ನಂದೇ ಗ್ರೌಂಡ್.. ನಾನೇ ಕಿಂಗ್ – RCBಗೆ ಪಾಠ ಕಲಿಸಿದ ರಾಹುಲ್
ಮನೆ ಮಗನ ನಿರ್ಲಕ್ಷಿಸಿದ್ದಕ್ಕೆ ಶಿಕ್ಷೆನಾ?

ನಂದೇ ಗ್ರೌಂಡ್.. ನಾನೇ ಕಿಂಗ್ – RCBಗೆ ಪಾಠ ಕಲಿಸಿದ ರಾಹುಲ್ಮನೆ ಮಗನ ನಿರ್ಲಕ್ಷಿಸಿದ್ದಕ್ಕೆ ಶಿಕ್ಷೆನಾ?

ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ನಡೆದ ಡೆಲ್ಲಿ ವರ್ಸಸ್ ಬೆಂಗಳೂರು ನಡುವಿನ ಕದನದಲ್ಲಿ ಡೆಲ್ಲಿ ತಂಡ ಗೆದ್ದು ಬೀಗಿದೆ. ಬಟ್ ಈ ಗೆಲುವಿಗೆ ಕಾರಣವೇ ಕನ್ನಡಿಗ ಕೆಎಲ್ ರಾಹುಲ್. ಐಪಿಎಲ್ ಮೆಗಾ ಹರಾಜಿನಲ್ಲಿ ಕೈಬಿಟ್ಟ ಆರ್​ಸಿಬಿ ಫ್ರಾಂಚೈಸಿಗೆ, ರಾಹುಲ್ ಆಟ ಟಿ-20ಗೆಲ್ಲಾ ಸೂಟ್ ಆಗಲ್ಲ ಅಂದವ್ರಿಗೆ, ಮೈದಾನದಲ್ಲೇ ಅವಮಾನಿಸಿದ ಮಾಲೀಕರಿಗೆ, ವೀ ವಾಂಟ್ ವಿಕೆಟ್ ಅಂತಾ ಘೋಷಣೆ ಕೂಗ್ತಿದ್ದವ್ರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಅದೂ ಸಾಲ್ದು ಅಂತಾ ರಾಹುಲ್ ತಾನು ಆಡಿ ಬೆಳೆದ ಮೈದಾನದಲ್ಲಿ ಗೀಟ್ ಎಳೆದು ಇಟ್ಸ್ ಮೈ ಹೋಂ ಗ್ರೌಂಡ್ ಅಂತಾ ಇಡೀ ಜಗತ್ತಿಗೇ ಸಾರಿ ಹೇಳಿದ್ದಾರೆ.

ಇದನ್ನೂ ಓದಿ : RCB Vs DC ಫೈಟ್.. ಎರಡೂ ತಂಡಗಳೂ ಸ್ಟ್ರಾಂಗ್ – ಬೆಂಗಳೂರು ಮೈದಾನ ಯಾರಿಗೆ ಪ್ಲಸ್?

