ಅಮೃತಧಾರೆ ಸೀರಿಯಲ್‌ ಎಂಡ್? – NO.1 ಧಾರಾವಾಹಿ ಜಾಗಕ್ಕೆ ಜಗದ್ದಾತ್ರೀ.. ರಗಡ್‌ ಲುಕ್‌ನಲ್ಲಿ ಮೋಕ್ಷಿತಾ ಪೈ!

ಅಮೃತಧಾರೆ ಸೀರಿಯಲ್‌ ಎಂಡ್? – NO.1 ಧಾರಾವಾಹಿ ಜಾಗಕ್ಕೆ ಜಗದ್ದಾತ್ರೀ.. ರಗಡ್‌ ಲುಕ್‌ನಲ್ಲಿ ಮೋಕ್ಷಿತಾ ಪೈ!

ಜೀಕನ್ನಡ ವಿಭಿನ್ನ ಕಾನ್ಸೆಪ್ಟ್‌ ಮೂಲಕ ಸದಾ ವೀಕ್ಷಕರನ್ನ ರಂಜಿಸುತ್ತಲೇ ಬಂದಿದೆ. ಹೊಸ ಹೊಸ ಕತೆಯ ಸೀರಿಯಲ್‌, ರಿಯಾಲಿಟಿ ಶೋಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೀಗ ಜೀ ಕನ್ನಡದಲ್ಲಿ ಹೊಸ ಸೀರಿಯಲ್‌ ಬರ್ತಿದೆ.  ಜಗದ್ದಾತ್ರೀ ಅನ್ನೋ ಹೊಸ ಸೀರಿಯಲ್‌ನ ಪ್ರೋಮೋ ಈಗಾಗಲ್ಲೇ ರಿಲೀಸ್‌ ಆಗಿದ್ದು, ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಪ್ರೋಮೋ ರಿಲೀಸ್‌ ಆಗ್ತಿದ್ದಂತೆ ನಾಯಕಿ ಯಾರು ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: ಪ್ಲಾಸ್ಟಿಕ್‌, ಪೇಪರ್‌ ಗ್ಲಾಸ್‌ನಲ್ಲಿ ಟೀ ಕುಡಿಯುತ್ತೀರಾ? – ಎಚ್ಚರ.. ನಿಮ್ಮನ್ನ ಈ ಸಮಸ್ಯೆ ಕಾಡಬಹುದು!

