ಇರಾನ್‌ – ಇಸ್ರೇಲ್‌ ಯುದ್ದ ನಿಲ್ಲುವವರೆಗೆ ವಿದೇಶದಿಂದ ಎಲ್ಲರನ್ನು ಕರೆಸುವುದು ಕಷ್ಟ!

ಇರಾನ್‌ – ಇಸ್ರೇಲ್‌ ಯುದ್ದ ನಿಲ್ಲುವವರೆಗೆ ವಿದೇಶದಿಂದ ಎಲ್ಲರನ್ನು ಕರೆಸುವುದು ಕಷ್ಟ!

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ ಕ್ಷಣ ಕ್ಷಣಕ್ಕೂ ತೀವ್ರತೆ ಪಡೆದುಕೊಳ್ತಿದೆ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಅವರನ್ನ ಕರೆತರಲು ಭಾರತ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಇದೀಗ ಈ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್‌ಗೆ ಶಾಕ್‌ ಕೊಟ್ಟ ವಿರೋಶ್‌ ಜೋಡಿ! – ರಶ್ಮಿಕಾ, ವಿಜಯ್ ಆರತಕ್ಷತೆಗೆ ಆಹ್ವಾನಿತರಿಗೆ ಮಾತ್ರ ಪ್ರವೇಶ!

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಕೆ, ಅಮೆರಿಕಾ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧ ಸಂಪೂರ್ಣವಾಗಿ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನ ಕರೆಸುವುದು ಕಷ್ಟ. ವಿಮಾನ ಹಾರಾಟ ಆರಂಭವಾದರೆ ಮಾತ್ರ ಎಲ್ಲರೂ ಬಹುಬೇಗ ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದಿರುಗುತ್ತಾರೆ. ವಿಮಾನ ಸಂಪೂರ್ಣವಾಗಿ ಬಂದ್ ಆಗಿರುವ ಕಾರಣ ಭಾರತೀಯರನ್ನು ಕರೆ ತರಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ದುಬೈನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಸಾಧ್ಯವಾದಷ್ಟು ಕನ್ನಡಿಗರ ಸಹಾಯಕ್ಕೆ ಬಂದಿದ್ದಾರೆ ಎಂದು ತಿಳಿಸಿದ ಕುಮಾರಸ್ವಾಮಿ, ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರವು ಕೂಡ ಎಲ್ಲಾ ಭಾರತೀಯರ ಸುರಕ್ಷತೆಯಿಂದ ವಾಪಾಸ್ಸು ಕರೆತರಲು ಹೆಚ್ಚಿನ ಒತ್ತು ನೀಡಿದೆ ಎಂದು ವಿವರಿಸಿದರು.

ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ಮಾತುಕತೆ ನಡೆಸುತ್ತಿದೆ ಪರಿಸ್ಥಿತಿಯನ್ನು ಅವಲೋಕಿಸಿ, ದುಬೈನಲ್ಲಿರು ಕನ್ನಡಿಗರನ್ನು ಕೂಡಲೇ ವಾಪಾಸ್ಸು ಕರೆತರಲಾಗುವುದು ಎಂದು ಸಚಿವ ಎಚ್.ಡಿ ಕುಮಾರಸ್ವಾಮಿ ವಿವರಿಸಿದರು.

Shwetha M