ಈರುಳ್ಳಿಯನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಡುವುದು ಡೇಂಜರ್ – ಕಟ್ ಮಾಡಿ ಇಟ್ಟರೆ ಬ್ಯಾಕ್ಟೀರಿಯಾ ಉಂಟಾಗಿ ಕಾಡುತ್ತೆ ಅನಾರೋಗ್ಯ
ಈಗಂತೂ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇದ್ದೇ ಇರುತ್ತೆ. ಉಳಿದ ಆಹಾರದಿಂದ ಹಿಡಿದು ತರಕಾರಿ, ಹಾಲು, ಮೊಸರು ಹೀಗೆ ಎಲ್ಲವನ್ನೂ ಫ್ರಿಡ್ಜ್ ನಲ್ಲೇ ಸ್ಟೋರ್ ಮಾಡ್ತಾರೆ. ಆದರೆ ಕತ್ತರಿಸಿದ ಈರುಳ್ಳಿಯನ್ನ ಇಡೋದು ತುಂಬಾನೇ ಅಪಾಯಕಾರಿ.
ಇದನ್ನೂ ಓದಿ : ಪ್ರಕೃತಿ ಮಡಿಲಲ್ಲಿ ಇದೆಂಥಾ ವಿಸ್ಮಯ! – ಆಗಸದಲ್ಲಿ ನಡೆಯಿತು ಬಣ್ಣದ ಬೆಳಕಿನ ಚಮತ್ಕಾರ!
ಕೆಲವರು ಬೆಳಗ್ಗೆ ಹೊತ್ತು ತಿಂಡಿ ಮಾಡಲು ಅನುಕೂಲ ಆಗಲಿ ಅಂತಾ ಹಿಂದಿನ ದಿನದ ರಾತ್ರಿಯೇ ತರಕಾರಿಯನ್ನ ಕಟ್ ಮಾಡಿ ಇಟ್ಟು ಕೊಳ್ತಾರೆ. ಆದ್ರೆ ಈರುಳ್ಳಿಯನ್ನ ಮಾತ್ರ ಕತ್ತರಿಸಿ ಇಡಬೇಡಿ. ಯಾಕಂದ್ರೆ ಕಟ್ ಮಾಡಿದ ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡೋದ್ರಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಫ್ರಿಡ್ಜ್ ನಲ್ಲಿ ಕೆಟ್ಟ ವಾಸನೆ ಹರಡಿ ಆ ವಾಸನೆಯು ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಇತರ ಆಹಾರ ಪದಾರ್ಥಗಳಿಗೂ ಹರಡುತ್ತದೆ. ಹಾಗೇ ಈರುಳ್ಳಿ ಪೇಸ್ಟ್ ಮಾಡಿ ಹೆಚ್ಚಿನ ದಿನಗಳವರೆಗೆ ಸಂಗ್ರಹಿಸಿದ್ರೆ ಪೋಷಕಾಂಶಗಳ ಮಟ್ಟವೂ ಕಡಿಮೆಯಾಗುತ್ತದೆ. ಸಿಪ್ಪೆ ತೆಗೆದು ಶೇಖರಿಸಿದಾಗ ಹಲವು ಬಗೆಯ ರಾಸಾಯನಿಕಗಳು ಬಿಡುಗಡೆಯಾಗಿ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಹಾಗೇ ತುಂಬಾ ದಿನಗಳವರೆಗೆ ಈರುಳ್ಳಿಯನ್ನ ಫ್ರಿಡ್ಜ್ ನಲ್ಲಿ ಇಟ್ಟಾಗ ಈರುಳ್ಳಿಯೂ ಹಾಳಾಗುತ್ತೆ.