ಜಾಕಿಶ್ರಾಫ್ ಜೀವನ‌ ಗ್ರಾಫ್ ಬದಲಾಗಿದ್ದೆಲ್ಲಿ? – ಅಪ್ಪ‌ ಜ್ಯೋತಿಷಿ.. ಮಗ ಏನೇನ್ ಕೆಲಸ‌ ಮಾಡಿದ್ದ?

ಜಾಕಿಶ್ರಾಫ್ ಜೀವನ‌ ಗ್ರಾಫ್ ಬದಲಾಗಿದ್ದೆಲ್ಲಿ? – ಅಪ್ಪ‌ ಜ್ಯೋತಿಷಿ.. ಮಗ ಏನೇನ್ ಕೆಲಸ‌ ಮಾಡಿದ್ದ?

ಫಿಲ್ಮ್ ಇಂಡಸ್ಟ್ರಿಯಲ್ಲಿ ಅನೇಕ ಕಲಾವಿದರು ಕಲ್ಲು, ಮುಳ್ಳಿನ ಹಾದಿಯಲ್ಲೇ ಬೆಳೆದು ಬಂದಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದಾರೆ.. ಆದ್ರೆ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಭಾರಿ ಸಕ್ಸಸ್ ಕಂಡಿದ್ದಾರೆ. ಇದೇ‌ ಸಾಲಿಗೆ ಸೇರಿದ್ದಾರೆ ಜಾಕಿ ಶ್ರಾಫ್ . ಇವರು ಸಿಗರೇಟ್ ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ನಡೆಸುತ್ತಿದ್ದರಂತೆ..

ಒಂದು ದಿನ ಜಾಕಿ ಶ್ರಾಫ್ ಬಸ್ ನಿಲ್ದಾಣದಲ್ಲಿ ನಿಂತಾಗ ಜಾಹೀರಾತು ಏಜೆನ್ಸಿಯ ವ್ಯಕ್ತಿಯೊಬ್ಬರು ಗಮನಿಸಿದರು. ಅಂದೇ ಅವರ ಅದೃಷ್ಟ ಬದಲಾಗಿ ಹೋಯ್ತು. ಆ ದಿನದ ನಂತರ ಜಾಕಿ ಶ್ರಾಫ್ ಗ್ಲಾಮರ್ ಲೋಕಕ್ಕೆ ಎಂಟ್ರಿ ಕೊಟ್ರು. ಅಂದಿನಿಂದ ಇಂದಿಗೂ ಬಿ-ಟೌನ್ನಲ್ಲಿ ಅವರ ಪ್ರಭಾವ ಮುಂದುವರಿದಿದೆ. ಇಂದು ಐಷಾರಾಮಿ ಜೀವನ ನಡೆಸುತ್ತಿರುವ ಜಾಕಿ ಶ್ರಾಫ್ ಮುಂಬೈನ ಒಂದು ಚಿಕ್ಕಕೋಣೆಯಲ್ಲಿ ವಾಸಿಸುತ್ತಿದ್ದರು ಎಂಬುದು ಕೆಲವೇ ಜನರಿಗೆ ತಿಳಿದಿದೆ.

ಇದನ್ನೂ ಓದಿ: ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು – ರಾಜ್ಯದಲ್ಲಿ ಕೆಫೆ ಸಂಜೀವಿನಿ ಆರಂಭ

ಇವರತಂದೆ ಜ್ಯೋತಿಷಿಯಾಗಿದ್ದರು.  ಬಾಲ್ಯದಲ್ಲಿ ಕಡು ಬಡತನವಿತ್ತು. 10 ವರ್ಷದವರಾಗಿದ್ದ ಮಗನಿಗ ಶಿಕ್ಷಣ ಕೊಡಿಸಲು ಅವರ ತಾಯಿ ಮನೆಮನೆಗೆ ಪಾತ್ರೆ ತೊಳೆಯಲು ಹೋಗ್ತಿದ್ದರು. ಉಳಿದ‌ ಟೈಮಲ್ಲಿ ಮನೆಯಲ್ಲಿ ಸೀರೆ ಮಾರಾಟ ಮಾಡಲು ಪ್ರಾರಂಭಿಸಿದರು. ಜಾಕಿ 10 ನೇ ಕ್ಲಾಸ್ ಓದಿದ ನಂತರ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ತನ್ನ ತಾಯಿಯ ಸಹಾಯಕ್ಕೆ ನಿಂತರು. ಮನೆಯ ಖರ್ಚನ್ನು ನಿಭಾಯಿಸಲು, ಪೋಸ್ಟರ್ ಅಂಟಿಸುವುದು, ಥಿಯೇಟರ್ ಹೊರಗೆ ಕಡಲೆಕಾಯಿ ಮಾರಾಟ ಮತ್ತು ಸಿಗರೇಟ್ ಮಾರಾಟದಂತಹ ಕೆಲಸ ಮಾಡುತ್ತಿದ್ದರಂತೆ.

ಒಂದು ದಿನ ಜಾಕಿ ಬಸ್ ನಿಲ್ದಾಣದಲ್ಲಿ ನಿಂತಾಗ, ಸೂಪರ್ಸ್ಟಾರ್ ಆಗುವ ಪಯಣ ಪ್ರಾರಂಭವಾಯಿತು. ಏಕೆಂದರೆ ಅಲ್ಲಿ ಶ್ರಾಫ್ ಅವರು ಒಬ್ಬ ಜಾಹೀರಾತು ಏಜೆನ್ಸಿಯ ವ್ಯಕ್ತಿಯನ್ನು ಭೇಟಿಯಾಗಿ. ಮಾಡೆಲಿಂಗ್ ಗೆ ಅವಕಾಶ ಪಡೆದುಕೊಂಡರಂತೆ.. ನಟನಿಗೆ ಮೊದಲ ಫೋಟೋಶೂಟ್ ಗೆ 7 ಸಾವಿರ ರೂಪಾಯಿ ಸಿಕ್ಕಿತು ನಂತರ ಜಾಕಿ ಅದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡರು. ಮುಂದೆ ಜಾಕಿ ಅವರಿಗೆ ಸುಭಾಯ್ ಘಾಯ್ ಅವರ ‘ಹೀರೋ’ ಚಿತ್ರದಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಾಗ ತಮ್ಮ ನಟನೆ ಮತ್ತು ಆಕರ್ಷಕ ಶೈಲಿಯಿಂದ ಇಡೀ ದೇಶದ ಜನತೆಯ ಮೆಚ್ಚುಗೆ ಗಳಿಸಿದ್ದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ. ಇಂದು ಜಾಕಿ ತನ್ನ ಶ್ರಮದ ಆಧಾರದ ಮೇಲೆ ಸುಮಾರು 212 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯನಾಗಿದ್ದಾರೆ.

Shwetha M