ಜೀ ಕನ್ನಡದಲ್ಲಿ ಜಗದ್ದಾತ್ರೀ ಎಂಬ ಹೊಸ ಸೀರಿಯಲ್‌ ಆರಂಭವಾಗಲಿದೆ. ಈಗಾಗಲ್ಲೇ ವಾಹಿನಿಯೂ ಪವರ್ ಫುಲ್ ಪ್ರೊಮೋ ರಿಲೀಸ್ ಮಾಡಿದೆ. ತೆಲುಗು ಧಾರಾವಾಹಿ ಜಗದ್ಧಾತ್ರೀ  ರಿಮೇಕ್‌ ಆಗಿದೆ. ತೆಲುಗಿನಲ್ಲಿ ನಟಿ ಪ್ರೀತಿ ಶ್ರೀನಿವಾಸ್ ನಾಯಕಿಯಾಗಿದ್ರೆ, ನಾಯಕನ ಪಾತ್ರದಲ್ಲಿ ದರ್ಶ್ ಚಂದ್ರಪ್ಪ ಅಭಿನಯಿಸಿದ್ದಾರೆ. ಇದೀಗ ಕನ್ನಡದಲ್ಲಿ ಈ ಸೀರಿಯಲ್‌ ರಿಮೇಕ್‌ ಆಗ್ತಿದ್ದು, ಇದ್ರ ಪ್ರೋಮೋ ರಿಲೀಸ್‌ ಆಗಿದೆ. ಇದ್ರಲ್ಲಿ, ಅಡುಗೆ ಮನೆಯಲ್ಲಿ ಜಗದ್ಧಾತ್ರಿ ಇರುತ್ತಾಳೆ. ಜಗದ್ಧಾತಿ ಒಂದು ಲೋಟ ಕಾಫಿಮಾಡಿ ಕೊಡಮ್ಮ ಎನ್ನುವ ಹಿನ್ನೆಲೆ ವಾಯ್ಸ್ ಬರುತ್ತೆ. ಆಗ ಜಗಧಾತ್ರಿ ಹಾ ಅಜ್ಜಿ ಎನ್ನುತ್ತಾ ಕಾಫಿ ಮಾಡುತ್ತಾಳೆ. ಅಷ್ಟರಲ್ಲಿ ಆಕೆಗೆ ಕಾಲ್ ಬರುತ್ತೆ, ಕಿಡ್ನಾಪರ್ ತಪ್ಪಿಸಿ ಕೊಂಡಿದ್ದಾರೆ ಎನ್ನುವ ಸುದ್ದಿಯು ಬರುತ್ತೆ. ಹೌಸ್ ವೈಫ್ ನಂತಿರುವ ಜಗದ್ಧಾತ್ರಿ, ಅಕ್ಕಿ ಡಬ್ಬಿಯಿಂದ ಗನ್ ಕೈಗೆತ್ತಿಕೊಂಡು, ಗನ್ ಲೋಡ್ ಮಾಡಿಕೊಂಡು, ಅಜ್ಜಿ ನಾನು ಮಾರ್ಕೆಟ್ ಹೋಗಿ ತರಕಾರಿ ತೆಗೆದುಕೊಂಡು ಬರ್ತೀನಿ ಎನ್ನುತ್ತಾ ಹೋಗುತ್ತಾಳೆ. ಮತ್ತೊಂದೆಡೆ ಮಗುವನ್ನು ಕಿಡ್ನಾಪ್ ಮಾಡಿಕೊಂಡು ಕಿಡ್ನಾಪರ್ ಪಲಾಯನ ಮಾಡುತ್ತಿದ್ದರೆ, ದೂರದಲ್ಲಿ ಬಿಲ್ಡಿಂಗ್ ಮೇಲೆ ನಿಂತಿರುವ ಜಗದ್ದಾತ್ರಿ ಪಿಸ್ತೂಲ್ ನಿಂದ ಆತನ ಕಾಲಿಗೆ ಶೂಟ್ ಮಾಡಿ, ಮಗುವನ್ನು ರಕ್ಷಿಸುತ್ತಾಳೆ. ಈ ಪ್ರೋಮೋ ನೋಡಿದಾಗ ಇದೊಂದು ಅಂಡರ್ ಕವರ್ ನಲ್ಲಿರುವ ಗೃಹಿಣೆಯ ಕಥೆಯಾಗಿದೆ ಅನ್ನೋದು ಗೊತ್ತಾಗುತ್ತೆ. ಆದ್ರೆ ಈ ಪ್ರೋಮೋದಲ್ಲಿ ನಾಯಕಿಯ ಮುಖವನ್ನ ಎಲ್ಲೂ ತೋರಿಸಿಲ್ಲ. ಬರೀ ವಾಯ್ಸ್‌ನ ಮಾತ್ರ ಕೇಳಿಸಲಾಗಿದೆ.

