ಪ್ಲೇ ಆಫ್ಗೆ ಒಂದೇ ಮೆಟ್ಟಿಲು! – RCBಯೇ ದೊಡ್ಡ ಸವಾಲು!- OUTನಲ್ಲೂ ಜಡೇಜಾ ದಾಖಲೆ!

ಪ್ಲೇ ಆಫ್ಗೆ ಒಂದೇ ಮೆಟ್ಟಿಲು! – RCBಯೇ ದೊಡ್ಡ ಸವಾಲು!- OUTನಲ್ಲೂ ಜಡೇಜಾ ದಾಖಲೆ!

ನಿರ್ಣಾಯಕವಾಗಿ ಗೆಲ್ಲಬೇಕಿದ್ದ ಮ್ಯಾಚನ್ನು ಸಿಎಸ್‌ಕೆ ಗೆದ್ದಿದೆ.. ಆದರೆ ಈ ಗೆಲುವು ಚೆನ್ನೈಯನ್ನು ಪೂರ್ತಿ ಸೇಫ್‌ ಮಾಡಿಲ್ಲ.. ಸದ್ಯ ಪಾಯಿಂಟ್‌ ಟೇಬಲ್‌ನಲ್ಲಿ ಯೆಲ್ಲೋ ಬಾಯ್ಸ್‌ 3ನೇ ಸ್ಥಾನದಲ್ಲಿದೆ..ಹಾಗಿದ್ದರೂ ಪ್ಲೇಆಫ್‌ಗೆ ಹೋಗಬೇಕು ಎನ್ನುವ ಚೆನ್ನೈ ಹಾದಿ ಸುಲಭವೇನಿಲ್ಲ.. ಯಾಕಂದ್ರೆ  ಸಿಎಸ್‌ಕೆ ಭವಿಷ್ಯ ಈಗ ಆರ್‌ಸಿಬಿ ಕೈಯಲ್ಲಿದೆ.. ಹಸಿದ ಹುಲಿಗಳಂತೆ ಐಪಿಎಲ್‌ನ ಸೆಕೆಂಡ್‌ ರೌಂಡ್‌ನಲ್ಲಿ ಬೇಟೆಯಾಡುತ್ತಿರುವ ಆರ್‌ಸಿಬಿ ಈಗ ಎದುರಾಳಿಗಳ ಪಾಲಿಗೆ ದೊಡ್ಡ ಸವಾಲಾಗಿದೆ.. ಇನ್ನು ಆರ್‌ಆರ್‌ ವಿರುದ್ಧ ಔಟಾಗುವ ವೇಳೆಗೆ ರವೀಂದ್ರ ಜಡೇಜಾ ವಿಚಿತ್ರ ದಾಖಲೆಯೊಂದನ್ನು ಮಾಡಿದ್ದಾರೆ..

