಿಂದ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇದೆಲ್ಲ ಬಿಜೆಪಿ ಸರ್ಕಾರದ ರಾಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ‌ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಿಂದ ‘ಪೇಸಿಎಸ್​’ ಅಭಿಯಾನ ಕಾಂಗ್ರೆಸ್ ಪಕ್ಷದ ಕಾರ್ಬನ್ ಕಾಪಿ. ‘ಪೇ ಸಿಎಸ್’ಗೆ ಅರ್ಥವೇ ಇಲ್ಲ, ಜನ‌ರು ಇದನ್ನು ನಂಬುವುದಿಲ್ಲ. ಕಾಂಗ್ರೆಸ್​ನವರು ಮಾಡಿದ್ದನ್ನೇ ಕಾಪಿ ಮಾಡುವುದಕ್ಕೆ ಹೊರಟಿದ್ದಾರೆ. ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷ ಬಳಿಕ ಕಾಂಗ್ರೆಸ್​ ಅಭಿಯಾನ ಆರಂಭವಾಗಿತ್ತು. ಆದರೆ ಬಿಜೆಪಿಯವರು ಮೂರು ತಿಂಗಳಲ್ಲಿ ಅಭಿಯಾನ ಮಾಡುತ್ತಾರೆಂದರೆ ಇದಕ್ಕೆ ಅರ್ಥವಿಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ ವಿಷಯಗಳನ್ನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯಗಳನ್ನ ಹೇಳಿದ್ದೆ, ಆದರೆ ಅವರು ತಿಳಿದುಕೊಳ್ಳಲಿಲ್ಲ ಎಂದು ತಿಳಿಸಿದರು.

ಇನ್ನು ದೆಹಲಿಯಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ನಮ್ಮ ಜೊತೆ ರಾಹುಲ್ ಗಾಂಧಿ ಮೂರು ಗಂಟೆ ಕಾಲ ಚರ್ಚಿಸಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಹೇಗೆ ಗೆಲ್ಲಬೇಕೆಂಬುವುದರ ಕುರಿತು ಚರ್ಚೆಯಾಗಿದೆ. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ರಾಹುಲ್ ಗಾಂಧಿ ಅವರ ಜೊತೆ ಚರ್ಚಿಸಿದ್ದೇವೆ. ಯಾವ ಟಾಸ್ಕ್ ಕೊಟ್ಟಿಲ್ಲ, ಕೆಲ ವಿಚಾರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 15ರಿಂದ 20 ಸೀಟ್ ಗೆಲ್ಲುವ ಗುರಿ ಇದೆ ಎಂದರು. ಮಾತು ಮುಂದುವರಿಸಿದ ಶೆಟ್ಟರ್, ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಭಾರತೀಯ ಜನತಾ ಪಕ್ಷ ಈಗ ಲೀಡರ್ ಲೆಸ್ ಪಾರ್ಟಿಯಾಗಿದೆ. ಮೂರು ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ. ಬಿಜೆಪಿ ದಯನೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಆಗಿದೆ ಎಂದಿದ್ದಾರೆ.

suddiyaana