KLಗೆ ಮತ್ತೆ ಸ್ಲಾಟ್ ಬದಲಾಗುತ್ತಾ? – 3ನೇ ಪಂದ್ಯಕ್ಕಿಲ್ಲ ಜಡ್ಡು & ಪ್ರಸಿದ್ಧ್?
ಗಿಲ್ & ಗಂಭೀರ್ ಗೆದ್ರಷ್ಟೇ ಗತ್ತು!

KLಗೆ ಮತ್ತೆ ಸ್ಲಾಟ್ ಬದಲಾಗುತ್ತಾ? – 3ನೇ ಪಂದ್ಯಕ್ಕಿಲ್ಲ ಜಡ್ಡು & ಪ್ರಸಿದ್ಧ್?ಗಿಲ್ & ಗಂಭೀರ್ ಗೆದ್ರಷ್ಟೇ ಗತ್ತು!

ಮೊದ್ಲೆಲ್ಲಾ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿ ಅಂದ್ರೆ ಅಲ್ಲಿ ಭಾರತವೇ ವಿನ್ನರ್ ಅನ್ನೋದು ಮೊದ್ಲೆ ಪ್ರೆಡಿಕ್ಟ್ ಆಗಿ ಬಿಡ್ತಿತ್ತು. ಯಾಕಂದ್ರೆ ಟೀಂ ಇಂಡಿಯಾ ಡಾಮಿನೇಷನ್ ಆ ಲೆವೆಲ್​ನಲ್ಲಿತ್ತು. ಆದ್ರೆ ಈಗ ಎಲ್ಲವೂ ಬದಲಾಗಿದೆ. ತವರಿನಲ್ಲೂ ಭಾರತ ಗೆಲುವಿಗಾಗಿ ತಡಕಾಡ್ತಿದೆ. ಪ್ರಸ್ತುತ ಏಕದಿನ ಸರಣಿಯೂ ಅದೇ ಸಿಚುಯೇಷನ್​ನಲ್ಲಿದೆ. ಭಾನುವಾರ ಉಭಯ ತಂಡಗಳ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಈ ಪಂದ್ಯ ಗೆದ್ದವ್ರು ಸರಣಿ ಕೈವಶ ಮಾಡಿಕೊಳ್ತಾರೆ. ಸೋ ಮಸ್ಟ್ ಌಂಡ್ ಶುಡ್ ವಿನ್ ಆಗ್ಬೇಕಿರೋ ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ನಲ್ಲಿ ಎರಡು ಬದಲಾವಣೆಗಳಾಗೋ ಚಾನ್ಸಸ್ ಇದೆ.

ಇದನ್ನೂ ಓದಿ : ಕರ್ನಾಟಕವನ್ನೇ ಸೋಲಿಸಿದ ಕನ್ನಡಿಗ – ಪಡಿಕ್ಕಲ್ ಫೇಲ್.. ಎಡವಿದ್ದೆಲ್ಲಿ ಮಯಾಂಕ್?

ಏಕದಿನ ಮಾದರಿಯಲ್ಲಿ ಕಿವೀಸ್ ಪಡೆ ಭಾರತದಲ್ಲಿ ಇದುವರೆಗೆ ಒಂದೇ ಒಂದು ಸರಣಿಯನ್ನೂ ಗೆದ್ದಿಲ್ಲ. ಅಷ್ಟೇ ಯಾಕೆ ಕಳೆದ 8 ಪಂದ್ಯಗಳಲ್ಲಿ ಸತತವಾಗಿ ಭಾರತವೇ ಗೆದ್ದು ಬೀಗಿದೆ. 2023ರ ಜನವರಿಯಲ್ಲಿ ಮೂರು ಪಂದ್ಯಗಳ ಸರಣಿಗಾಗಿ ಕಿವೀಸ್ ಪಡೆ ಭಾರತಕ್ಕೆ ಬಂದಿತ್ತು. ಈ ವೇಳೆ ಮೂರಕ್ಕೆ ಮೂರೂ ಪಂದ್ಯಗಳಲ್ಲೂ ಭಾರತವೇ ಗೆದ್ದು ಬೀಗಿತ್ತು. ಆ ನಂತ್ರ 2023ರ ಕೊನೆಯಲ್ಲಿ ಏಕದಿನ ವಿಶ್ವಕಪ್​ನಲ್ಲಿ ಎರಡು ಪಂದ್ಯಗಳಲ್ಲಿ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬಾರಿ ಹಾಗೇ ಇತ್ತೀಚೆಗೆ ಸರಣಿಯ ಮೊದಲ ಪಂದ್ಯ ವಡೋದರಾದಲ್ಲಿ.. ಹೀಗೆ ಸತತ 8 ಪಂದ್ಯಗಳಲ್ಲಿ ಭಾರತವೇ ಜಯಬೇರಿ ಬಾರಿಸಿತ್ತು. ಆದ್ರೆ ರಾಜ್​ಕೋಟ್​ನಲ್ಲಿ ಗೆದ್ದ ನ್ಯೂಜಿಲೆಂಡ್ ಸರಣಿ ಗೆಲ್ಲೋ ಹಂತಕ್ಕೆ ಬಂದಿದೆ. ಹಾಗೇನಾದ್ರೂ ಗೆದ್ರೆ ಇತಿಹಾಸದಲ್ಲಿ ಫಾರ್ ದಿ ಫಸ್ಟ್ ಟೈಂ ಭಾರತದಲ್ಲಿ ಸರಣಿ ಗೆಲ್ಲುತ್ತೆ. ಜೊತೆಗೆ ಕ್ಯಾಪ್ಟನ್ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್​ಗೂ ಇದು ದೊಡ್ಡ ಸೆಟ್​​ ಬ್ಯಾಕ್ ಆಗುತ್ತೆ. ಸೋ ಶತಾಯ ಗತಾಯ ಮೂರನೇ ಪಂದ್ಯವನ್ನ ಗೆಲ್ಲಲೇಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಪ್ಲೇಯಿಂಗ್ 11ನಲ್ಲಿ 2 ಬದಲಾವಣೆಗಳನ್ನ ಮಾಡೋ ಸಾಧ್ಯತೆ ಇದೆ.

