ಇರಾನ್‌ ಅಧ್ಯಕ್ಷ ಸಾವು ಪ್ರಕರಣ – ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ಇಸ್ರೇಲ್‌ ಸ್ಪಷ್ಟನೆ

ಇರಾನ್‌ ಅಧ್ಯಕ್ಷ ಸಾವು ಪ್ರಕರಣ – ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ಇಸ್ರೇಲ್‌ ಸ್ಪಷ್ಟನೆ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್‌ ಪತನಗೊಂಡು ಸಾವನ್ನಪ್ಪಿದ್ದಾರೆ. ಈ ಅವಘಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ರೈಸಿ ಅವರ ಸಾವಿನಲ್ಲಿ ನಮ್ಮ ದೇಶ ಭಾಗಿಯಾಗಿಲ್ಲ ಎಂದು ಇಸ್ರೇಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ – ಪಾಸ್‌ಪೋರ್ಟ್‌ ರದ್ದಾಗುತ್ತಾ?

ಹೌದು, ಭಾನುವಾರ ಇರಾನ್‌ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದ್ದು, ಇಬ್ರಾಹಿಂ ರೈಸಿ ದುರಂತ ಅಂತ್ಯ ಕಂಡಿದ್ದಾರೆ. ಈ ದುರಂತಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಈ ಅವಘಡಕ್ಕೆ ಇಸ್ರೇಲ್‌ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಈ ಅವಘಡದಲ್ಲಿ ದೇಶ ಭಾಗಿಯಾಗಿರುವ ಕುರಿತು ಬರುತ್ತಿರುವ ಆರೋಪಗಳನ್ನು ಇಸ್ರೇಲಿ ಅಧಿಕಾರಿ ನಿರಾಕರಿಸಿದ್ದಾರೆ. ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ಇಸ್ರೇಲ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಇಸ್ರೇಲ್‌ ಮೇಲೆ ಆರೋಪ ಹೊರಿಸುತ್ತಿರುವುದು ಯಾಕೆ?

ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಪ್ರಾಕ್ಸಿ ಗುಂಪುಗಳನ್ನು ಒಳಗೊಂಡ ದಾಳಿಗಳು ಮತ್ತು ಸಂಘರ್ಷಗಳು ಹುಟ್ಟಿಕೊಂಡವು. ಇದು ಗಾಜಾದಲ್ಲಿ ರಕ್ತಪಾತಕ್ಕೆ ಕಾರಣವಾಯಿತು. ಇದರಿಂದಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಮ್ಮೆ ಸೇಡಿನ ಕಿಡಿ ಹೊತ್ತಿಕೊಂಡಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೀಗಾಗಿ ಇಬ್ರಾಹಿಂ ರೈಸಿ ಸೇರಿದಂತೆ ಇರಾನ್ ವಿದೇಶಾಂಗ ಸಚಿವರು ಹಾಗೂ ಅಧಿಕಾರಿಗಳ ಸಾವಿಗೆ ಇಸ್ರೇಲ್ ಕಾರಣ ಎಂಬ ಆರೋಪ ಕೇಳಿಬಂದಿದೆ.

Shwetha M