ಇದನ್ನೂ ಓದಿ; DK ಬಾಸ್ ಗೆ ಲಾಸ್ಟ್ ಐಪಿಎಲ್ – ಟೀಕಿಸಿದವ್ರ ಎದುರೇ ಗೆದ್ದ ಹೀರೋ

ರಾಜಸ್ಥಾನ ರಾಯಲ್ಸ್‌ ವಿರುದ್ಧ ಆರಾಮಾಗಿಯೇ ಚೆನ್ನೈ ಸೂಪರ್‌ ಕಿಂಗ್ಸ್‌ ಗೆದ್ದು ಬೀಗಿದೆ.. ಪ್ಲೇ ಆಪ್‌ಗೆ ಎಂಟ್ರಿ ಆದ ನಂತರ ಸತತ ಮೂರನೇ ಸೋಲು ಕಂಡಿದೆ ಸಂಜು ಸ್ಯಾಮ್ಸನ್‌ ಪಡೆ.. ಹ್ಯಾಟ್ರಿಕ್‌ ಸೋಲಿನಿಂದಾಗಿ ಪಾಯಿಂಟ್‌ ಟೇಬಲ್‌ನಲ್ಲಿ ನಂ.1 ಸ್ಥಾನ ಕಾಪಾಡಿಕೊಳ್ಳುವಲ್ಲಿ ರಾಯಲ್ಸ್‌ ವಿಫಲವಾಗಿದೆ.. ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ನಿನ್ನೆ ಮಧ್ಯಾಹ್ನದ ನಂತರ ಮ್ಯಾಚ್‌ ನಡೆದಿದ್ದರಿಂದ ಆಟದಲ್ಲಿ ಗೆಲ್ಲಬೇಕು ಅಂದ್ರೆ ಬಿಸಿಲನ್ನು ಗೆಲ್ಲಬೇಕಾದ ಅನಿವಾರ್ಯತೆಯಿತ್ತು.. ಯಾಕಂದ್ರೆ ಚೆನ್ನೈನ ಸುಡು ಬಿಸಿಲು ದೇಹದಿಂದ ನೀರನ್ನು ಬಸಿದುಹಾಕುತ್ತಿತ್ತು.. ಇದೇ ಕಾರಣಕ್ಕೆ ಚೆನ್ನೈನಲ್ಲಿ ಟಾಸ್‌ ಗೆದ್ದ ಸಂಜು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು..  ಚೆಪಾಕ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದವರು ಜಾಸ್ತಿ ಗೆಲ್ತಾರೆ ಎನ್ನುವುದು ನಿಜವಾದರೂ, ಚೆನ್ನೈ ತಂಡದ ಶಿಸ್ತಿನ ಬೌಲಿಂಗ್‌ನಿಂದಾಗಿ ಆರ್‌ಆರ್‌ ದೊಡ್ಡ ಸ್ಕೋರ್‌ ಕಲೆಹಾಕುವಲ್ಲಿ ವಿಫಲವಾಯಿತು.. ನೀರಸ ಬ್ಯಾಟಿಂಗ್‌ ಮಾಡಿದ ಆರ್‌ಆರ್‌ ಕೇವಲ 7ರ ರನ್‌ರೇಟ್‌ನಲ್ಲಿ 141 ರನ್‌ ಗಳಿಸಲಷ್ಟೇ ಸಾಧ್ಯವಾಯ್ತು.. ಕೇವಲ ಐದು ವಿಕೆಟ್‌ ಮಾತ್ರ ಕಳೆದುಕೊಂಡರೂ ರನ್‌ರೇಟ್‌ಗೆ ವೇಗ ಕೊಡಲು ಯಾವುದೇ ಬ್ಯಾಟ್ಸ್‌ಮನ್‌ಗೆ ಸಾಧ್ಯವಾಗಲಿಲ್ಲ.. ಧ್ರುವ ಜುರೇಲ್‌ 18 ಎಸೆತಕ್ಕೆ 28 ರನ್‌ ಗಳಿಸಿದ್ದೇ ಆರ್‌ಆರ್‌ ಬ್ಯಾಟ್ಸ್‌ಮನ್‌ಗಲ ಅತಿಹೆಚ್ಚಿನ ಸ್ಟ್ರೈಕ್‌ ರೇಟ್‌ ಆಗಿತ್ತು.. ಆರ್‌ಆರ್‌ ಸಾಧಾರಣ ಮೊತ್ತ ಸೆಟ್‌ ಮಾಡಿದಾಗಲೇ ಚೆನ್ನೈನ ಗೆಲುವು ನಿಶ್ಚಿತವಾಗಿತ್ತು.. ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ ಒಂದು ಎಂಡ್‌ನಲ್ಲಿ ನಾಟೌಟ್‌ ಬ್ಯಾಟಿಂಗ್‌ ಮಾಡಿದ್ದರಿಂದ ತಂಡ ಹೆಚ್ಚೇನೂ ಸವಾಲು ಎದುರಿಸಲಿಲ್ಲ.

