ಲ್ಯಾಂಬೋರ್ಗಿನಿ ಕಾರಿನಲ್ಲಿ ಕಿಡ್ನಿ ರವಾನಿಸಿದ ಪೊಲೀಸರು  

ಲ್ಯಾಂಬೋರ್ಗಿನಿ ಕಾರಿನಲ್ಲಿ ಕಿಡ್ನಿ ರವಾನಿಸಿದ ಪೊಲೀಸರು  

ರೋಗಿಗಳಿಗೆ ತುರ್ತು ಚಿಕಿತ್ಸೆ ಬೇಕಾದ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಲ್ಲದೇ ಅಂಗಾಗ, ರಕ್ತ ರವಾನಿಸಲು ಹೆಲಿಕಾಫ್ಟರ್ ಅಥವಾ ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಆದರೆ ಇಟಲಿಯಲ್ಲಿ ಕಿಡ್ನಿ ರವಾನಿಸಲು ಪೊಲೀಸರು ದುಬಾರಿ ಕಾರನ್ನು ಬಳಸಿದ್ದು ವೈರಲ್ ಆಗುತ್ತಿದೆ.

ಇದನ್ನೂ ಓದಿ:ಅಮೆಜಾನ್ ನಲ್ಲಿ ಬುಕ್ ಮಾಡಿದ್ದು ಮ್ಯಾಕ್​ಬುಕ್ ಪ್ರೊ – ಗ್ರಾಹಕನ ಕೈ ಸೇರಿದ್ದು ಪೆಡಿಗ್ರಿ!

ಮಂಗಳವಾರ (ಡಿ.20.) ಎರಡು ಕಿಡ್ನಿಗಳನ್ನು ಇಟಲಿಯ ಈಶಾನ್ಯದಲ್ಲಿರುವ ಪಡುವಾ, ಮೊಡೆನಾದಿಂದ ನೂರಾರು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಪೊಲೀಸರು ಲ್ಯಾಂಬೋರ್ಗಿನಿ ಹುರಾಕನ್ ಕಾರಿನ ಮೂಲಕ ರವಾನಿಸಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

2017 ರಲ್ಲಿ ಲ್ಯಾಂಬೋರ್ಗಿನಿ ಹುರಾಕನ್ ಅನ್ನು ಕಾರು ತಯಾರಕರು ಉಡುಗೊರೆಯಾಗಿ ನೀಡಿದ್ದರು. ಈ ಕಾರು 300kmh ಗರಿಷ್ಠ ವೇಗ ಮತ್ತು 0-100kmh ನಿಂದ 3.2 ಸೆಕೆಂಡುಗಳಲ್ಲಿ ಹೋಗುವ ಸಾಮರ್ಥ್ಯ ಹೊಂದಿದೆ.

ಈ ಕಾರನ್ನು ಉತ್ತರ ಇಟಲಿಯ ಬೊಲೊಗ್ನಾದಲ್ಲಿ ಹೆದ್ದಾರಿ ಗಸ್ತಿಗೆ, ಸಾಮಾನ್ಯ ಪೊಲೀಸ್ ಕಾರ್ಯಾಚರಣೆಗೆ ಬಳಸಲಾಗುತ್ತಿತ್ತು. ಅಲ್ಲದೇ ತುರ್ತು ಸಂದರ್ಭಗಳಲ್ಲಿ ರಕ್ತ ಅಥವಾ ಅಂಗಾಗ ರವಾನೆ ಮಾಡಲು ಉಪಯೋಗಿಸಲಾಗುತ್ತದೆ.

suddiyaana