ಗಂಟೆಗಟ್ಟಲೆ ಜಗಳ ನೋಡುವುದೇ ಬಿಗ್‌ಬಾಸ್ ಶೋ – ಹೀಗಾದರೆ ಈ ರಿಯಾಲಿಟಿ ಶೋ ನೋಡೋದು ಕಷ್ಟ ಅಂತಿದ್ದಾರೆ ವೀಕ್ಷಕರು
ಬರೀ ಜಗಳ ಬೇಡ.. ಸ್ವಲ್ಪ ಮನರಂಜನೆ ಕೊಡಿ ಬಿಗ್ ಬಾಸ್

ಬಿಗ್‌ಬಾಸ್ ಮನೆಯ ಬೀಗ ಓಪನ್ ಆಗಿದೆ. ಆದರೆ, ಸ್ಪರ್ಧಿಗಳ ಬಾಯಿಗೆ ಯಾರಾದರೂ ಬೀಗ ಹಾಕ್ರಪ್ಪಾ ಅನ್ನೋ ವೇದನೆ ಈಗ ವೀಕ್ಷಕರದ್ದು. ಈ ಬಾರಿಯಂತೂ ಜಗಳ ಆಡಿದರೆ ಮಾತ್ರ TRP ಬರುತ್ತೆ ಅನ್ನೋ ವಿಚಾರವೋ.. ಇಲ್ಲ, ನಾವು ಬಂದಿರೋದೇ ಜಗಳ ಮಾಡಲು ಅನ್ನೋ ಧೋರಣೆಯೋ.. ಬಿಗ್‌ಬಾಸ್ ವೀಕ್ಷಣೆ ಮಾಡಲು ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತಿರುವುದು ಮಾತ್ರ ಸುಳ್ಳಲ್ಲ.
ಇದನ್ನೂ ಓದಿ:ಬಿಗ್ ಬಾಸ್ ಮನೆ ರಾತ್ರೋರಾತ್ರಿ ಓಪನ್ – ವೈಲ್ಡ್ ಕಾರ್ಡ್‌ಎಂಟ್ರಿ ಕೊಟ್ಟ ಡಿಕೆಶಿ
ಬಿಗ್‌ಬಾಸ್ ಮನೆಗೆ ಎಲ್ಲಾ ಸ್ಪರ್ಧಿಗಳು ಬಂದಿರುವುದು ಅವರವರ ಆಟ ಆಡಲು. ಆದರೆ, ಆಟ ಆಡುವುದು ಅಂದರೆ ಬಾಯಿಗೆ ಬಾಯಿ ಕೊಟ್ಟು ಜಗಳ ಆಡೋದು ಅನ್ನೋ ಮಟ್ಟಕ್ಕೆ ಇತ್ತೀಚಿನ ಬಿಗ್‌ಬಾಸ್ ರಿಯಾಲಿಟಿ ಶೋ ಬಂದಿದೆ. ದೊಡ್ಡವರು ಟಿವಿ ನೋಡಲು ಕೂತರೆ ಜೊತೆಗೆ ಮಕ್ಕಳು ಇರುತ್ತಾರೆ. ಮಕ್ಕಳು ಇಂಥಾ ಜಗಳ ನೋಡುತ್ತಾ ಕೂತರೆ, ಹೇಗೆ ಅಂತಾ ಅನಿವಾರ್ಯವಾಗಿ ಟಿವಿ ಆಫ್ ಮಾಡಬೇಕಾಗುತ್ತದೆ. ಸ್ವಲ್ಪ ಮನರಂಜನೆ, ಸ್ವಲ್ಪ ಫೈಟಿಂಗ್ ಆದರೂ ಓಕೆ. ಇದು ಝೀರೋ ಮನರಂಜನೆ, ಬರೀ ಜಗಳ ಇದ್ದರೆ ಹೇಗೆ ಅಂತಾ ಕೇಳುತ್ತಿದ್ದಾರೆ ವೀಕ್ಷಕರು.
ಉದಾಹರಣೆಗೆ ನೋಡಿ. ಬಿಗ್‌ಬಾಸ್ ಮನೆಯಲ್ಲಿ ಕೆಲವರು ಒಂಟಿಗಳಾಗಿ, ಕೆಲವರು ಜಂಟಿಗಳಾಗಿ ಇದ್ದಾರೆ. ಜಂಟಿಗಳು ಎಲ್ಲೇ ಹೋದರು ಜೊತೆ-ಜೊತೆಯಾಗಿಯೇ ಹೋಗಬೇಕಿದೆ. ಡಾಗ್ ಸತೀಶ್ ಬಾತ್ ರೂಂಗೆ ಹೋದರೆ ಪೂರ್ಣ ರೆಡಿಯಾಗಿ ಬರಲು ಗಂಟೆಗಳು ತೆಗೆದುಕೊಳ್ಳುತ್ತಾರೆ. ಇದು ಅವರ ಜೊತೆಗಾರ ಚಂದ್ರಪ್ರಭಾಗೆ ಹಿಂಸೆ ಎನಿಸುತ್ತಿದೆ. ಕೊನೆಗೆ ಇಂದು ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು, ಧನುಶ್ ಸಹ ಮಧ್ಯ ಪ್ರವೇಶಿಸಿದ್ದಾರೆ. ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ಸಹ ಹೋಗಿದ್ದಾರೆ.
