RO-KOಗೆ ಯುವಿ ಸ್ಥಿತಿ ಬರುತ್ತಾ? – ಸಂಜು ಕೈ ಹಿಡಿದ ಹಿಟ್‌ಮ್ಯಾನ್

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಆಟದ ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಪ್ರಮುಖ ಬದಲಾವಣೆಯೆಂದರೆ ಬೌಲರ್ ಉದ್ದೇಶಪೂರ್ವಕವಾಗಿ ‘ಫ್ರಂಟ್-ಫೂಟ್ ನೋ-ಬಾಲ್’ ಎಸೆದರೆ ಅಥವಾ ಅವರ ಕಾಲನ್ನ ನಿಗದಿತ ಪ್ರದೇಶದಿಂದ ಹೊರಗಿಟ್ಟು ಚೆಂಡನ್ನು ಎಸೆದರೆ ಆ ಬೌಲರ್‌ಅನ್ನು ಇಡೀ ಪಂದ್ಯಕ್ಕೆ ಅಮಾನತುಗೊಳಿಸುಲ ನಿಯಮವನ್ನ ಜಾರಿಗೆ ತರಲಾಗಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರತಿ ಬಾರಿಯೂ ಪಂದ್ಯಗಳನ್ನು ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಈ ಇಬ್ಬರು ನಾಳೆ ತಂಡದಿಂದ ಹೊರಬಿದ್ದರೆ ಟೀಂ ಇಂಡಿಯಾದ ಗತಿ ಏನಾಗಬಹುದು? ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಬೇಜವಾಬ್ದಾರಿಯಿಂದ ಆಡುತ್ತಿರುವುದು ನಿರಾಶಾದಾಯಕವಾಗಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಯುವ ಆಟಗಾರರು ಜವಾಬ್ದಾರಿಯುತವಾಗಿ ಆಡಲು ಕಲಿಯಬೇಕು ಎಂದು ಗಂಗೂಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಹಾಗೂ ತಂಡದಲ್ಲಿನ ಸ್ಥಾನದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಒಂದು ವೇಳೆ ಆಯ್ಕೆ ಸಮಿತಿಯು ಇವರಿಬ್ಬರನ್ನು ತಂಡದಿಂದ ಕೈಬಿಡುವ ತೀರ್ಮಾನಕ್ಕೆ ಬಂದರೆ ಇವರಿಬ್ಬರ ಅಭಿಮಾನಿಗಳ ಆಕ್ರೋಶವು BCCI ಮೇಲ್ಛಾವಣಿಯನ್ನೇ ಉರುಳಿಸುವಷ್ಟು ತೀವ್ರವಾಗಿರುತ್ತದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈ ಬಿಡುವಂತಹ ನಿರ್ಧಾರಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿದ್ದಾರೆ.
ಯುವರಾಜ್ ಸಿಂಗ್, ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ನಾನು ಒಮ್ಮೆ ರೋಹಿತ್ ಮತ್ತು ವಿರಾಟ್ ಕೊಹ್ಲಿ ಈಗ ಇದ್ದ ಪರಿಸ್ಥಿತಿಯಲ್ಲೇ ಇದ್ದೆ. ನನಗೆ ಅವಕಾಶ ಸಿಗುತ್ತದೋ, ಇಲ್ಲವೋ ಎನ್ನುವ ಗೊಂದಲದಲ್ಲೇ ಹಲವು ದಿನಗಳನ್ನ ಕಳೆದಿದ್ದೆ. ಯಾವುದೇ ಅನುಮಾನಗಳು ಹುಟ್ಟಿಕೊಳ್ಳದಂತೆ ಈಗಲೇ ಅವರಿಗೆ ತಿಳಿಸಬೇಕು. ನೀವು ವಿಶ್ವಕಪ್ ಯೋಜನೆಗಳ ಭಾಗವಾಗಿದ್ದೀರಿ, ಚಿಂತಿಸದೆ ಆಟವಾಡಿ. ನೀವು ತಂಡದಲ್ಲಿ ಉಳಿಯುತ್ತೀರಿ ಎಂದು ರೋ-ಕೋಗೆ ತಿಳಿಸಬೇಕೆಂದು ಯುವಿಗೆ ಹೇಳಿದ್ದಾರೆ.
