ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾ? – ಜೇಡ್ ಪ್ಲಾಂಟ್‌ನಿಂದ ಸಿಗುವ ವಾಸ್ತು ಪ್ರಯೋಜನಗಳೇನು?

ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕಾ? – ಜೇಡ್ ಪ್ಲಾಂಟ್‌ನಿಂದ ಸಿಗುವ ವಾಸ್ತು ಪ್ರಯೋಜನಗಳೇನು?

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಂಪತ್ತು ಹೆಚ್ಚಾಗಲಿ ಎಂಬ ಕಾರಣಕ್ಕೆ ಮನಿ ಪ್ಲಾಂಟ್ ನೆಡುವುದನ್ನು ಕಾಣುತ್ತೇವೆ. ಆದರೆ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್‌ಗಿಂತಲೂ ವೇಗವಾಗಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಮತ್ತು ಅದೃಷ್ಟವನ್ನು ತರುವ ಮತ್ತೊಂದು ಅದ್ಭುತ ಗಿಡ ಎಂದರೆ ಅದುವೇ ಜೇಡ್ ಪ್ಲಾಂಟ್ . ಈ ಸಸ್ಯವು ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ.

ಸಂಪತ್ತಿನ ಅಧಿಪತಿ ಕುಬೇರನಿಗೆ ಪ್ರಿಯವಾದ ಸಸ್ಯ:

ಧಾರ್ಮಿಕ ನಂಬಿಕೆಗಳ ಪ್ರಕಾರ, ಜೇಡ್ ಪ್ಲಾಂಟ್ ಸಂಪತ್ತಿನ ದೇವತೆಯಾದ ಲಕ್ಷ್ಮಿ ಮತ್ತು ಧನಾಧಿಪತಿಯಾದ ಕುಬೇರನಿಗೆ ಅತ್ಯಂತ ಪ್ರಿಯವಾದ ಸಸ್ಯವಾಗಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಸಾಲದ ಬಾಧೆಯಿಂದ ಮುಕ್ತಿ ಪಡೆಯಲು ಬಯಸುವವರು ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಬಹುದು. ಈ ಗಿಡವು ಮನೆಯತ್ತ ಹಣದ ಹರಿವನ್ನು ಕಾಂತದಂತೆ ಆಕರ್ಷಿಸುತ್ತದೆ ಎಂದು ನಂಬಲಾಗಿದೆ.

ಜೇಡ್ ಪ್ಲಾಂಟ್‌ನಿಂದ ಸಿಗುವ ವಾಸ್ತು ಪ್ರಯೋಜನಗಳು:

ಮನೆಯಲ್ಲಿ ಜೇಡ್ ಪ್ಲಾಂಟ್ ಬೆಳೆಸುವುದರಿಂದ ಕೇವಲ ಹಣಕಾಸು ಮಾತ್ರವಲ್ಲದೆ ಕುಟುಂಬದ ವಾತಾವರಣದಲ್ಲೂ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಉದ್ಯೋಗಿಗಳಿಗೆ ಬಡ್ತಿ ಹಾಗೂ ಉದ್ಯಮಿಗಳಿಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ತರಲು ಇದು ಅತ್ಯಂತ ಸಹಕಾರಿಯಾಗಿದೆ. ಇದಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಕುಟುಂಬದ ಸದಸ್ಯರ ನಡುವಿನ ಬಾಂಧವ್ಯ, ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು ಈ ಗಿಡ ನೆರವಾಗುತ್ತದೆ.

Kishor KV

Leave a Reply

Your email address will not be published. Required fields are marked *