ಆದಾಯ ತೆರಿಗೆ ಸಲ್ಲಿಕೆಗೆ ಡಿ. 31 ಕೊನೆ ದಿನ – ಐಟಿ ಫೈಲ್ ಮಾಡದಿದ್ರೆ ಬೀಳುತ್ತೆ ಭಾರಿ ದಂಡ!
2022-23ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಇನ್ನು ಹೆಚ್ಚು ಸಮಯ ಉಳಿದಿಲ್ಲ. ಇನ್ನೂ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. 2023ರ ಡಿಸೆಂಬರ್ 31 ಒಳಗೆ ಆದಾಯ ತೆರಿಗೆ ರಿಟರ್ನ್ ಮಾಡಲು ಡೆಡ್‌ಲೈನ್ ನೀಡಲಾಗಿದೆ. ಈ ಅಂತಿಮ ವಾಯಿದೆಯೊಳಗೆ ಐಟಿಆರ್ ಸಲ್ಲಿಸದೇ ಹೋದರೆ ಹೆಚ್ಚಿನ ಮೊತ್ತದ ದಂಡ, ಶುಲ್ಕ, ಬಡ್ಡಿ ಇತ್ಯಾದಿಗಳನ್ನು ತೆರಬೇಕಾಗುತ್ತದೆ.
ಇದನ್ನೂ ಓದಿ: ಯುವನಿಧಿ ಯೋಜನೆಗೆ ಜಾರಿಗೆ ಮುಹೂರ್ತ ಫಿಕ್ಸ್! – ಯಾವ ತಿಂಗಳಿನಿಂದ ನಿಮ್ಮ ಅಕೌಂಟ್ ಗೆ ಹಣ ಗೊತ್ತಾ?
2022 -23 ನೇ ಸಾಲಿನ ಐಟಿ ರಿಟರ್ನ್ ಫೈಲ್ ಮಾಡಲು ಜುಲೈ 31ಕ್ಕೆ ಡೆಡ್‌ಲೈನ್ ನೀಡಲಾಗಿತ್ತು. ಬಳಿಕ ಡಿಸೆಂಬರ್ 31ರವರೆಗೂ ರಿಟರ್ನ್ ಫೈಲ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಡೆಡ್‌ಲೈನ್ ಮುಗಿಯುವುದರೊಳಗೆ ಆದಾಯ ತೆರಿಗೆ ಪಾವತಿಸದಿದ್ದರೆ ಭಾರಿ ದಂಡ ಕಟ್ಟಬೇಕಾಗುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಎಫ್ ಪ್ರಕಾರ ಅಂತಿಮ ವಾಯಿದೆಯೊಳಗೆ ರಿಟರ್ನ್ಸ್ ಫೈಲ್ ಮಾಡದೇ ಹೋದರೆ ಲೇಟ್ ಫೈಲಿಂಗ್ ಶುಲ್ಕ ಪಾವತಿಸಬೇಕು. ಹಾಗೆಯೇ, 5,000 ರೂನಷ್ಟು ದಂಡ ತೆರಬೇಕಾಗುತ್ತದೆ. ಐದು ಲಕ್ಷ ರೂ ಒಳಗೆ ವಾರ್ಷಿಕ ಆದಾಯ ಹೊಂದಿರುವವರಿಗಾದರೆ ದಂಡದ ಮೊತ್ತ 1,000 ರೂ ಇರುತ್ತದೆ. ಉಳಿದವರು ಐದು ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ.
ಇನ್ನು ಡಿಸೆಂಬರ್ 31ರೊಳಗೆ ಐಟಿ ರಿಟರ್ನ್ಸ್ ಫೈಲ್ ಮಾಡದೇ ಇರುವವರಿಗೆ ಐಟಿ ಕಾಯ್ದೆ ಸೆಕ್ಷನ್ 234ಎ ಅಡಿಯಲ್ಲಿ ಬಡ್ಡಿ ಕಟ್ಟಬೇಕಾಗುತ್ತದೆ. ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿರುವ ಹಣಕ್ಕೆ ಪ್ರತೀ ತಿಂಗಳು ಶೇ. 1ರ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
ಇನ್ನೊಂದು ಮುಖ್ಯ ಸಂಗತಿ ಎಂದರೆ, ಐಟಿಆರ್ ಫೈಲ್ ಮಾಡದೇ ಹೋದರೆ ಈಗಿನ ಪ್ರಸಕ್ತ ಅಸೆಸ್ಮೆಂಟ್ ವರ್ಷದ ನಷ್ಟವನ್ನು ಮುಂದಿನ ವರ್ಷದಕ್ಕೆ ವರ್ಗಾಯಿಸಲು ಆಗುವುದಿಲ್ಲ. ತೆರಿಗೆ ಮೊತ್ತದ ಶೇ. 50ರಿಂದ ಶೇ. 200ರವರೆಗಿನ ಹಣವನ್ನು ದಂಡವಾಗಿ ಹೇರಬಹುದು.