ಈ ನಗರದಲ್ಲಿ ನೀವು ಮನೆ ಖರೀದಿಸಿದರೆ ಸಿಗಲಿದೆ 24 ಲಕ್ಷ ರೂ!

ಈ ನಗರದಲ್ಲಿ ನೀವು ಮನೆ ಖರೀದಿಸಿದರೆ ಸಿಗಲಿದೆ 24 ಲಕ್ಷ ರೂ!

ರೋಮ್‌: ಸ್ವಂತ ಮನೆ ಖರೀದಿಸಬೇಕೆಂದರೆ ಕಷ್ಟಪಟ್ಟು ದುಡಿದು, ಉಳಿತಾಯ ಮಾಡಿ, ಬ್ಯಾಂಕ್‌ ಸಾಲ ಮಾಡಿ ಮನೆ ಖರೀದಿಸುತ್ತಾರೆ. ಆದರೆ, ಈ ಊರಲ್ಲಿ ಮನೆ ಖರೀದಿಸುವುದಿದ್ದರೆ, ಅಲ್ಲಿನ ಆಡಳಿತವೇ ನಿಮಗೆ ದುಡ್ಡು ಕೊಡುತ್ತದೆ.

ಇದನ್ನೂ ಓದಿ:ಮಾನವ ಮೊದಲು ಬೆಂಕಿ ಬಳಸಿದ್ದು ಯಾವಾಗ ಅಂತಾ ತೋರಿಸಿಕೊಟ್ಟಿದ್ದು ಮೀನಿನ ಪಳೆಯುಳಿಕೆ..! 

ಹೌದು, ಇಟಲಿಯ ಪ್ರಸಿಚೆ ನಗರದಲ್ಲಿ ಮನೆ ಖರೀದಿಸಿ ವಾಸ ಮಾಡುವವರಿಗೆ ಸ್ಥಳೀಯಾಡಳಿತ ಬರೋಬ್ಬರಿ 30 ಸಾವಿರ ಡಾಲರ್‌ ಅಂದರೆ, 24,52,515 ರೂ.ಗಳನ್ನು ನೀಡುತ್ತದೆ. ಆದರೆ, ಈ ಮನೆಯನ್ನು ಖರೀದಿಸಲು ಒಂದೇ ಒಂದು ಷರತ್ತು ಇದೆ. ನೀವು ಖರೀದಿಸುವ ಮನೆ 1991ಕ್ಕೂ ಮುನ್ನ ನಿರ್ಮಾಣಗೊಂಡಿರಬೇಕು ಮತ್ತು ಅದನ್ನು ಖರೀದಿಸಿದ ಮೇಲೆ ನೀವು ಅಲ್ಲೇ ವಾಸ ಮಾಡಬೇಕು ಎಂದು ಸ್ಥಳೀಯಾಡಳಿತ ನಿಯಮ ಜಾರಿಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಊರಿನ ಜನಸಂಖ್ಯೆ ಗಣನೀಯವಾಗಿ ತಗ್ಗಿದೆ. ಜನರು ತಮ್ಮ ಮನೆ-ಮಠಗಳನ್ನು ಬಿಟ್ಟು ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಈ ಪಟ್ಟಣದಲ್ಲಿ ಬರೀ  ಖಾಲಿ ಮನೆಗಳೇ ಕೂಡಿದೆ. ಅದಕ್ಕಾಗಿ ಜನಸಂಖ್ಯೆ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಇಲ್ಲಿನ ಆಡಳಿತ ಮನೆ ಕೊಂಡವರಿಗೆ ತಾವೇ ಹಣಕಾಸು ಉತ್ತೇಜನ ನೀಡುವುದಾಗಿ ಘೋಷಿಸಿದ್ದಾರೆ.

suddiyaana