ಸಲಾರ್‌ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?

ಸಲಾರ್‌ 2 ಸೆಟ್ಟೇರುವುದು ಅನುಮಾನ! – ಚಿತ್ರ ನಿಲ್ಲಲು ಇದೇ ಕಾರಣ ಆಯ್ತಾ?

ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಈ ಸಿನಿಮಾ ಪ್ರಭಾಸ್‌ಗೆ ಭಾರಿ ಸಕ್ಸಸ್‌ ತಂದುಕೊಟ್ಟಿತ್ತು. ಪ್ರಭಾಸ್‌ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ  600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ ಮಾಡಿತ್ತು. ಪ್ರಭಾಸ್‌ ಅಭಿಮಾನಿಗಳು ಸಲಾರ್‌ 2 ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದರು. ಇದೀಗ ಪ್ರಭಾಸ್‌ ಅಭಿಮಾನಿಗಳಿಗೆ ಬೇಸರದ ಸಂಗತಿ ಇದೆ. ಸದ್ಯಕ್ಕೆ ‘ಸಲಾರ್ 2’ ಸಿನಿಮಾ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಬ್ಬಬ್ಬಾ.. ಇದೆಂಥಾ ಹುಚ್ಚು ಅಭಿಮಾನ – ಮಕ್ಕಳ ಸ್ಕೂಲ್ ಫೀಸ್ ಹಣದಲ್ಲಿ ಐಪಿಎಲ್ ಟಿಕೆಟ್ ಖರೀದಿಸಿದ್ದ ಧೋನಿ ಫ್ಯಾನ್!

ಹೌದು, ಸಲಾರ್‌ ಸಿನಿಮಾ ತೆರೆಕಂಡ ಮೇಲೆ ಸಿನಿ ಪ್ರೇಕ್ಷಕರು ಸಲಾರ್‌ 2 ಯಾವಾಗ ಬರುತ್ತೆ ಅಂತಾ ಕೇಳ್ತಾ ಇದ್ದರು. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿದ್ದವು. ಇದೇ ಏಪ್ರಿಲ್ ಕೊನೆಯ ವಾರದಿಂದ ಸಲಾರ್ 2 ಚಿತ್ರದ ಶೂಟಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಸಲಾರ್ ಅನುಮಾನ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಪ್ರಭಾಸ್‌ ಈಗಾಗಲೇ ಕೆಲವೊಂದು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಾಗಿದೆ. ಸದ್ಯ ಕಲ್ಕಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಲ್ಕಿ ಮುಗಿಯುತ್ತಿದ್ದಂತೆಯೇ ‘ದಿ ರಾಜ ಸಾಬ್’ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇದರ ನಂತರ ಸ್ಪಿರಿಟ್ ಚಿತ್ರಕ್ಕೆ ಅವರು ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಸಿನಿಮಾ ಮುಗಿಯೋಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಪ್ರಭಾಸ್‌ ಬ್ಯೂಸಿ ಇರುವ ಕಾರಣ  ಸದ್ಯಕ್ಕೆ ಸಲಾರ್ 2 ಸೆಟ್ಟೇರುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಈ ಹಿಂದೆ ನಿರ್ಮಾಪಕ ವಿಜಯ ಕಿರಗಂದೂರು ಸಲಾರ್‌ 2 ಸಿನಿಮಾದ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆಯಂತೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದರು.

Shwetha M