ಆರ್‌ ಆರ್‌ ವಿರುದ್ಧದ ಪಂದ್ಯದಲ್ಲಿ 16ನೇ ಓವರ್‌ನಲ್ಲಿ ಔಟಾಗುವ ಮೂಲಕ ರವೀಂದ್ರ ಜಡೇಜಾ ವಿಚಿತ್ರ ದಾಖಲೆಯೊಂದಕ್ಕೆ ಸೇರ್ಪಡೆಯಾದರು..,  ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಆಧಾರದಲ್ಲಿ ಜಡೇಜಾ ಔಟಾದರು.. ಆವೇಶ್‌ ಖಾನ್‌ ಬೌಲಿಂಗ್‌ನಲ್ಲಿ ಥರ್ಡ್‌ ಮ್ಯಾನ್‌ ಕಡೆಗೆ ಹೊಡೆದ ಜಡೇಜಾ ಒಂದು ರನ್‌ ಕಲೆ ಹಾಕಿದರು.. ಆದರೆ ಇಲ್ಲದ ಎರಡನೇ ರನ್‌ ಓಡಲು ಮುಂದಾದಾಗ ಚೆನ್ನೈ ಕ್ಯಾಫ್ಟನ್‌ ರುತುರಾಜ್‌ ಗಾಯಕ್ವಾಡ್‌, ಅರ್ಧ ಕ್ರೀಸ್‌ ತಲುಪಿದ್ದ ಜಡೇಜಾರನ್ನು ವಾಪಸ್‌ ಕಳಿಸಿದ್ರು.. ಆಗ ವಿಕೆಟ್‌ಗೆ ಅಡ್ಡವಾಗಿ ಪಿಚ್‌ ಮೇಲೆಯೇ ಜಡೇಜಾ ಓಡಿದ್ರು.. ಇದೇ ವೇಳೆ ಕೀಪರ್‌ ಸಂಜು ಸ್ಯಾಮ್ಸನ್‌, ರನೌಟ್‌ ಮಾಡಲು ಎಸೆದ ಬಾಲ್‌  ಜಡ್ಡು ಬೆನ್ನಿಗೆ ತಾಗಿತ್ತು.. ಇದ್ರಿಂದಾಗಿ ಸಂಜು ಅಪೀಲ್‌ ಮಾಡುತ್ತಿದ್ದಂತೆ, ಅಂಪೈರ್‌ ರಿವೀವ್‌ಗೆ ಹೋದ್ರು.. ಆಗ ಕ್ಲಿಯರ್‌ ಆಗಿ ಜಡ್ಡು ಬೌಲ್‌ ವಿಕೆಟ್‌ಗೆ ಹೋಗುವುದನ್ನು ತಪ್ಪಿಸಲು ಫೀಲ್ಡರ್‌ಗೆ ಅಡ್ಡ ಬಂದಿದ್ದು ಗೊತ್ತಾಯ್ತು.. ತಾನು ಓಡುತ್ತಿದ್ದ ಜಾಗ ಬಿಟ್ಟು, ವಿಕೆಟ್‌ ಕವರ್‌ ಆಗುವಂತೆಯೇ ಜಡೇಜಾ ಓಡುತ್ತಿದ್ದದ್ದು ಸ್ಪಷ್ಟವಾಗಿತ್ತು.. ಇದೇ ಕಾರಣಕ್ಕಾಗಿ ಅಂಪೈರ್‌ ಜಡೇಜಾರನ್ನು ಔಟೆಂದು ತೀರ್ಪುಕೊಟ್ಟರು.. ಸಹಜವಾಗಿಯೇ ಬೇಸರದಿಂದ ಜಡೇಜಾ ಪೆವಿಲಿಯನ್‌ಗೆ ಮರಳಿದರು.. ಇದರ ಮೂಲಕ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಐಪಿಎಲ್‌ನಲ್ಲಿ ಔಟಾದ ಮೂರನೇ ಆಟಗಾರ ಎಂಬ ದಾಖಲೆಗೆ ಜಡ್ಡು ಸೇರ್ಪಡೆಯಾಗಿದ್ದಾರೆ.. ಈ ಹಿಂದೆ ಯೂಸುಫ್‌ ಪಠಾಣ್‌ ಮತ್ತು ಅಮಿತ್‌ ಮಿಶ್ರಾ ಇದೇ ರೀತಿಯಲ್ಲಿ ಔಟಾಗಿದ್ದರು..

