ಈ ವಾರ ಶಾಸ್ತ್ರಿ ಹೊರ ಹೋಗೋದು ಗ್ಯಾರಂಟಿ – ಕಿರಣ್ ಈ ಮಟ್ಟಕ್ಕೆ ಇಳಿಯಬಾರದಿತ್ತು..!

ಬಿಗ್ಬಾಸ್ ಮನೆಯಲ್ಲಿ ಲೆಟರ್ ಟಾಸ್ಕ್ ನಡೆಯುತ್ತಿದೆ. ಮನೆಯವರು ಬರೆದು ಕಳಿಸಿದ ಪತ್ರ ಓದಲು ಸ್ಪರ್ಧಿಗಳು ಕಾಯುತ್ತಿದ್ದಾರೆ. ಆದರೆ, ಪತ್ರ ಪಡೆಯುವುದು ಅಷ್ಟೊಂದು ಸುಲಭವಲ್ಲ. ಬಿಗ್ಬಾಸ್ ಹೇಳಿದ ಟಾಸ್ಕ್ ಕಂಪ್ಲೀಟ್ ಆಗಬೇಕು. ಆದರೆ, ಇಲ್ಲೂ ಕೂಡಾ ಸ್ಪರ್ಧಿಗಳ ಸ್ವಾರ್ಥ ಆಟ ಕೆಡಿಸಿದೆ.
ಇದನ್ನೂ ಓದಿ:ಸೋನಿಕಾಗೆ 10, ಧನುಷ್ಗೆ 9ನೇ ಸ್ಥಾನ ಕೊಟ್ಟು ಕೆಟ್ರಾ ಜಗದೀಶ್ – ಸೌಂದರ್ಯ, ಪ್ರಶಾಂತ್ ಕಿಡಿಕಿಡಿ
ಬಿಗ್ ಬಾಸ್ ಮನೆಯಲ್ಲಿ ಲೆಟರ್ ಟಾಸ್ಕ್ ನಡೆಯುತ್ತಿದೆ. ಇದೇ ವೇಳೆ ಬಿಗ್ಬಾಸ್ ನೀಡಿದ ಟಾಸ್ಕ್ ಮನೆಮಂದಿಯ ಮನದಲ್ಲಿ ಕೋಲಾಹಲ ಎಬ್ಬಿಸಿದೆ. ಈ ವಾರ ಕ್ಯಾಪ್ಟನ್ ಜಗದೀಶ್ ಅವರು ಎಲ್ಲಾ ಸ್ಪರ್ಧಿಗಳಿಗೆ ರ್ಯಾಂಕಿಂಗ್ ಕೊಟ್ಟಿದ್ದರು. ಇದರ ಅನುಸಾರ ಸ್ಪರ್ಧಿಗಳು ನಿಲ್ಲಬೇಕು. ಒಂದು ಬಾಲ್ ಅನ್ನು ಅಡೆತಡೆಗಳ ನಡುವೆ ಸ್ಪರ್ಧಿಗಳು ಸಾಗಿಸುತ್ತಾ ಬರಬೇಕು. ಬಾಲ್ ಅಂತಿಮ ಸ್ಥಾನಕ್ಕೆ ತಲುಪಿದರೆ ಜಗದೀಶ್ ಅವರಿಗೆ ಮನೆಯ ಪತ್ರ ದೊರೆಯುತ್ತಾ ಇತ್ತು. ಮೊದಲ ಎರಡು ಸ್ಥಾನದಲ್ಲಿ ಇದ್ದ ಗಾನವಿ ಹಾಗೂ ಸೌಂದರ್ಯಾ ಶೆಟ್ಟಿ ಈ ಬಾಲ್ನ 5 ನಿಮಿಷದಲ್ಲಿ ಹಸ್ತಾಂತರ ಮಾಡಿದರು. ನಂತರ ಕಿರಣ್ ಶಾಸ್ತ್ರಿ ಅವರು ಈ ಬಾಲ್ನ ಪಾಸ್ ಮಾಡಲು ರೆಡಿ ಇರಲೇ ಇಲ್ಲ. ಅವರು ಉದ್ದೇಶಪೂರ್ವಕವಾಗಿ ಬಾಲ್ನ ಕೆಳಕ್ಕೆ ಬೀಳಿಸುತ್ತಾ ಇದ್ದಿದ್ದು ಕಂಡುಬಂತು. ಇದರ ಪರಿಣಾಮ ಜಗದೀಶ್ ಅವರಿಗೆ ಮನೆಯಿಂದ ಮಗಳು ಬರೆದ ಪತ್ರ ಸಿಗಲಿಲ್ಲ. ಜೊತೆಗೆ ತಾಂಡವ್ ಅವರಿಗೆ ಬಂದಿದ್ದ ಪತ್ರ ಕೂಡಾ ತಾಂಡವ್ ಕೈ ಸೇರಲೇ ಇಲ್ಲ.
