ಪಂಜಾಬ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ – ಕೆಕೆಆರ್‌ಗೆ ಗೆಲುವಿನ ಕೇಕೆಯ ನಿರೀಕ್ಷೆ

ಪಂಜಾಬ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ – ಕೆಕೆಆರ್‌ಗೆ ಗೆಲುವಿನ ಕೇಕೆಯ ನಿರೀಕ್ಷೆ

ಈ ಬಾರಿ ಐಪಿಎಲ್‌ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿರುವ ಪಂಜಾಬ್ ಗೆ ಇವತ್ತು ಮಾಡು ಇಲ್ಲವೇ ಮಡಿ ಅನ್ನೋ ಸ್ಥಿತಿಯಲ್ಲೇ ಪಂದ್ಯವನ್ನಾಡಬೇಕು. ಇವತ್ತಿನ ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ. ಗೆದ್ದರಷ್ಟೇ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲಿದೆ ಪಂಜಾಬ್ ಕಿಂಗ್ಸ್.

ಇದನ್ನೂ ಓದಿ: RCB ವಿರುದ್ಧ ಸೋತ ಸಿಟ್ಟಲ್ಲಿ ಕಮಿನ್ಸ್ ಸಿಡಿಮಿಡಿ – SRH ತಂಡದ ಓನರ್ ಕಾವ್ಯ ಮಾರನ್ ನೋವಿಗೂ ಕೊನೆಯಿಲ್ಲ..!

ಈಗಾಗಲೇ ಆಡಿರುವ 8 ಪಂದ್ಯದಲ್ಲಿ ಕೇವಲ 2ರಲ್ಲಿ ಮಾತ್ರ ಪಂಜಾಬ್ ಗೆದ್ದಿದೆ. ಪಂಜಾಬ್‌ನ ಯುವ ಬ್ಯಾಟರ್‌ಗಳಾದ ಅಶುತೋಶ್‌, ಶಶಾಂಕ್ ಅಬ್ಬರಿಸುತ್ತಿದ್ದರೂ ಸ್ಟಾರ್ ಆಟಗಾರರು ಕೈಕೊಡುತ್ತಿದ್ದಾರೆ. ಇದರ ಜೊತೆಗೆ ಕ್ಯಾಪ್ಟನ್ ಶಿಖರ್ ಧವನ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ಪಂಜಾಬ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದೆ ಕೊಲ್ಕೊತ್ತಾ ನೈಟ್ ರೈಡರ್ಸ್ ತಂಡ. ಕೆಕೆಆರ್ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವಿನ ಕೇಕೆ ಹಾಕಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಕೊಂಡೊಯ್ಯೋ ಚಾನ್ಸ್ ಜಾಸ್ತಿ ಮಾಡಲಿದೆ. ಕೆಕೆಆರ್ ಈ ಬಾರಿ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸುತ್ತಿದೆ. ಆದರೆ ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ. 24.75 ಕೋಟಿಗೆ ಹರಾಜಾಗಿರುವ ಸ್ಟಾರ್ಕ್ ಕೇವಲ 6 ವಿಕೆಟ್ ಪಡೆದು ವೀಕ್ ಫರ್ಫಾಮೆನ್ಸ್ ಕೊಡ್ತಿರೋದು ಕೆಕೆಆರ್ ತಲೆನೋವಿಗೆ ಕಾರಣವಾಗಿದೆ.

ಪಂಜಾಬ್ ಕಿಂಗ್ಸ್‌: ಶಿಖರ್ ಧವನ್(ನಾಯಕ), ಜಾನಿ ಬೇರ್‌ಸ್ಟೋವ್, ಪ್ರಭ್‌ಸಿಮ್ರನ್ ಸಿಂಗ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಶ್ ಶರ್ಮಾ, ಹಪ್ರೀತ್ ಬ್ರಾರ್, ಕಗಿಸೋ ರಬಾಡ, ಹರ್ಷಲ್ ಪಟೇಲ್.

ಕೋಲ್ಕತಾ ನೈಟ್ ರೈಡರ್ಸ್: ಫಿಲ್ ಸಾಲ್ಟ್(ವಿಕೆಟ್ ಕೀಪರ್), ಸುನಿಲ್ ನರೈನ್, ಅಂಗ್‌ಕೃಷ್ ರಘುವಂಶಿ, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ

Sulekha

Leave a Reply

Your email address will not be published. Required fields are marked *