ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತು ಇದ್ಯಾ? – ಈಗಲೇ ತೆಗೆದು ಬಿಡಿ

ಹಿಂದೂ ಧರ್ಮದಲ್ಲಿ ದೇವರ ಕೋಣೆಗೆ ಅತ್ಯಂತ ಪವಿತ್ರ ಸ್ಛಳ. ಅದ್ದನ್ನ ಪ್ರತಿಯೊಬ್ಬರು ಶುದ್ಧವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛವಾಗಿ ಹಾಗೂ ಶಾಸ್ತ್ರೋಕ್ತ ನಿಯಮಗಳಿಗೆ ಅನುಗುಣವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ದೇವರ ಕೋಣೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ಅಶುಭವೆಂದು ನಂಬಲಾಗಿದ್ದು, ಇವುಗಳಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು, ಮಾನಸಿಕ ಅಶಾಂತಿ ಮತ್ತು ಕುಟುಂಬದ ಕಲಹಗಳು ಉಂಟಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಹಾಗಿದ್ರೆ ದೇವರ ಕೋಣೆ ಹೇಗಿರಬೇಕು ಅನ್ನೋದ್ದನ್ನ ತಿಳಿಯೋಣ.
ಒಣಗಿದ ಹೂವು ಇಡಬೇಡಿ
ದೇವರಿಗೆ ಅರ್ಪಿಸಿದ ಹೂವುಗಳು ಒಣಗಿದ ನಂತರ ಅವುಗಳನ್ನು ದೇವರ ಕೋಣೆಯಲ್ಲಿ ಇಟ್ಟುಕೊಳ್ಳಬಾರದು. ಬಾಡಿದ ಹೂವುಗಳು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಒಮ್ಮೆ ಪೂಜೆಗೆ ಬಳಸಿದ ಹೂವುಗಳನ್ನು ಮತ್ತೊಮ್ಮೆ ಬಳಸುವುದು ಸಹ ಶ್ರೇಯಸ್ಕರವಲ್ಲ ಎಂದು ನಂಬಲಾಗಿದೆ.
ಬಳಸಿದ ಬೆಂಕಿಕಡ್ಡಿಗಳು ಅಥವಾ ಖಾಲಿ ಬೆಂಕಿಪೊಟ್ಟಣ ಇಡಬೇಡಿ
ಪೂಜೆಯ ಸಮಯದಲ್ಲಿ ದೀಪ, ಧೂಪ ಮತ್ತು ಅಗರಬತ್ತಿ ಹಚ್ಚುವುದು ಸಾಮಾನ್ಯ. ಆದರೆ ಅವುಗಳನ್ನು ಹಚ್ಚಿದ ನಂತರ ಬಳಸಿದ ಬೆಂಕಿಕಡ್ಡಿಗಳು ಅಥವಾ ಖಾಲಿ ಬೆಂಕಿಪೊಟ್ಟಣವನ್ನು ದೇವರ ಕೋಣೆಯಲ್ಲೇ ಬಿಟ್ಟುಬಿಡುವುದು ಶಾಸ್ತ್ರದ ಪ್ರಕಾರ ಸೂಕ್ತವಲ್ಲ. ಪೂಜೆ ಮುಗಿದ ಬಳಿಕ ಇಂತಹ ವಸ್ತುಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಹೇಳಲಾಗಿದೆ.
ಮುರಿದ ದೇವರ ವಿಗ್ರಹ
ದೇವರ ಕೋಣೆಯಲ್ಲಿ ಮುರಿದ, ಬಿರುಕು ಬಿದ್ದ ಅಥವಾ ಹಾನಿಗೊಳಗಾದ ದೇವರ ವಿಗ್ರಹಗಳನ್ನು ಇಡುವುದನ್ನು ತಪ್ಪಿಸಬೇಕು. ಇಂತಹ ವಿಗ್ರಹಗಳು ಮನೆಯ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯಾಗಬಹುದು ಎಂಬ ನಂಬಿಕೆ ಇದೆ. ಆದ್ದರಿಂದ ಅವುಗಳನ್ನು ವಿಧಿ ವಿಧಾನಗಳೊಂದಿಗೆ ವಿಸರ್ಜಿಸುವುದು ಉತ್ತಮ.
ಶಾಸ್ತ್ರಗಳ ಪ್ರಕಾರ ದೇವರ ಕೋಣೆ ಸ್ವಚ್ಛವಾಗಿದ್ದರೆ ಮನೆಯಲ್ಲಿ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ನಿಯಮಿತವಾಗಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸುವುದು, ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು ಮತ್ತು ಭಕ್ತಿಭಾವದಿಂದ ಪೂಜೆ ಸಲ್ಲಿಸುವುದು ಕುಟುಂಬದ ನೆಮ್ಮದಿ ಹಾಗೂ ಸಂತೋಷಕ್ಕೆ ಸಹಕಾರಿ ಎಂದು ನಂಬಲಾಗಿದೆ.

ನೋಡಿರಿ

