ರಾಜಸ್ಥಾನ್ ರಾಯಲ್ಸ್ನಲ್ಲಿ ಇಲ್ಲ ವಿದೇಶಿ ಆಟಗಾರನ ಕೋಟಾ – ಎದುರಾಯ್ತು ಜಡೇಜಾ-ಸ್ಯಾಮ್ಸನ್ ಟ್ರೇಡಿಂಗ್ಗೆ ವಿಘ್ನ

ಬಿಸಿಸಿಐ ರೂಲ್ಸ್ನಿಂದ ಸಿಎಸ್ಕೆಯ ರವಿಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಕೊಟ್ಟು ಆರ್ಆರ್ನ ಸಂಜು ಸ್ಯಾಮ್ಸನ್ನ್ನ ತೆಗೆದುಕೊಳ್ಳುವ ಒಪ್ಪಂದಕ್ಕೆ ವಿಘ್ನ ಎದುರಾಗಿದೆ. ರಾಜಸ್ಥಾನ್ ರಾಯಲ್ಸ್ನ ವಿದೇಶಿ ಕೋಟಾ ಈಗಾಗಲೇ ಭರ್ತಿಯಾಗಿದ್ದು, ಅವರು ಈಗ ತಮ್ಮಲ್ಲಿರೋ ವಿದೇಶಿ ಆಟಗಾರರಲ್ಲಿ ಒಬ್ಬರನ್ನು ಬಿಡುಗಡೆ ಮಾಡಿ ಕರನ್ ಅವರನ್ನು ಸೇರಿಸಿಕೊಳ್ಳಬೇಕು. ಹೀಗಾಗಿ 8 ರಲ್ಲಿ ಯಾವ ವಿದೇಶ ಆಟಗಾರನ್ನ ಬಿಟ್ಟು, ಯಾರನ್ನ ತೆಗೆದುಕೊಳ್ಳುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಬಹು ನಿರೀಕ್ಷಿತ ರವೀಂದ್ರ ಜಡೇಜ-ಸಂಜು ಸ್ಯಾಮ್ಸನ್ ವಹಿವಾಟಿನಲ್ಲಿ ಬಿಕ್ಕಟ್ಟು ಎದುರಾಗಿದೆ. ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ವ್ಯಾಪಾರ ಚರ್ಚೆಗಳಲ್ಲಿ ಭಾಗಿಯಾಗಿರುವುದು ಈ ವಿಳಂಬಕ್ಕೆ ಪ್ರಮುಖ ಕಾರಣ ಎಂದು ವರದಿಯಾಗಿದೆ. ರಾಯಲ್ಸ್ನ ವಿದೇಶಿ ಕೋಟಾ ಈಗಾಗಲೇ ಭರ್ತಿಯಾಗಿದ್ದು, ಅವರು ತಮ್ಮ ಪ್ರಸ್ತುತ ವಿದೇಶಿ ಆಟಗಾರರಲ್ಲಿ ಒಬ್ಬರನ್ನು ಬಿಡುಗಡೆ ಮಾಡದ ಹೊರತು ಕರನ್ ಅವರನ್ನು ಸೇರಿಸಿಕೊಳ್ಳುವುದು ಆಗಲ್ಲ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ನಲ್ಲಿ KL 2.O – ಓಪನರ್ ಸ್ಲಾಟ್ ಪ್ಲಸ್ ಆಯ್ತಾ?
ರಾಜಸ್ಥಾನ ತಂಡದಲ್ಲಿ ಪ್ರಸ್ತುತ ಎಂಟು ವಿದೇಶಿ ಕ್ರಿಕೆಟಿಗರಾದ ಜೋಫ್ರಾ ಆರ್ಚರ್, ಶಿಮ್ರಾನ್ ಹೆಟ್ಮೈರ್, ವನಿಂದು ಹಸರಂಗ, ಮಹೀಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಕ್ವೇನಾ ಮಫಾಕ, ನಾಂದ್ರೆ ಬರ್ಗರ್ ಮತ್ತು ಲುವಾನ್-ಡ್ರೆ ಪ್ರಿಟೋರಿಯಸ್ ಮತ್ತು 14 ಭಾರತೀಯ ಆಟಗಾರರು ಇದ್ದಾರೆ. 25 ಆಟಗಾರರ ಮಿತಿಯೊಳಗೆ ಇನ್ನೂ ಮೂರು ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ಇದೆ. ಆದರೆ ಅವರು ತಮ್ಮ ಬಜೆಟ್ ಮಿತಿಯೊಳಗೆ ಉಳಿಯಬೇಕಾಗುತ್ತದೆ. ಆರ್ಥಿಕವಾಗಿ, ಫ್ರಾಂಚೈಸಿ ಸಂಕಷ್ಟದಲ್ಲಿದೆ. ಆರ್ಆರ್ ಬಳಿ ಕೇವಲ 30 ಲಕ್ಷ ರೂ. ಮಾತ್ರ ಉಳಿದಿದ್ದರೆ, ಕರನ್ ಅವರ ಮೌಲ್ಯ 2.4 ಕೋಟಿ ರೂ. ಆಗಿದೆ. ಒಪ್ಪಂದವನ್ನು ಪೂರ್ಣಗೊಳಿಸಲು, ತಂಡವು ಹೆಚ್ಚಿನ ಬೆಲೆಯ ಕನಿಷ್ಠ ಒಬ್ಬ ವಿದೇಶಿ ಆಟಗಾರನನ್ನು ಬಿಡುಗಡೆ ಮಾಡಬೇಕಾಗುತ್ತದೆ.
ವರದಿಯ ಪ್ರಕಾರ, ರಾಯಲ್ಸ್ ತಂಡವು ಶ್ರೀಲಂಕಾದ ಜೋಡಿಗಳಾದ ವನಿಂದು ಹಸರಂಗ (ರೂ. 5.25 ಕೋಟಿ) ಮತ್ತು ಮಹೇಶ್ ತೀಕ್ಷಣ (ರೂ. 4.40 ಕೋಟಿ) ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಇದು ವಿದೇಶಿ ಸ್ಥಾನ ಎರಡನ್ನೂ ಮುಕ್ತಗೊಳಿಸುತ್ತದೆ. ಆದಾಗ್ಯೂ, ನವೆಂಬರ್ 15 ರಂದು ಉಳಿಸಿಕೊಳ್ಳುವ ಗಡುವಿನ ನಂತರ, ಐಪಿಎಲ್ ತಂಡಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದ ನಂತರವೇ ಅಂತಹ ಕ್ರಮಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ನೋಡಿರಿ