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿಗೆ ಸ್ಫೋಟಕ ಆರಂಭ ಸಿಕ್ಕಿತ್ತು. ಫಿಲ್ ಸಾಲ್ಟ್ ರನ್ ಮಳೆಯನ್ನೇ ಸುರಿಸ್ತಿದ್ರು. ಒಂದೇ ಓವರ್​ನಲ್ಲಿ ಫಿಲಿಪ್ ಸಾಲ್ಟ್ 30ರನ್ ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ಕೊಟ್ಟರು. ಬಟ್ 37 ರನ್ ಗಳಿಸಿರುವಾಗ ಸಾಲ್ಟ್ ರನೌಟ್​ಗೆ ಬಲಿಯಾದರು. ಈ ವೇಳೆ 3 ಓವರ್​ಗೆಲ್ಲಾ 50 ರನ್ ಕಂಪ್ಲೀಟ್ ಮಾಡಿಯಾಗಿತ್ತು. ಬಟ್ ಯಾವಾಗ ಸಾಲ್ಟ್ ಔಟ್ ಆದ್ರೂ ಆರ್​ಸಿಬಿಯ ಎಲ್ಲಾ ಬ್ಯಾಟ್ಸ್​​ಮನ್ಸ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ರು. ಕೊನೆಗೆ ಟಿಮ್ ಡೇವಿಡ್ ಬಂದು 37 ರನ್ ಹೊಡೆದು ತಂಡದ ಮೊತ್ತವನ್ನ 163ಕ್ಕೆ ಏರಿಸಿದ್ರು. ಈಸಿ ಟಾರ್ಗೆಟ್ ಬೆನ್ನತ್ತಿದ ಡಿಸಿ 3 ಓವರ್​ಗಳಲ್ಲೇ 3 ವಿಕೆಟ್ ಕಳ್ಕೊಂಡು ಆರಂಭದಲ್ಲೇ ಆಘಾತ ಅನುಭವಿಸಿತ್ತು. 58 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಸೋ ಬೆಂಗಳೂರು ಟೀಂ ಗೆಲ್ಲೋ ಹೋಪ್ಸ್ ಬಂದಿತ್ತು. ಬಟ್ ಯಾವಾಗ ಕೆಎಲ್ ರಾಹುಲ್​ಗೆ ಸ್ಟಬ್ಸ್ ಜೊತೆಯಾದ್ರೋ ಈ ಪಾಟ್ನರ್​ಶಿಪ್​ನ ಯಾರೂ ಬ್ರೇಕ್ ಮಾಡೋಕೆ ಆಗ್ಲಿಲ್ಲ. 53 ಬಾಲ್​ಗಳನ್ನು ಎದುರಿಸಿದ ಅವರು 6 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ, 175 ಸ್ಟ್ರೈಕ್ ರೇಟ್ ನಲ್ಲಿ ಅಜೇಯ 93 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ ಟೀಂ ಗೆದ್ದಾದ್ಮೇಲೆ ಇದು ನನ್ನ ಹೋಂ ಗ್ರೌಂಡ್.. ಇಲ್ಲಿ ನಾನೇ ಕಿಂಗ್ ಎನ್ನುವಂತೆ ಸೆಲೆಬ್ರೇಟ್ ಮಾಡಿದ್ದು ಅಲ್ಟಿಮೇಟ್ ಆಗಿತ್ತು. ಕೆಎಲ್ ರಾಹುಲ್ ಬೇರೆ ಬೇರೆ ಗ್ರೌಂಡ್​ಗಳಲ್ಲೂ ಸಾಕಷ್ಟು ರನ್ಸ್ ಗಳಿಸಿದ್ದಾರೆ. ಅಷ್ಟೇ ಯಾಕೆ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧದ ಪಂದ್ಯದಲ್ಲೂ ಚೆಪಾಕ್ ಮೈದಾನದಲ್ಲಿ 77 ರನ್ ಗಳಿಸಿದ್ರು. ಬಟ್ ಅಲ್ಲಿ ಈಥರ ಸೆಲೆಬ್ರೇಟ್ ಮಾಡಿರಲಿಲ್ಲ. ಆದ್ರೆ ಚಿನ್ನಸ್ವಾಮಿಯಲ್ಲಿ ಇಷ್ಟೊಂದು ಅಗ್ರೆಸ್ಸಿವ್ ಆಗೋಕೆ ಕಾರಣಗಳೂ ಇವೆ.

ವೈಲೆಂಟ್ ರಾಹುಲ್!

ಹರಾಜಿನಲ್ಲಿ ರಾಹುಲ್ ರನ್ನ ಖರೀದಿ ಮಾಡದ ಆರ್ ಸಿಬಿ

ಹೋಂ ಗ್ರೌಂಡ್ ನಲ್ಲಿ ಆಡೋ ಆಸೆ ತೋರಿಸಿದ್ರೂ ನಿರ್ಲಕ್ಷ್ಯ

ನಾನು ಬೆಂಗಳೂರಿನ ಹುಡುಗ, ಚಿನ್ನಸ್ವಾಮಿ ಹೋಂ ಗ್ರೌಂಡ್

ರಾಹುಲ್ ಬ್ಯಾಟಿಂಗ್ ವೇಳೆ ವೀ ವಾಂಟ್ ವಿಕೆಟ್ ಎನ್ನುತ್ತಿದ್ದ ಫ್ಯಾನ್ಸ್

ಫ್ಯಾನ್ಸ್ ಕೂಗಿದಾಗಲೆಲ್ಲಾ ಟ್ರಿಗಲ್ ಆಗಿ ಫೋರ್, ಸಿಕ್ಸ್

ಮಳೆ ಆರಂಭ, ಡಕ್ವರ್ತ್ ಲೂಯಿಸ್ ನಿಯಮದ ಆತಂಕ

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಸೋತ್ರೂ ರಾಹುಲ್ ಆಟವನ್ನ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ರಾಹುಲ್​ರದ್ದೇ ಹಾವಳಿ. ಸಾಂಗ್ಸ್, ಡೈಲಾಗ್ಸ್ ಅಂತಾ ಸೆಲೆಬ್ರೇಟ್ ಮಾಡ್ತಿದ್ದಾರೆ.

Shantha Kumari

Leave a Reply

Your email address will not be published. Required fields are marked *