ಬ್ಯಾಟಿಂಗ್ & ಬೌಲಿಂಗ್ ಸದ್ದಿಲ್ಲದ ಜಡೇಜಾ ಡ್ರಾಪ್?

ಇಂದೋರ್​ನ ಪಂದ್ಯದಲ್ಲಿ ರವೀಂದ್ರ ಜಡೇಜಾರನ್ನ ಕೈಬಿಡೋ ಸಾಧ್ಯತೆ ಇದೆ. ಯಾಕಂದ್ರೆ ಇತ್ತೀಚಿನ ಅವ್ರ ಸ್ಪೆಲ್​ಗಳು ಇಂಟ್ರೆಸ್ಟಿಂಗ್ ಆಗಿಲ್ಲ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹಾಗೇ ವಡೋದರಾ ಮತ್ತು ರಾಜ್​ಕೋಟ್​ನಲ್ಲಿ ನಡೆದ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು. ಜೊತೆಗೆ ಒಂದೇ ಒಂದು ವಿಕೆಟ್ ಪಡೆದಿಲ್ಲ. ಜಡೇಜಾ ಪರ್ಫಾಮೆನ್ಸ್​​ಗೆ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿದೆ. ಹೀಗಾಗಿ ಆಯುಷ್ ಬದೋನಿಗೆ ಡೆಬ್ಯೂ ಮಾಡೋ ಅವಕಾಶ ನೀಡ್ಬೋದು. ವಾಷಿಂಗ್ಟನ್ ಸುಂದರ್ ಬದಲಿಗೆ ಭಾರತ ತಂಡ ಸೇರಿರುವ ಬದೋನಿ ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದು, ಅವರು ತಮ್ಮ ಸ್ಪಿನ್ ಬೌಲಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲರು.

ಪ್ರಸಿದ್ಧ್ ಕೃಷ್ಣ ಬದಲಿಗೆ ಅರ್ಶದೀಪ್ ಸಿಂಗ್ ಗೆ ಚಾನ್ಸ್!

ಇನ್ನು ಬೌಲಿಂಗ್ ವಿಭಾಗದಲ್ಲೂ ಚೇಂಜಸ್ ಆಗಬಹುದು. ಪಂಜಾಬ್ ಮೂಲದ ಕ್ರಿಕೆಟಿಗ ಟಿ20ಐಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿರೋ ಅರ್ಶದೀಪ್ ಸಿಂಗ್​ಗೆ ಅವಕಾಶ ನೀಡ್ಬೋದು. ಪ್ರಸಿದ್ಧ್ ಕೃಷ್ಣ ಬೆಂಚ್ ಕಾಯಿಸಬಹುದು. ಮೊದಲ ಎರಡು ಪಂದ್ಯಗಳಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು. ಎರಡೂ ಪಂದ್ಯಗಳಲ್ಲಿ ಪ್ರಸಿದ್ಧ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ರೂ ಸ್ವಲ್ಪ ಎಕ್ಸ್​ಪೆನ್ಸಿವ್ ಅನ್ಸಿದ್ರು. ಹೀಗಾಗಿ ಪ್ರಸಿದ್ಧ್ ಬದಲಿಗೆ ಅರ್ಶದೀಪ್ ಆಡ್ಬೋದು. ಆರ್.ಅಶ್ವಿನ್ ಕೂಡ ಅರ್ಶದೀಪ್ ಸಿಂಗ್​ರನ್ನ ಬೆಂಚ್ ಕಾಯಿಸಿರೋ ಬಗ್ಗೆ ಮಾತ್ನಾಡಿದ್ದಾರೆ. ಹೆಚ್ಚು ಹೊತ್ತು ಬೆಂಚ್ ನಲ್ಲಿ ಕುಳಿತಿದ್ರೆ ತುಕ್ಕು ಹಿಡಿಯುತ್ತೇವೆ. ನಾನು ಕೂಡ ಅನುಭವಿಸಿದ್ದೇನೆ ಎಂದಿದ್ದಾರೆ. ಈ ಮೂಲಕ ಅವ್ರಿಗೆ ಆಡಲು ಚಾನ್ಸ್ ಕೊಡಿ ಎಂದಿದ್ದಾರೆ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳು ಇರೋದಿಲ್ಲ.

3ನೇ ಪಂದ್ಯಕ್ಕೆ ಪ್ಲೇಯಿಂಗ್ 11

ರೋಹಿತ್ ಶರ್ಮಾ

ಶುಭಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಆಯುಷ್ ಬದೋನಿ

ಕೆಎಲ್ ರಾಹುಲ್

ನಿತೀಶ್ ಕುಮಾರ್ ರೆಡ್ಡಿ

ಹರ್ಷಿತ್ ರಾಣಾ

ಕುಲದೀಪ್ ಯಾದವ್

ಅರ್ಷದೀಪ್ ಸಿಂಗ್

ಮೊಹಮ್ಮದ್ ಸಿರಾಜ್

Shantha Kumari