ಇದು 1962 ಅಲ್ಲ, ಭಾರತದ ಗಡಿ ಮುಟ್ಟಿದ್ರೆ ತಕ್ಕ ಉತ್ತರ ನೀಡುತ್ತೇವೆ – ಚೀನಾಗೆ ಸಿಎಂ ಪೆಮಾ ಖಂಡು ಎಚ್ಚರಿಕೆ

ಇದು 1962 ಅಲ್ಲ, ಭಾರತದ ಗಡಿ ಮುಟ್ಟಿದ್ರೆ ತಕ್ಕ ಉತ್ತರ ನೀಡುತ್ತೇವೆ – ಚೀನಾಗೆ ಸಿಎಂ ಪೆಮಾ ಖಂಡು ಎಚ್ಚರಿಕೆ

ನವದೆಹಲಿ: ಇದು 1962 ಅಲ್ಲ, ಭಾರತ ಯಾವುದೇ ರಾಷ್ಟ್ರವನ್ನು ಎದುರಿಸಲು ಸನ್ನದ್ಧವಾಗಿದೆ. ಗಡಿ ಪ್ರದೇಶ ಆಕ್ರಮಿಸಲು ಯತ್ನಿಸಿದರೆ ತಕ್ಕ ಉತ್ತರ ನೀಡಲಿದ್ದೇವೆ  ಎಂದು ತವಾಂಗ್​ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ ಚೀನಾಗೆ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಕಡಕ್ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಭಾರತ –  ಚೀನಾ ಗಡಿ ಸಂಘರ್ಷ… ಪರಿಸ್ಥಿತಿ “ಸ್ಥಿರವಾಗಿದೆ” ಎಂದ ಚೀನಾ

ತವಾಂಗ್ ಗಡಿ ಸಂಘರ್ಷ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾ ಗಡಿ ತಂಟೆ ಮಾಡಿದ ಯಾಂಗ್ಟನ್​ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ನಾನು ಮತ್ತು ಯೋಧರು ಆ ಪ್ರದೇಶದ ಗ್ರಾಮಸ್ಥರನ್ನು ಭೇಟಿಯಾಗುತ್ತೇವೆ. ಗಡಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಯತ್ನವನ್ನು ನಮ್ಮ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದೆ. ತಕ್ಕ ಉತ್ತರ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಹೇಳಿಕೆಯನ್ನು ಟ್ವೀಟ್​ ಮಾಡಿರುವ ಪೆಮಾ ಖಂಡು ಅವರು, ಇದು 1962 ಅಲ್ಲ. ಯಾರಾದರೂ ಗಡಿ ನಿಯಮ ಉಲ್ಲಂಘಿಸಲು ಪ್ರಯತ್ನಿಸಿದರೆ, ನಮ್ಮ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ದೇಶದ ಜಾಗವನ್ನು ಅತಿಕ್ರಮಿಸಿಕೊಳ್ಳುವ ಪ್ರಯತ್ನವನ್ನು ವಿಫಲಗೊಳಿಸಲು ನಾವು ಸಿದ್ಧ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಈ ನಡುವೆ ಗಡಿ ಸಂಘರ್ಷ ಕುರಿತು ಚೀನಾ ಸರ್ಕಾರ ಇದೂವರೆಗೂ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಮಾತ್ರ, ಭಾರತದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಘರ್ಷಣೆ ಬಗ್ಗೆ ಎರಡೂ ಕಡೆಯಿಂದ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

suddiyaana