ಈ ಆಟದಲ್ಲಿ ಹೀನ ಮಟ್ಟಕ್ಕೆ ಇಳಿದ ಕಿರಣ್ ಶಾಸ್ತ್ರಿ ವಿರುದ್ಧ ಮನೆಮಂದಿ ತಿರುಗಿಬಿದ್ದರು. ಮೊದಲು ತನ್ನನ್ನು ಸಮರ್ಥಿಸಿಕೊಂಡ ಕಿರಣ್ ಶಾಸ್ತ್ರಿ ನಂತರ ಬೇಕಂತಾನೇ ಆಟ ಹಾಳು ಮಾಡಿದ್ದು ಅನ್ನೋ ಸತ್ಯ ಒಪ್ಪಿಕೊಂಡರು. ನಾಮಿನೇಷನ್ ಸೇಡಿಗೆ ಕಿರಣ್ ಶಾಸ್ತ್ರಿ ಈ ರೀತಿ ಕೀಳುಮಟ್ಟದ ಆಟವಾಡಿದರು. ಇದರಿಂದಾಗಿ ಕಿರಣ್ ಶಾಸ್ತ್ರಿ ಈ ವಾರ ಮನೆಯಿಂದ ಹೊರಗೆ ಹೋಗಬಹುದು. ಇಲ್ಲವೇ ಮನೆಮಂದಿಯ ದೃಷ್ಟಿಯಲ್ಲಿ ಕಳಪೆಗೆ ಆಯ್ಕೆ ಆಗಬಹುದು.
ಇನ್ನು ಬಿಗ್ಬಾಸ್ ಜಗದೀಶ್ ಅವರಿಗೆ ಮನೆಯಿಂದ ಬಂದ ಪತ್ರ ಓದಲು ಮತ್ತೊಂದು ಅವಕಾಶ ಕೊಟ್ಟಿದೆ. ಮೊದಲು ನಡೆದ ಟಾಸ್ಕ್ನಲ್ಲಿ ನಿರಾಸೆ ಅನುಭವಿಸಿದ್ದ ಕ್ಯಾಪ್ಟನ್ ಜಗದೀಶ್ಗೆ ಮತ್ತೊಂದು ಅವಕಾಶ ನೀಡಿದೆ. ಜಗದೀಶ್ ಮತ್ತು ಸೋನಿಕಾ ಅವರ ಲೆಟರ್ ಪಡೆಯಲು ಮನೆಯ ಇತರ ಸದಸ್ಯರು ಈ ಟಾಸ್ಕ್ ಅಲ್ಲಿ ಭಾಗಿಯಾಗಿದ್ದಾರೆ. ಈ ಟಾಸ್ಕ್ನಲ್ಲಿ ಸ್ಪರ್ಧಿಗಳು ಕಣ್ಣಿಗೆ ಪಟ್ಟಿ ಧರಿಸಿ, ಹಗ್ಗಗಳ ಸಹಾಯದಿಂದ ಬೋರ್ಡ್ ಮೇಲಿರುವ ಚೆಂಡನ್ನು ರಂಧ್ರಗಳಿಗೆ ಬೀಳದಂತೆ ಕಾಪಾಡುತ್ತಾ ಅಂತಿಮ ಸ್ಥಾನ ತಲುಪಿಸಬೇಕಿದೆ. ಕಣ್ಣಿಗೆ ಪಟ್ಟಿ ಧರಿಸಿದ ಸ್ಪರ್ಧಿಗಳಿಗೆ ಉಳಿದ ಸದಸ್ಯರು ಮಾರ್ಗದರ್ಶನ ನೀಡಬೇಕು. ಈ ಟಾಸ್ಕ್ ಗೆದ್ದರೆ ಜಗದೀಶ್ ಮುದ್ದಿನ ಮಗಳ ಪತ್ರ ಓದಬಹುದು.

ನೋಡಿರಿ