ರೋಹಿತ್ ಶರ್ಮಾ ನೀಡಿದ ಧೈರ್ಯ, ಮಾನಸ್ಥಿಕ ಸ್ಥೈರ್ಯ, ಅಭಯದ ಮಾತುಗಳು ನನ್ನ ಕರಿಯರ್ ಬದಲಾಯಿಸಿತು ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಸಮೀಪಿಸುತ್ತಿದ್ದಂತೆ ಟಿ20 ತಂಡದಿಂದ ಹೊರಬಿದ್ದೆ. ಆಗ ವಿಶ್ವಕಪ್ ತಂಡದಲ್ಲಿ ನಿನಗೆ ಸ್ಥಾನವಿದೆ, ಚಿಂತೆ ಬಿಡು ಎಂದಿದ್ದರು. ಆದರೆ ನನಗೆ ರೋಹಿತ್ ಶರ್ಮಾ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಆದರೆ ರೋಹಿತ್ ಹೇಳಿದಂತೆ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾನು ಪ್ರಮುಖ ಸದಸ್ಯನಾಗಿದ್ದೆ. ತಂಡದ ಗೆಲುವಿನಲ್ಲಿ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದಿದ್ದಾರೆ.
ವೈಭವ್ ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. ಕೇವಲ 15 ವರ್ಷದ ಬಾಲಕನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವಾಗ, ಕೇವಲ ಎರಡು ಅಥವಾ ಮೂರು ಪಂದ್ಯಗಳ ನಂತರ ಆತನನ್ನು ಟೀಕಿಸುವುದು ಸರಿಯಲ್ಲ ಎಂದು ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಹೇಳಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡಿದರೆ, ವೈಭವ್ ಭವಿಷ್ಯದ ಒಬ್ಬ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಬಲ್ಲರು ಎಂದು ರಜಾ ಹೇಳಿದ್ದಾರೆ.
ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಅಪೀಲು ನ್ಯಾಯಾಧಿಕರಣದಿಂದ ದೊಡ್ಡ ರಿಲೀಫ್ ಸಿಕ್ಕಿದೆ. 2009ರ ದಕ್ಷಿಣ ಆಫ್ರಿಕಾ ಐಪಿಎಲ್‌ಗೆ ಸಂಬಂಧಿಸಿದಂತೆ ED ದಾಖಲಿಸಿದ್ದ ಪ್ರಕರಣದಲ್ಲಿ, ಹಣದ ವರ್ಗಾವಣೆಯು ಕರೆಂಟ್ ಅಕೌಂಟ್ ವ್ಯವಹಾರ ಎಂದು ಪರಿಗಣಿಸಿ, ಲಲಿತ್ ಮೋದಿ ಮೇಲೆ ವಿಧಿಸಲಾಗಿದ್ದ 10.65 ಕೋಟಿ ರೂ. ದಂಡವನ್ನು ನ್ಯಾಯಾಧಿಕರಣ ರದ್ದುಗೊಳಿಸಿದೆ. ಈ ಮೂಲಕ ಲಲಿತ್ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಬಹುನಿರೀಕ್ಷಿತ ‘ದಿ ಹಂಡ್ರೆಡ್ ವುಮೆನ್ಸ್’ ಕ್ರಿಕೆಟ್ ಟೂರ್ನಿ ಶುರುವಾಗಿದ್ದು, ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಸ್ಮೃತಿ ವೈಯುಕ್ತಿಕ ಕಾರಣಗಳಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ನೇರ ಒಪ್ಪಂದ ಮೂಲಕ ಸ್ಮೃತಿ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇಂಗ್ಲೆಂಡ್ ತಂಡದ ಉದಯೋನ್ಮುಖ ಆಲ್‌ರೌಂಡರ್ ಜೇಕಬ್ ಬೆಥೆಲ್ ಬಲ ಮೊಣಕಾಲಿನ ಗಾಯದ ಕಾರಣದಿಂದಾಗಿ 2026ರ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡವನ್ನು ಮುನ್ನಡೆಸಬೇಕಾಗಿದ್ದ ಬೆಥೆಲ್ ಅವರ ಅನುಪಸ್ಥಿತಿ, ಟೂರ್ನಿ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.
ಅಫ್ಘಾನಿಸ್ತಾನ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಹಶ್ಮತುಲ್ಲಾ ಶಾಹಿದಿ ಘೋಷಿಸಿದ್ದಾರೆ. ನಮ್ಮ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಲು ನಾನು ನಿರ್ಧರಿಸಿದ್ದೇನೆ. ಈ ತಂಡವನ್ನು ಮುನ್ನಡೆಸುವುದು ಒಂದು ದೊಡ್ಡ ಗೌರವವಾಗಿದೆ. ಈ ಪ್ರಯಾಣದುದ್ದಕ್ಕೂ ನನ್ನ ಮೇಲೆ ನಂಬಿಕೆ ಮತ್ತು ಬೆಂಬಲ ನೀಡಿದ್ದಕ್ಕಾಗಿ ಆಡಳಿತ ಮಂಡಳಿ, ತರಬೇತುದಾರರು, ನನ್ನ ತಂಡದ ಸದಸ್ಯರು ಮತ್ತು ನಮ್ಮ ಬೆಂಬಲಿಗರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ನೋಡಿರಿ

