ಕಾಂತಾರ ಪ್ರಪಂಚ ತೋರಿಸಿದ ರಿಷಬ್ – ಮೇಕಿಂಗ್‌ನಲ್ಲೇ ಶೆಟ್ರ ಶಾಕಿಂಗ್ ಸೀನ್!
ರಾಕೇಶ್ ಪೂಜಾರಿ ಆ್ಯಕ್ಟಿಂಗ್ ನೋಡಿದ್ರಾ?

ಮೂರು ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ. ಎಷ್ಟೆ ಕಷ್ಟ ಬಂದರು ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನನ್ನ ನಿರ್ಮಾಪಕರು ನನ್ನ ಬೆನ್ನ ಹಿಂದೆ ನಿಂತಿದ್ದರು. ಪ್ರತಿದಿನ ಸೆಟ್ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ಲ, ಇದೊಂದು ಶಕ್ತಿ. ಕಾಂತರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಇದು ಕಾಂತಾರ ನಿರ್ದೇಶಕ ರಿಷಭ್ ಶೆಟ್ರು ಮಾತು. ಹೌದು ಕಾಂತಾರ ಸಿನಿಮಾ ತಂಡ ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ಮುಗಿಸಿದೆ.. ನಮ್ ಶೂಟಿಂಗ್ ಮುಗಿತು ಅನ್ನೋದ್ದನ್ನ ರಿಷಭ್ ಶೆಟ್ರು ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.. ಈ ಮೇಕಿಂಗ್ ವಿಡಿಯೋ ಸಖತ್ ಆಗಿದೆ.. ವಿಡಿಯೋ ಶುರುವಿನಲ್ಲಿ ದಟ್ಟ ಅರಣ್ಯದಲ್ಲಿ ನಡೆಯೋ ಶೂಟಿಂಗ್ ತೋರಿಸುತ್ತಾ ಶೆಟ್ರು ಬ್ಯಾಕ್‌ಗ್ರೌಂಡ್‌ನಲ್ಲಿ ವಾಯ್ಸ್ ಕೊಟ್ಟಿದ್ದಾರೆ.
ಮೇಕಿಂಗ್ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ ಹೊಂಬಾಳೆ ಸಂಸ್ಥೆ ನೀರಿನಂತೆ ಹಣ ಚೆಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ ಅನ್ನೋದು.. ಬರೀ ಮೇಕಿಂಗ್ ವೀಡಿಯೋವನ್ನು ಒಂದು ಸಿನಿಮಾ ರೀತಿ ಕಟ್ಟಿಕೊಟ್ಟಿದ್ದಾರೆ. ಪಾತ್ರಕ್ಕಾಗಿ ರಿಷಬ್ ಶೆಟ್ಟಿ ತಯಾರಾಗಿರುವುದು, ಸೆಟ್ ನಿರ್ಮಾಣ, ಕಾಸ್ಟ್ಯೂಮ್ ಡಿಸೈನ್ ಎಲ್ಲವನ್ನು ಮೇಕಿಂಗ್ ವೀಡಿಯೋದಲ್ಲಿ ತೆರೆದಿಟ್ಟಿದ್ದಾರೆ. ಚಿತ್ರಕ್ಕಾಗಿ ಒಂದು ಊರಿನ ಸೆಟ್ ಅನ್ನೇ ಹಾಕಿದ್ದಾರೆ. ನಡುವೆ ದೊಡ್ಡದೊಂದು ದೇವಾಲಯ ಸೆಟ್ ಕೂಡ ಇದೆ. ಅದೇ ಚಿತ್ರದ ಹೈಲೆಟ್ ಆಗುವಂತೆ ಕಾಣುತ್ತಿದೆ. ಸಾವಿರಾರು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.ಸಾಮಾನ್ಯವಾಗಿ ರಾಜಮೌಳಿ ತಮ್ಮ ಸಿನಿಮಾಗಳಿಗೆ ಹೀಗೆ ದೊಡ್ಡ ಸೆಟ್‌ಗಳನ್ನು ಹಾಕಿ ಸಾವಿರಾರು ಜನರನ್ನು ಬಳಸಿಕೊಂಡು ಚಿತ್ರೀಕರಣ ನಡೆಸುತ್ತಾರೆ. ಅದೇ ರೀತಿ ‘ಕಾಂತಾರ’ ತಂಡ ಕೂಡ ದೊಡ್ಡದಾಗಿ ಕನಸು ಕಂಡು ಅದನ್ನು ನನಸು ಮಾಡಿಕೊಳ್ಳಲು ರಿಷಬ್ ಶೆಟ್ಟಿ ಅಂಡ್ ಟೀಂ ಶ್ರಮಿಸಿದ್ದಾರೆ . ಮೇಕಿಂಗ್ ವಿಡಿಯೋದಲ್ಲೇ ಮೈನವಿರೇಳಿಸೋ ಸೀನ್ ತೋರಿಸಿದ್ದಾರೆ . ಹೊಸ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ..