ಇನ್ನು ಆರ್‌ಆರ್‌ ವಿರುದ್ಧ ಗೆದ್ದರೂ ಚೆನ್ನೈಗೆ ನೆಮ್ಮದಿಯಿಲ್ಲ.. ಇನ್ನೂ ಎರಡು ಮ್ಯಾಚ್‌ ಆಡಬೇಕಿರುವ ಎಸ್‌ಆರ್‌ಹೆಚ್‌ ಅದರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇಆಫ್‌ಗೆ ಎಂಟ್ರಿಕೊಡಲಿದೆ.. ಹಾಗೆಯೇ ಲಕ್ನೋ ಸೂಪರ್‌ ಜೈಂಟ್ಸ್‌ ಗೂ ಇನ್ನು ಎರಡು ಮ್ಯಾಚ್‌ಗಳಿದ್ದು, ಅದೆರಡರಲ್ಲೂ ಗೆದ್ದರೆ, ಪ್ಲೇಆಫ್‌ಗೆ ಎಂಟ್ರಿ ಕೊಡಬಹುದು.. ಹೀಗಾಗಿ ಚೆನ್ನೈಗೆ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.. ನಾಳೆ ಡಿಸಿ ವಿರುದ್ಧ ಎಲ್‌ಎಸ್‌ಜಿ ಸೋತರೆ, ಆಗ ಆರ್‌ಸಿಬಿ ವಿರುದ್ಧ ಸೋತರೂ ಚೆನ್ನೈ ಪ್ಲೇಆಫ್‌ಗೆ ರನ್‌ರೇಟ್‌ ಆಧಾರದಲ್ಲಿ ಎಂಟ್ರಿ ಕೊಡಬಹುದು.. ಆದರೆ ಅಲ್ಲೂ ಒಂದು ಕಂಡೀಷನ್‌ ಇದೆ.. ಈಗ ಆರ್‌ಸಿಬಿಯ ರನ್‌ರೇಟ್‌ ಕೂಡ ಪಾಸಿಟಿವ್‌ ಆಗಿದೆ.. ಚೆನ್ನೈ ವಿರುದ್ಧ ದೊಡ್ಡ ಅಂತರದಲ್ಲಿ ಆರ್‌ಸಿಬಿ ಗೆದ್ದರೆ, ಆಗ ಚೆನ್ನೈ ತಂಡವನ್ನು ರನ್‌ರೇಟ್‌ನಲ್ಲಿ ಹಿಂದಿಕ್ಕಿ, ಬೆಂಗಳೂರು ಪ್ಲೇಆಫ್‌ಗೆ ಎಂಟ್ರಿ ಕೊಡಬಹುದು.. ಹಾಗೆಯೇ ಆರ್‌ಆರ್‌ ಗೂ ಇನ್ನೂ ಎರಡು ಮ್ಯಾಚ್‌ಗಳು ಇರೋದ್ರಿಂದ ಟಾಪ್‌ ಟೂ ನಲ್ಲಿ ಸ್ಥಾನ ಪಡೆಯಲು ಕನಿಷ್ಠ ಒಂದು ಮ್ಯಾಚ್‌ ಆದರೂ ಗೆಲ್ಲಲೇಬೇಕಿದೆ.. ಹೀಗೆ ಐಪಿಎಲ್‌ ಈಗ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು, ಯಾರು ಪ್ಲೇಆಫ್‌ಗೆ ಎಂಟ್ರಿ ಕೊಡ್ತಾರೆ ಎಂಬ ಲೆಕ್ಕಾಚಾರ ಗರಿಗೆದರಿದೆ..

Sulekha