ಬೆಂಗಳೂರಿಗರೇ ಇನ್ಮುಂದೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ಅಷ್ಟೇ…  ಸವಾರರ ಮೇಲೆ ITMS ಹದ್ದಿನ ಕಣ್ಣು!

ಬೆಂಗಳೂರಿಗರೇ ಇನ್ಮುಂದೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರೆ ಅಷ್ಟೇ…  ಸವಾರರ ಮೇಲೆ ITMS ಹದ್ದಿನ ಕಣ್ಣು!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಆರಂಭಿಸಿದ್ದರೂ ಸಹ ಟ್ರಾಫಿಕ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಐಟಿಎಂಎಸ್ ತಂತ್ರಜ್ಞಾನ ಅಳವಡಿಸಲಾಗಿದೆ.

ವಿದೇಶಗಳಲ್ಲಿ ಬಳಸಲ್ಪಡುವ ಹೈ ಟೆಕ್ನಾಲಜಿ ಆಧಾರಿತ ಪ್ರಕ್ರಿಯೆಗೆ ಸತತ 6 ತಿಂಗಳ ಶ್ರಮ ಹಾಗೂ 20 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾರ್ಯರೂಪಕ್ಕೆ ತರುವ ಯೋಜನೆ ಇದಾಗಿದೆ. ಕ್ಯಾಮರಾಗಳ ಜೊತೆ ಈ  ಐಟಿಎಂಎಸ್ ತಂತ್ರಜ್ಞಾನ ರೂಲ್ಸ್ ಬ್ರೇಕ್ ಮಾಡುವವರಿಗೆ ಶಾಕ್ ನೀಡಲಿದೆ.

ಇದನ್ನೂ ಓದಿ: ಶಿರಾಡಿ ಘಾಟ್‌ನಲ್ಲಿ ಹಸಿರು ಸುರಂಗ ಮಾರ್ಗ ಯೋಜನೆ ಸಾಧ್ಯವಿಲ್ಲ – ಕೇಂದ್ರ ಸಚಿವ ನಿತಿನ್ ಗಡ್ಕರಿ

ಏನಿದು ಐಟಿಎಂಎಸ್ ತಂತ್ರಜ್ಞಾನ?

ಐಟಿಎಂಎಸ್ ತಂತ್ರಜ್ಞಾನ ಎಂಬುದು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್. ಅತ್ಯಾಧುನಿಕ ಕ್ಯಾಮರಾ ಮೂಲಕ ನಿಯಮ ಉಲ್ಲಂಘಿಸುವವರ ಮೇಲೆ ಹದ್ದಿನ ಕಣ್ಣು ಇಡಲು ಸಂಚಾರಿ ಪೊಲೀಸರು ತಂದಿರುವ ಹೊಸ ಪ್ರಯತ್ನ ಇದಾಗಿದೆ.

ಐಟಿಎಂಎಸ್ ತಂತ್ರಜ್ಞಾನ ಸಂಪರ್ಕರಹಿತ ಸ್ವಯಂ ಚಾಲಿತ ಕ್ಯಾಮರವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಎಂಬ ಎರಡು ತಂತ್ರಜ್ಞಾನಗಳ ಬಳಸಿಕೊಳ್ಳುವ ಮೂಲಕ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ. ವಾಹನ ಸವಾರರ ಪ್ರತೀ ಚಲನವಲನ ರೆಕಾರ್ಡ್ ಮಾಡಲಿರುವ ಕ್ಯಾಮರಾಗಳು 24 ಗಂಟೆಯೂ ಪ್ರತೀ ರೆಕಾರ್ಡ್ ಮಾಡುತ್ತದೆ.

ತ್ರಿಬಲ್ ರೈಡಿಂಗ್, ವೇಗದ ಮಿತಿ, ರೆಡ್ ಲೈಟ್ ವೈಲೇಷನ್, ಸ್ಟಾಪ್ ಲೈನ್ ಉಲ್ಲಂಘನೆ, ಹೆಲ್ಮೆಟ್ ಇಲ್ಲದೆ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಹಾಗೂ ಸೀಟ್ ಬೆಲ್ಟ್ ಹಾಕದಿದ್ದರೆ ಕ್ಯಾಮರಾ ಅದನ್ನು ಗುರುತಿಸುತ್ತದೆ. ಈ ಕ್ಯಾಮರಾಗಳು ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿದ್ದು, ನಿಯಮ ಉಲ್ಲಂಘನೆ ಬಗ್ಗೆ ನಿಗಾ ವಹಿಸಲಿವೆ.

ಎಲ್ಲೆಲ್ಲಿ ಕ್ಯಾಮರಾ ಅಳವಡಿಕೆ

ಈಗಾಗಲೇ ಓಲ್ಡ್ ಮದ್ರಾಸ್ ರಸ್ತೆ, ಶಿವಾನಂದ ಸರ್ಕಲ್, ನವರಂಗ್, ಸಿಎಂಎಚ್ ರೋಡ್ ಹಾಗೂ ಕೊರಮಂಗಲ ಸೇರಿದಂತೆ 50 ಜಂಕ್ಷನ್​ಗಳಲ್ಲಿ 250 ಐಟಿಎಂಎಸ್ ಕ್ಯಾಮರಾ ಅಳವಡಿಸಲಾಗಿದೆ. ಈ ಕ್ಯಾಮರಾಗಳು ರೂಲ್ಸ್ ಬ್ರೇಕ್ ಮಾಡಿದ ಕೂಡಲೇ ಐದು ಸೆಕೆಂಡ್​ನ ವಿಡಿಯೋ ಜೊತೆ ನಿಯಮ ಉಲ್ಲಂಘಿಸಿದ ಸವಾರನ ಮೊಬೈಲ್​ಗೆ ಫೈನ್ ಮಾಹಿತಿ ಕಳುಹಿಸುತ್ತದೆ. ಈ ವೇಳೆ ಮೊಬೈಲ್​ನಲ್ಲಿ ಕ್ಯೂ ಆರ್ ಕೋಡ್ ಮೂಲಕ ಫೈನ್ ಕಟ್ಟಬೇಕು. ಫೈನ್ ಕಟ್ಟದಿದ್ದಲ್ಲಿ 24 ಗಂಟೆಯೊಳಗೆ ಮನೆ ಬಾಗಿಲಿಗೆ ನೋಟಿಸ್ ಸಹ ಬರಲಿದೆ. ಆಗಲೂ ಲೆಕ್ಕಿಸದಿದ್ದರೇ, ಇನ್ಸ್ಯೂರೆನ್ಸ್ ಅಥವಾ ಎಫ್​​ಸಿ ಮಾಡಿಸಲು ಹೋದಾಗ ದಂಡ ವಿಧಿಸಲಾಗುತ್ತದೆ.

suddiyaana