ಈ ಮೇಕಿಂಗ್ ವಿಡಿಯೋ ನೋಡಿದ್ರೆ ಸಾಕು ಕಾಂತಾರ ಚಾಪ್ಟರ್1 ನೋಡ್ಲೆ ಬೇಕು ಅನ್ಸುತ್ತೆ.. ಥಿಯೇಟರ್‌ನೊಳಗೆ ಮೈಮರೆತು ಸಿನಿಮಾ ನೋಡಬೇಕು ಅನ್ಸುತ್ತೆ.. ಅಷ್ಟರ ಮಟ್ಟಿಗೆ ಕಾಂತಾರ ಚಾಪ್ಟರ್ 1 ಹೀಟ್ ಕ್ರಿಯೆಟ್ ಮಾಡಿದೆ.. . ಕನ್ನಡ ಸಿನಿಮಾ ರಂಗ ಎಷ್ಟು ಕ್ವಾಲಿಟಿ ಸಿನಿಮಾ ಕೊಡುತ್ತೆ ಅನ್ನೋದ್ದನ್ನ ರಿಷಬ್ ಶೆಟ್ರು ಸಾರಿ ಸಾರಿ ಮತ್ತೊಮ್ಮೆ ಹೇಳಲಿದ್ದಾರೆ.
ಮೇಕಿಂಗ್ ವಿಡಿಯೋದಲ್ಲಿ ಕಾಣಿಸಿಕೊಂಡ ರಾಕೇಶ್ ಪೂಜಾರಿ
ಇನ್ನೂ ಈ ಮೇಕಿಂಗ್ ವಿಡಿಯೋದಲ್ಲಿ ಮೃತ ರಾಕೇಶ್ ಪೂಜಾರಿ ಕಾಣಿಸಿಕೊಳ್ಳುತ್ತಾರೆ. ಮೇಕಿಂಗ್ ವೀಡಿಯೋದ ಒಂದು ಫ್ರೇಮ್‌ನಲ್ಲಿ ಅವರನ್ನು ನೋಡಬಹುದು. ಮೇಕಿಂಗ್ ವೀಡಿಯೋದ 1 ನಿಮಿಷದ 11 ಸೆಕೆಂಡ್‌ನಲ್ಲಿ ರಿಷಬ್ ಶೆಟ್ಟಿ ಬಿಲ್ಲು ಬಾಣ ಬಿಡುವ ದೃಶ್ಯ ಇದೆ. ಅದರಲ್ಲಿ ಅವರ ಪಕ್ಕದಲ್ಲಿ ಸಹ ಕಲಾವಿದರ ಗುಂಪಿನಲ್ಲಿ ತಲೆಗೆ ಬಟ್ಟೆ ಸುತ್ತಿಕೊಂಡು ರಾಕೇಶ್ ಪೂಜಾರಿ ಇರುವುದನ್ನು ನೋಡಬಹುದು. ಕೆಲವರು ರಾಕೇಶ್ ಪೂಜಾರಿ ಇರುವ ಆ ಸನ್ನಿವೇಶದ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡುತ್ತಿದ್ದಾರೆ. ಮತ್ತೊಮ್ಮೆ ಅವರನ್ನು ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ದೈವದ ಆಶೀವಾರ್ದವಿದ್ರೂ ಕಾಂತಾರಕ್ಕೆ ಸಾಕಷ್ಟು ವಿಘ್ನಗಳು ಎದುರಾಗಿದ್ವು. ಕಾಂತಾರ ಚಾಪ್ಟರ್ 1 ಸಿನಿಮಾ ಸೆಟ್ನಲ್ಲಿ ಆಗಾಗ ಸರಣಿ ಅವಘಡಗಳು ನಡೆಯುತ್ತಲೇ ಇದ್ದವು. ಮೊದಲಿಗೆ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಒಬ್ಬರು ಈಜಲು ಹೋಗಿ ಮುಳುಗಿ ಪ್ರಾಣಬಿಟ್ಟರು. ಅದಾದ ಮೇಲೆ ಸಿನಿಮಾನಲ್ಲಿ ನಟಿಸಿದ್ದ ಕನ್ನಡದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಕೆಲ ದಿನಗಳ ಹಿಂದಷ್ಟೆ ವಿಜು ವಿಕೆ ಎಂಬ ಕೇರಳದ ಕಲಾವಿದ ಮೃತಪಟ್ಟಿದ್ರು.. ಇದೆಲ್ಲದರ ಬಳಿಕ ದೋಣಿಯೇ ಮುಗಿಚಿತ್ತು. ಈ ಸಾಲು ಸಾಲು ಅವಘಡಗಳ ಮಧ್ಯೆ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕಾಂತಾರ ಚಿತ್ರತಂಡ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆಸಿದ್ದು, ಇದೀಗ ಮೇಕಿಂಗ್ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ಲ್ ಆಗಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಾಹಣ, ವಿನೇಶ್ ಬಂಗ್ಲನ್ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕೆ ಇದೆ. ಕಾಂತಾರ: ಚಾಪ್ಟರ್ 1’ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದೀಗ ಮೇಕಿಂಗ್ ವಿಡಿಯೋ ನೋಡಿದ ನಂತರವಂತೂ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜಾಸ್ತಿಯಾಗಿದೆ.

ನೋಡಿರಿ