ಇನ್ನೊಂದು ಉದಾಹರಣೆ ಅಂದರೆ, ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಅವರು ನಂತರ ಮತ್ತೆ ರೀ-ಎಂಟ್ರಿ ನೀಡಿದರು. ದೊಡ್ಮನೆಗೆ ಪುನಃ ಕಾಲಿಡುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ಅವರು ಪಟಾಕಿ ರೀತಿ ಸಿಡಿಯುತ್ತಿದ್ದಾರೆ. ಅಕ್ಟೋಬರ್ 9ರ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಅವರ ಸೌಂಡು ಜಾಸ್ತಿ ಆಗಿದೆ. ಅವರ ಆರ್ಭಟ ನೋಡಿ ಧ್ರುವಂತ್, ಅಶ್ವಿನಿ ಗೌಡ ಮುಂತಾದವರಿಗೆ ಅಚ್ಚರಿ ಆಗಿದೆ. ಅಸುರಾಧಿಪತಿ ಆಗಿರುವ ಕಾಕ್ರೋಚ್ ಸುಧಿಗೆ ರಕ್ಷಿತಾ ಶೆಟ್ಟಿ ಆವಾಜ್ ಹಾಕಿದ್ದಾರೆ. ಅಷ್ಟೇ ಅಲ್ಲ, 12 ಜನರು ತಿನ್ನುವ ಊಟವನ್ನು ಕೂಡಾ ಹಾಳು ಮಾಡಿದ್ದಾರೆ ರಕ್ಷಿತಾ. ಇದಾದ ಮೇಲೆ ಶುರುವಾಯ್ತು ನೋಡಿ ಜಗಳ.. ಯಾರಾದಾರೂ ಗಂಟೆಗಟ್ಟಲೆ ಜಗಳ ನೋಡುವ ಶಿಕ್ಷೆ ಬೇಕಾ.. ?
ಮೊದಲು ರಕ್ಷಿತಾ ಶೆಟ್ಟಿ ಅವರು ಮಾಡುತ್ತಿದ್ದ ಅಡುಗೆಯನ್ನು ಕಾಕ್ರೂಚ್ ಸುಧಿ ಕೆಡಿಸಿದರು. ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ರಕ್ಷಿತಾ ಶೆಟ್ಟಿ ಅವರು ನಿರ್ಧಾರ ಮಾಡಿದರು. ಜಂಟಿಗಳಾಗಿರುವ 12 ಜನರಿಗೆ ಚಿಕನ್ ಬೇಯಿಸಲಾಗುತ್ತಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಚಿಕನ್ ಬೇಯುತ್ತಿದ್ದ ಪಾತ್ರೆಗೆ ಟೀ ಸುರಿದರು. ಅದರಿಂದಾಗಿ ತಿನ್ನುವ ಅನ್ನಕ್ಕೆ ಮಣ್ಣು ಹಾಕಿದಂತಾಯಿತು. ರಕ್ಷಿತಾ ಶೆಟ್ಟಿ ಮಾಡಿದ ಈ ಕೆಲಸದಿಂದ ಬಿಗ್ ಬಾಸ್ ಮನೆಯ ಜಂಟಿಗಳಿಗೆ ತೀವ್ರ ಕೋಪ ಬಂತು. ಕಾಕ್ರೋಜ್ ಸುಧಿ ಒಬ್ಬರು ಮಾಡಿದ ತಪ್ಪಿಗಾಗಿ ರಕ್ಷಿತಾ ಶೆಟ್ಟಿ ಅವರು 12 ಜನರ ಊಟ ಕೆಡಿಸಬಾರದಾಗಿತ್ತು ಎಂದು ಎಲ್ಲರೂ ರೇಗಾಡಿದರು. ಆ ವೇಳೆ ಮಂಜು ಭಾಷಿಣಿ ಅವರು ರಕ್ಷಿತಾ ಶೆಟ್ಟಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ರಕ್ಷಿತಾ ಶೆಟ್ಟಿ ಅವರಲ್ಲಿ ಮುಗ್ಧತೆ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಸಲಿಗೆ ಆಗುತ್ತಿರುವುದೇ ಬೇರೆ. ರಕ್ಷಿತಾ ಶೆಟ್ಟಿ ಅವರು ಅಂದುಕೊಂಡಷ್ಟು ಮುಗ್ಧೆ ಅಲ್ಲ ಎಂಬುದು ಅರ್ಥ ಆಗುತ್ತಿದೆ.

ನೋಡಿರಿ