ಹೌದು, ‘ಜಗದ್ದಾತ್ರೀ ಪ್ರೊಮೋದಲ್ಲಿ ನಾಯಕಿಯ ಮುಖವನ್ನು ತೋರಿಸಿಲ್ಲ. ಆದ್ರೆ, ವಾಯ್ಸ್ ಕೇಳಿ, ಇದು ಮೋಕ್ಷಿತಾ ಪೈ ಎಂದು ಜನ ಕನ್ಫರ್ಮ್ ಆಗಿದ್ದಾರೆ. ಅಂದ ಹಾಗೆ ಮೋಕ್ಷಿತಾ ಪೈ ಪಾರು ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಮನೆಯ ಕೆಲಸದವಳಾಗಿ, ಬಳಿಕ ಮನೆಯ ಸೊಸೆ ಪಾರು ಆಗಿ ಮೋಕ್ಷಿತಾ ಪೈ ನಟಿಸಿದ್ದರು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು. ಮೋಕ್ಷಿತಾ ಪೈ ಪಾತ್ರಗಳನ್ನು ಜನ ಇಷ್ಟಪಟ್ಟಿದ್ದರು. ಪಾರು ಸೀರಿಯಲ್ ಮುಗಿಯುತ್ತಿದ್ದಂತೆ ಮೋಕ್ಷಿತಾ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದರು. ಅಲ್ಲೂ ಸಹ ತಮ್ಮ ಸಿಂಪ್ಲಿಸಿಟಿಯಿಂದಾಗಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಹೊಸ ಸೀರಿಯಲ್‌ನಲ್ಲಿ ರಗಡ್‌ ಪಾತ್ರದ ಮೂಲಕ ಸಿರೀಯಲ್‌ ಪ್ರೇಮಿಗಳನ್ನ ರಂಜಿಸಲಿದ್ದಾರೆ.

ಮತ್ತೊಂದ್ಕಡೆ ಜಗದ್ಧಾತ್ರಿ ಸೀರಿಯಲ್‌ ನಾಯಕನಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.. ಮೋಕ್ಷಿತಾಗೆ  ನಾಯಕನಾಗಿ ದೀಪಕ್ ಗೌಡ  ಕಾಣಿಸಿಕೊಳ್ತಿದ್ದಾರೆ ಎನ್ನಲಾಗ್ತಿದೆ. ದೀಪಕ್ ಗೌಡ ‘ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ  ಅನಿಕೇತ್ ಪಾತ್ರದ ಮೂಲಕ ಜನರ ಮನಗೆದ್ದಿದ್ದೆರು. ಇದೀಗ ಜಗದ್ದಾತ್ರಿ ಸೀರಿಯಲ್‌ನಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಇನ್ನು ಜಗದ್ಧಾತ್ರಿ ಸೀರಿಯಲ್ ಪ್ರಸಾರವಾಗಬೇಕಾದರೆ ಒಂದು ಸೀರಿಯಲ್ ಮುಕ್ತಾಯ ಕಾಣಲೇಬೇಕು. ಮಾಹಿತಿಯ ಪ್ರಕಾರ ‘ಅಮೃತಧಾರೆ’ ಧಾರಾವಾಹಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್‌, ಭೂಮಿಕಾ ವನವಾಸ ಅಂತ್ಯ ಆಗಿದೆ. ಇದೀಗ ತಮ್ಮ ಹಳೇ ಸಾಮ್ರಾಜ್ಯ ಮತ್ತೆ ಸಿಕ್ಕಿದ್ದು, ಹೊಸ ಜೀವನ ಶುರುಮಾಡಿದ್ದಾನೆ. ಮತ್ತೊಂದ್ಕಡೆ ಕೆಡಿ ಜೈದೇವ್‌ಗೆ ಕೇಡುಗಾಲ ಶುರುವಾಗಿದೆ. ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆ ಅನುಭವಿಸುತ್ತಿದ್ದಾನೆ. ತತ್ತು ಅನ್ನಕ್ಕೂ ಬೇಡುವ ಪರಿಸ್ಥಿತಿ ಎದುರಾಗಿದೆ. ಇತ್ತ ಶಕುಂತಲಾಗೂ ಬುದ್ಧಿ ಬಂದಿದೆ. ಜಯದೇವ್‌ನನ್ನು ಬಿಟ್ಟು ಎಲ್ಲರೂ ಜೊತೆಗೆ ಇದ್ದಾರೆ. ಹಾಗಾಗಿ ಸೀರಿಯಲ್ ಮುಗಿಯೋದು ಪಕ್ಕಾ ಎನ್ನಲಾಗುತ್ತಿದೆ.

Shwetha M

Leave a Reply

Your email address will not be published. Required fields are marked *