ಬ್ಯುಸಿನೆಸ್ ಕ್ಲಾಸ್ ಸೀಟ್​ಗಾಗಿ ಪಟ್ಟು – ವಿಮಾನದೊಳಗೆ ನಗ್ನಳಾಗಿ ಓಡಾಡಿದ ಮಹಿಳೆ..!

ಬ್ಯುಸಿನೆಸ್ ಕ್ಲಾಸ್ ಸೀಟ್​ಗಾಗಿ ಪಟ್ಟು – ವಿಮಾನದೊಳಗೆ ನಗ್ನಳಾಗಿ ಓಡಾಡಿದ ಮಹಿಳೆ..!

ವಿಮಾನದಲ್ಲಿ ಕುಡಿದು ರಂಪಾಟ ಮಾಡೋದು. ಹಲ್ಲೆ ಮಾಡೋದು. ಅಸಭ್ಯವಾಗಿ ವರ್ತಿಸೋದು ಇತ್ತೀಚೆಗೆ ಕಾಮನ್ ಅನ್ನುವಂತಾಗಿದೆ. ಆದ್ರೆ ಈ ಮಹಿಳೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅರೆನಗ್ನಳಾಗಿ ಓಡಾಡಿದ್ದಾಳೆ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ಗೆ ಜೀವ ಬೆದರಿಕೆ – ಆರೋಪಿ ಲಾಕ್.. ಪೊಲೀಸರು ಶಾಕ್..!

ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಬ್ಯುಸಿನೆಸ್ ಕ್ಲಾಸ್ ಸೀಟು ಬೇಕೆಂದು ಪಟ್ಟು ಹಿಡಿದ ಮಹಿಳೆ ವಿಮಾನದಲ್ಲಿ ರಂಪಾಟ ಮಾಡಿದ್ದಾಳೆ. ಮಹಿಳೆಯನ್ನ ತಡೆಯಲು ಯತ್ನಿಸಿದ ವಿಮಾನ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾಳೆ. ಕೊನೆಗೆ ಅರೆನಗ್ನಳಾಗಿ ಹುಚ್ಚಾಟ ಮೆರೆದಿದ್ದಾಳೆ. ಏರ್ ವಿಸ್ತಾರದ ಯುಕೆ 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಇಟಾಲಿಯನ್ ಮೂಲದ 45 ವರ್ಷದ ಪಾವೊಲಾ ಪೆರಿಚಿಯೋ ಅನ್ನೋ ಮಹಿಳೆ ಹೀಗೆ ಅಸಭ್ಯವಾಗಿ ವರ್ತಿಸಿದ್ದಾಳೆ.

ಸೀಟ್ ವಿಚಾರವಾಗಿ ಕಿರಿಕ್ ತೆಗೆದ ಮಹಿಳೆ ಬ್ಯುಸಿನೆಸ್ ಕ್ಲಾಸ್ ಸೀಟ್ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಈ ವೇಳೆ ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡಿರುವುದರಿಂದ ಬ್ಯುಸಿನೆಸ್ ಕ್ಲಾಸ್ ಸೀಟ್ ಕೊಡಲು ಸಾಧ್ಯವಿಲ್ಲ ಎಂದು ಕ್ಯಾಬಿನ್ ಸಿಬ್ಬಂದಿ ಹೇಳಿದ್ದಾರೆ. ಇಷ್ಟಕ್ಕೇ ಸಿಟ್ಟಾದ ಮಹಿಳೆ ಕ್ಯಾಬಿನ್ ಸಿಬ್ಬಂದಿಗೆ ಗುದ್ದಿದ್ದು ಮತ್ತೊಬ್ಬನ ಮೇಲೆ ಉಗುಳಿದ್ದಾಳೆ. ಹಾಗೇ ವಿಮಾನದಲ್ಲಿ ತನ್ನ ಉಡುಪುಗಳನ್ನ ಕಿತ್ತೆಸೆದು ಬಹುತೇಕ ಬೆತ್ತಲೆಯಾಗಿ ಓಡಾಡಿದ್ದಾಳೆ. ಸಿಬ್ಬಂದಿಯ ಪ್ರಕಾರ ಮಹಿಳೆ ಮದ್ಯಸೇವನೆ ಮಾಡಿದ್ದಳು ಎನ್ನಲಾಗಿದೆ. ಮಹಿಳೆ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯನ್ನ ಬಂಧಿಸಿದ್ದರು. ಬಳಿಕ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

ವಿಮಾನ ಪ್ರಯಾಣದ ವೇಳೆ ಇತ್ತೀಚೆಗೆ ಇಂಥಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಏರ್ ಇಂಡಿಯಾ ವಿಮಾನದಲ್ಲಿ ಅತಿಯಾಗಿ ಮದ್ಯಸೇವನೆ ಮಾಡಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಈ ವಿಮಾನ ಸಂಸ್ಥೆಯು ಮದ್ಯಸೇವನೆ ನಿಯಮಗಳಲ್ಲಿ ಬದಲಾವಣೆ ತಂದಿದೆ.

 

suddiyaana